ಮಾರುತಿಯ ಸಿಎನ್‌ಜಿ ತಂತ್ರಜ್ಞಾನವನ್ನು ಬಳಸಲಿದೆ ಟೊಯೊಟಾ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಮಾರುತಿ ಸುಜುಕಿಯ ಸಹಾಯದಿಂದ ಸಿಎನ್‌ಜಿ ತಂತ್ರಜ್ಞಾನದ ಕಾರುಗಳನ್ನು ಪರಿಚಯಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಮಾರುತಿ ಸುಜುಕಿಯ ಸಿಎನ್‍ಜಿ ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.

ಮಾರುತಿ ಸುಜುಕಿ-ಟೊಯೊಟಾ ಮೈತ್ರಿ ಹೊಡಿಕೆಯನ್ನು ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಸುಧಾರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡು ಕಂಪನಿಗಳು ಪರಸ್ಪರ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಎರಡು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ವಾಹನ ತಯಾರಿಕ ಕಂಪನಿಗಳಾಗಿವೆ.

ದೇಶಾದ್ಯಂತ ಮಾಲಿನ್ಯವನ್ನು ಕಡಿಮೆಗೊಳಿಸುವ ಗುರಿಯನ್ನಿಟ್ಟುಕೊಂಡು ಸರ್ಕಾರವು ಹೊಸ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮದ ಗಡುವನ್ನು ಏಪ್ರಿಲ್ 1ಕ್ಕೆ ನಿಗದಿಪಡಿಸಲಾಗಿದೆ.

ಬಿಎಸ್-6 ಮಾಲಿನ್ಯ ನಿಯಮ ಜಾರಿಗೆ ಬರುವುದರಿಂದ ಡೀಸೆಲ್ ಕಾರುಗಳ ಬೇಡಿಕೆಯು ತೀವ್ರವಾಗಿ ಕುಸಿಯುವ ಸಾಧ್ಯತೆಗಳಿವೆ. ಇದರಿಂದಾಗಿ ಟೊಯೊಟಾ ತನ್ನ ಗ್ಲಾಂಝಾ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಬಳೆಕೆಯನ್ನು ಮುಂದುವರೆಸಿತು.

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ಗ್ಯಾಸೋಲಿನ್ ಎಂಜಿನ್‍ಗಳನ್ನು ನವೀಕರಿಸುವ ಮತ್ತು ಬಳಸುವ ಸಾಧ್ಯತೆಗಳಿವೆ. ಡೀಸೆಲ್ ಕಾರುಗಳ ವ್ಯಾಪರದಲ್ಲಿನ ನಷ್ಟವನ್ನು ಸರಿದೂಗಿಸಲು ಟೊಯೊಟಾ ಪರ್ಯಾಯ ಇಂಧನ ಆಯ್ಕೆಯನ್ನು ಹುಡುಕುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯ ಹೊರತಾಗಿಯೂ ತಕ್ಷಣದ ಸಾಧ್ಯತೆಗಳು ಕಡಿಮೆ. ಡೀಸೆಲ್ ಕಾರುಗಳಿಂದ ಉಂಟಾಗುವ ನಷ್ಟವನ್ನು ಅದು ಸರಿದೂಗಿಸಬಹುದು.

ಆದ್ದರಿಂದ ಟೊಯೊಟಾ ತನ್ನ ಪಾಲುದಾರ ಮಾರುತಿ ಸುಜುಕಿಯ ಸಹಾಯದಿಂದ ಸಿಎನ್‍ಜಿ ತಂತ್ರಜ್ಞಾನವನ್ನು ತನ್ನ ಗ್ಲಾಂಝಾ ಕಾರುಗಳಲ್ಲಿ ಪರಿಚಯಿಸುವ ಪ್ರಯತ್ನವನ್ನು ಪ್ರಾರಂಭಿಸಿದೆ. ಮಾತುಕತೆಯನ್ನು ನಡೆಸುತ್ತಿದೆ ಎಂದು ಕೆಲವು ವರದಿಗಳು ಪ್ರಕಟವಾಗಿದೆ. ಟೊಯೊಟಾ ಗ್ಲಾಂಝಾ ಕಾರು, ಮಾರುತಿ ಸುಜುಕಿಯ ಬಲೆನೊದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಹೊಸ ಗ್ಲಾಂಝಾದಲ್ಲಿ ಬಲೆನೊ ಕಾರಿನಲ್ಲಿದ್ದ ಯುನಿಟ್, ವೈಶಿಷ್ಟ್ಯಗಳು ಮತ್ತು ಸ್ಪೆಕ್‍ಗಳನ್ನು ಮುಂದುವರೆಸಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅದೇ ಸಮಯದಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚೋನರ್ ಕಾರುಗಳಲ್ಲಿ ಬಳಸಲಾಗುವ ಡೀಸೆಲ್ ಎಂಜಿನ್‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇದರ ಬೆಲೆಯು ರೂ.3 ಲಕ್ಷದಿಂದ ರೂ.5 ಲಕ್ಷಗಳವರೆಗೆ ಹೆಚ್ಚಾಗುವ ಸಾಧ್ಯತೆಗಳಿವೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಭಾರತದಲ್ಲಿ ಪೆಟ್ರೋಲ್ ಎಂಜಿನ್ ಮತ್ತು ಮೈಲ್ ಹೈಬ್ರಿಡ್ ಮಾದರಿಗಳನ್ನು ಮಾರಾಟ ಮಾಡಲು ಯೋಜಿಸಿದೆ. ಇದರ ಪರಿಣಾಮವಾಗಿ ಟೊಯೊಟಾ ದೇಶಿತ ಮಾರುಕಟ್ಟೆಯಲ್ಲಿ ಪ್ರಾಬಲ್ಯಯವನ್ನು ಸಾಧಿಸಬಹುದು.
Source: ET Auto


Click it and Unblock the Notifications








