ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ನೀವು ಹೊಸ ಕಾರು ಖರೀದಿ ಪ್ಲ್ಯಾನ್ ಇದ್ರೆ ತುಸು ಕಾಯುವುದು ಒಳಿತು. ಯಾಕೆಂದ್ರೆ ಟೊಯೊಟಾ ಸಂಸ್ಥೆಯು ಭಾರತೀಯ ಮಾರಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಉತ್ತಮ ಕಾರುಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದು, ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವು ಹೊಸ ಕಾರುಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಭಾರತದಲ್ಲಿ ಟೊಯೊಟಾ ನಿರ್ಮಾಣದ ಬಹುತೇಕ ಕಾರುಗಳು ಜನಪ್ರಿಯತೆ ಹೊಂದಿದ್ದರು ಸಹ ಮಧ್ಯಮ ವರ್ಗದ ಗ್ರಾಹಕರು ಅಷ್ಟಾಗಿ ಟೊಯೊಟಾ ಕಾರುಗಳ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಕಾರಣ ಇಟಿಯಾಸ್ ಕಾರುಗಳ ಸರಣಿ ಹೊರತುಪಡಿಸಿ ಇನ್ನುಳಿದ ಬಹುತೇಕ ಕಾರುಗಳು ಪ್ರೀಮಿಯಂ ಸೌಲಭ್ಯಗಳೊಂದಿಗೆ ರೂ.10 ಲಕ್ಷ ಮೇಲ್ಪಟ್ಟ ಬೆಲೆ ಹೊಂದಿರುವುದು ಮಾರಾಟದಲ್ಲಿ ಅಷ್ಟಾಗಿ ಮುಂಚೂಣಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಧ್ಯಮ ಗ್ರಾಹಕರನ್ನು ಸೆಳೆಯುವ ಸಂಬಂಧ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಈ ಬಗ್ಗೆ ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಗೆ ಹೊಸದಾಗಿ ನೇಮಕವಾಗಿ ಬಂದಿರುವ ವ್ಯವಸ್ಥಾಪಕ ನಿರ್ದೇಶಕ ಮಸಾಕಾಜು ಯೊಶಿಮುರಾ ಅವರು ಭಾರತೀಯ ಮಾರುಕಟ್ಟೆಯಲ್ಲಿ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ನಿಟ್ಟಿನಲ್ಲಿ ನಾವು ಕೂಡಾ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಶೇ.70ರಷ್ಟು ಕಾರುಗಳು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಗಳನ್ನು ಹೊಂದಿದ್ದು, ಇದರಲ್ಲಿಯೇ ಮಾರುತಿ ಸುಜುಕಿ ಸಂಸ್ಥೆಯು ಶೇ. 40 ರಷ್ಟು ಪಾಲು ಹೊಂದಿದೆ. ಹೀಗಾಗಿ ಮಾರುತಿ ಸುಜುಕಿ ಕಾರುಗಳಿಗೆ ಪೈಪೋಟಿ ನೀಡಲು ಟೊಯೊಟಾ ಹೊಸ ಯೋಜನೆಗಳನ್ನು ಸಿದ್ದಪಡಿಸಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಹೀಗಾಗಿ ಮಾರುಕಟ್ಟೆಯಲ್ಲಿ ಇಟಿಯಾಸ್ ಲಿವಾ, ಪ್ಲ್ಯಾಟಿನಂ ಇಟಿಯಾಸ್ ಮತ್ತು ಇಟಿಯಾಸ್ ಕ್ರಾಸ್ ಕಾರುಗಳನ್ನು ಹೊರಪಡಿಸಿ ಯುರೋಪ್ ಮಾರುಕಟ್ಟೆಯಲ್ಲಿರುವ ಕೆಲವು ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಇದಲ್ಲದೇ ಟೊಯೊಟಾ ಸಂಸ್ಥೆಯು ಮಾರುತಿ ಸುಜುಕಿ ಸಂಸ್ಥೆಯ ಜೊತೆ ಕೆಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬೃಹತ್ ಪ್ಲ್ಯಾನ್ ರೂಪಿಸಿವೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಹೊಸ ಒಪ್ಪಂದದ ಪ್ರಕಾರ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವುದಷ್ಟೇ ಅಲ್ಲದೇ ಈಗಿರುವ ಸಾಮಾನ್ಯ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಾಯ ಮಾಡುವ ಮಹತ್ವದ ಕಾರ್ಯ ಯೋಜನೆಗೂ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಹೀಗಾಗಿ ಸುಜುಕಿ ಡೀಲರ್ಸ್‌ಗಳಲ್ಲಿ ಟೊಯೊಟಾ ಉತ್ಪನ್ನಗಳನ್ನು ಮತ್ತು ಟೊಯೊಟಾ ಡೀಲರ್ಸ್‌ಗಳಲ್ಲಿ ಸುಜುಕಿ ಕಾರು ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದ್ದು, ಇದು ಕಾರು ಮಾರಾಟದ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಇದರಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರಿನ ಉತ್ಪಾದನಾ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಳ್ಳಲಿರುವ ಟೊಯೊಯಾ ಸಂಸ್ಥೆಯು, ಬಲೆನೊ ಕಾರಿನ ಬ್ಯಾಡ್ಜ್ ಅನ್ನು ಸಹ ತನ್ನ ಹೆಸರಿನಲ್ಲೇ 2019ರ ಜೂನ್ ಅಂತ್ಯಕ್ಕೆ ಮಾರಾಟ ಮಾಡುವುದಾಗಿ ಸಂದರ್ಶನವೊಂದರಲ್ಲಿ ಅಧಿಕೃತವಾಗಿಯೇ ಹೇಳಿಕೊಂಡಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಹೀಗಾಗಿ ಮಾರುತಿ ಸುಜುಕಿ ಜೊತೆಗೂಡಿ ಬಲೆನೊ ಕಾರನ್ನು ಉತ್ಪಾದನೆ ಮಾಡಿ ಮಾರಾಟ ಮಾಡಲಿರುವ ಟೊಯೊಟಾ ಸಂಸ್ಥೆಯು ಇದರ ಜೊತೆ ಜೊತೆಗೆ ತನ್ನ ಸ್ವಂತ ನಿರ್ಮಾಣದ ಅಗ್ಗದ ಬೆಲೆಯ ಕಾರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಿದೆ.

MOST READ: ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡಲು ಬರುತ್ತಿದೆ 9 ಸೀಟರ್ ಕಿಯಾ ಕಾರ್ನಿವಾಲ್

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಮತ್ತಷ್ಟು ವಿಸ್ತರಣೆಯಾಗಲಿದೆ ಬಿಡದಿ ಟೊಯೊಟಾ ಘಟಕ..!

ಸದ್ಯ ಭಾರತದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳನ್ನ ಹೊಂದಿರುವ ಸುಜುಕಿ ಸಂಸ್ಥೆಯು ಹರಿಯಾಣದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಉತ್ಪಾದನಾ ಘಟಕವನ್ನ ಹೊಂದಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಇಲ್ಲದಿರುವುದು ಸುಜುಕಿ ಸಂಸ್ಥೆಗೆ ಕಾರುಗಳ ಸರಬರಾಜು ಒಂದು ಸವಾಲಿನ ವಿಚಾರವೇ ಸರಿ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಹೀಗಿರುವಾಗ ಬೆಂಗಳೂರು ಬಳಿ ಇರುವ ಬಿಡದಿಯಲ್ಲಿ ನೆಲೆಗೊಂಡಿರುವ ಟೊಯೊಟಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಿಂದ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳಾದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿನ ಡೀಲರ್ಸ್‌ಗಳಿಗೆ ಸರಬರಾಜು ಮಾಡಲು ನಿರ್ಧರಿಸಿದೆ.

MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳು..!

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಇದಕ್ಕೆ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಕಳೆದ ನವೆಂಬರ್‌ನಲ್ಲಿ ಬಿಡದಿಗೆ ಭೇಟಿ ನೀಡಿದ್ದ ಸುಜುಕಿ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಕಾರು ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಸೌಲಭ್ಯಗಳನ್ನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

7 ಸಾವಿರ ಕೋಟಿ ಹೂಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಉತ್ಪಾದನೆ ಮಾಡಲು ಸಾಕಷ್ಟು ಸ್ಥಳಾವಕಾಶ ಬೇಕಿದ್ದು, ಇದಕ್ಕಾಗಿ ಟೊಯೊಟಾ ಘಟಕವನ್ನು ವಿಸ್ತರಣೆ ಮಾಡಲು ಸುಜುಕಿ ಸಂಸ್ಥೆಯು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆಗೆ ಒಪ್ಪಿಗೆ ನೀಡಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಜೊತೆಗೆ ಸುಜುಕಿ ಕಾರುಗಳನ್ನು ಉತ್ಪಾದನೆ ಮಾಡಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲಿರುವ ಟೊಯೊಟಾ ಸಂಸ್ಥೆಯು ಸುಜುಕಿ ಸಂಸ್ಥೆಯ ಉದ್ಯೋಗಿಗಳ ಜೊತೆಗೂಡಿ ಕಾರ್ಯನಿರ್ವಹಣೆ ಮಾಡಲಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಇದಕ್ಕೆ ಪ್ರತಿಯಾಗಿ ಸುಜುಕಿ ಸಂಸ್ಥೆಯು ತನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಟೊಯಾಟೊ ಕಾರುಗಳ ಮಾರಾಟಕ್ಕೆ ಅವಕಾಶ ನೀಡಲಿದ್ದು, ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಗೂ ಸಹಕಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಕಾರುಗಳ ಇಂಧನ ಕಾರ್ಯಕ್ಷಮತೆ ಮತ್ತು ಕಾರುಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರುಗಳ ಬಿಡಿಭಾಗಗಳನ್ನು ಸಹ ಒದಗಿಸುವ ಒಪ್ಪಂದಕ್ಕೂ ಉಭಯ ಸಂಸ್ಥೆಗಳು ಮುಂದಾಗಿದ್ದು, ಭಾರತದಲ್ಲಿ ಆರಂಭಗೊಂಡಿರುವ 'ಮೆಕ್ ಇನ್ ಇಂಡಿಯಾ' ಯೋಜನೆ ಅಡಿ ಹೊಸ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿವೆ.

ಕಾರು ಖರೀದಿ ಪ್ಲ್ಯಾನ್ ಇದ್ರೆ ಸ್ವಲ್ಪ ತಡೆಯಿರಿ- ಅಗ್ಗವಾಗಲಿವೆ ಟೊಯೊಟಾ ಕಾರುಗಳು..!

ಒಟ್ಟಿನಲ್ಲಿ ಕಾರು ಉತ್ಪಾದಕ ದಿಗ್ಗಜರು ಇದೀಗ ಒಂದಾಗಿದ್ದು, ಹೊಸ ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲಿವೆ. ಜೊತೆಗೆ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಸಲಿರುವ ಟೊಯೊಟಾ ಸಂಸ್ಥೆಯು ಅಗ್ಗದ ಕಾರುಗಳ ಜೊತೆಗೆ ಮಾರುತಿ ಸುಜುಕಿ ಜೊತೆಗಿನ ಹೊಸ ಒಪ್ಪಂದ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಸುವ ನೀರಿಕ್ಷೆಯಲ್ಲಿದೆ.

Article Published On: Saturday, February 2, 2019, 11:26 [IST]
English summary
Your Favourite Toyota Cars In India Will Soon Become Cheaper — Wait For The New Toyota Baleno. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+