ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರೆಸಲಿದೆ ಟೊಯೊಟಾ..!

ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಸಂಸ್ಥೆಯು ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದು, 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳ ಮಾರಾಟಕ್ಕೆ ಚಾಲನೆ ನೀಡುವುದಾಗಿ ಸುಳಿವು ನೀಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದಕ್ಕಾಗಿ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ತರಲಾಗುತ್ತಿದ್ದು, ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತೀಕರಣ ಸಾಧ್ಯವಿಲ್ಲದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವು ಬಂದ್ ಆಗುವುದು ಬಹುತೇಕ ಖಚಿತವಾಗಿದೆ. ಇದರಿಂದ ಅಗ್ಗದ ಬೆಲೆಯ ಡೀಸೆಲ್ ಕಾರುಗಳ ಮಾರಾಟ ಸಂಸ್ಥೆಗಳಿಗೆ ಹೊಸ ನಿಯಮವು ಬಿಸಿತುಪ್ಪವಾಗಿ ಪರಿಣಮಿಸಿದ್ದು, ಟೊಯೊಟಾ ಸಂಸ್ಥೆಯು ಮಾತ್ರ ತನ್ನ ಜನಪ್ರಿಯ ಕಾರುಗಳಲ್ಲಿ ಹೊಸ ನಿಯಮಗಳಿಗೆ ಅನುಗುಣವಾಗಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸುವುದಾಗಿ ಹೇಳಿಕೊಂಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಬಿಎಸ್-6 ಡೀಸೆಲ್ ಎಂಜಿನ್ ಉನ್ನತೀಕರಣದ ಕುರಿತು ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು, ಬಿಎಸ್-6 ಜಾರಿ ನಂತರವೂ ಪೆಟ್ರೋಲ್ ಜೊತೆಗೆ ಹೊಸ ನಿಯಮದ್ವನ ಉನ್ನತೀಕರಣಗೊಂಡ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯು ಮುಂದುವರೆಯಲಿದೆ ಎಂದಿದ್ದಾರೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಸದ್ಯ ಟೊಯಾಟೊ ಸಂಸ್ಥೆಯು 1.4-ಲೀಟರ್, 2.4-ಲೀಟರ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ತನ್ನ ಜನಪ್ರಿಯ ಕಾರುಗಳಲ್ಲಿ ಮಾರಾಟ ಮಾಡುತ್ತಿದ್ದು, ಬಿಎಸ್-6 ನಿಯಮದ್ವಯ ಉನ್ನತೀಕರಣದ ನಂತರ ಈ ಎಂಜಿನ್‌ಗಳು ಮತ್ತಷ್ಟು ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳಲಿವೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಇನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಕಾರುಗಳನ್ನು ಅಭಿವೃದ್ದಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಟೊಯೊಟಾ ಕಂಪನಿಯು ಕಾರುಗಳ ಬೆಲೆಗಳನ್ನು ಸಹ ಏರಿಕೆ ಮಾಡಲಿದೆ. ವರದಿಗಳ ಪ್ರಕಾರ, ಇನೋವಾ ಹಾಗೂ ಫಾರ್ಚೂನರ್ ಕಾರುಗಳ ಬೆಲೆಯು ರೂ. 2 ಲಕ್ಷದಿಂದ ರೂ.5 ಲಕ್ಷಗಳವರೆಗೆ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಕಾರುಗಳ ಆಯ್ಕೆ ಹೆಚ್ಚಿಸುತ್ತಿರುವ ಟೊಯೊಟಾ ಸಂಸ್ಥೆಯು ಬಿಎಸ್-6 ನಿಯಮ ಜಾರಿಯನ್ನು ಸವಾಲಾಗಿ ಸ್ವಿಕರಿಸಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ವಾಹನಗಳನ್ನು ಹೊಸ ನಿಯಮದಂತೆ ಉನ್ನತಿಕರಿಸುತ್ತಿದ್ದು, ಟೊಯೊಟಾ ಕೂಡಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಸದ್ಯಕ್ಕೆ ಎರಡು ಡೀಸೆಲ್ ಹಾಗೂ ಒಂದು ಪೆಟ್ರೋಲ್ ಸೇರಿದಂತೆ ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆನ್‌ರೋಡ್ ಬೆಲೆಗಳ ಪ್ರಕಾರ ಆರಂಭಿಕವಾಗಿ ರೂ. 18.84 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.29.71 ಲಕ್ಷ ಬೆಲೆ ಹೊಂದಿದೆ.

MOST READ:ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಹಾಗೆಯೇ ಫಾರ್ಚೂನರ್ ಎಸ್‌ಯುವಿ ಮಾದರಿಯು 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ಆರಂಭಿಕ ರೂ. 35.31 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 42.43 ಲಕ್ಷ ಬೆಲೆ ಹೊಂದಿದೆ.

MOST READ:ಕಿಯಾ ಸೆಲ್ಟೊಸ್ ಬಿಡುಗಡೆ- ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು..!

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಹೀಗಾಗಿ ಬಿಎಸ್-6 ನಿಯಮ ಜಾರಿ ನಂತರ ಹೊಸ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ರೂ.2 ಲಕ್ಷದಿಂದ ರೂ.5 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಅತ್ಯುತ್ತಮ ಕಾರ್ ಎಂಜಿನ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿವೆ.

MOST READ:ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಬಿಎಸ್-6 ಜಾರಿ ನಂತರವೂ ಡೀಸೆಲ್ ಎಂಜಿನ್ ಕಾರು ಮಾರಾಟ ಮುಂದುವರಿಸಲಿದೆ ಟೊಯೊಟಾ..!

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರುಗಳಿಗೆ ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಎಂಜಿನ್ ಉನ್ನತಿಕರಿಸಬೇಕು ಇಲ್ಲವೇ ಮಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Article Published On: Monday, August 26, 2019, 17:22 [IST]
English summary
Toyota To Sell BS-VI Compliant Diesel Models After April Deadline Next Year.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+