ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಅನುಸಾರ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನವೀಕೃತ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಟೊಯೊಟಾ ಸಹ ತನ್ನ ಜನಪ್ರಿಯ ಕಾರು ಮಾದರಿಗಳನ್ನು ಹೊಸ ನಿಯಮ ಅನುಸಾರ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಮೊದಲ ಹಂತದಲ್ಲಿ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಟೊಯೊಟಾ ಸಂಸ್ಥೆಯು ಹೊಸ ಕಾರು ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. 2020ರ ಜನವರಿ ಕೊನೆಯಲ್ಲಿ ಹೊಸ ಎಂಜಿನ್ ಪ್ರೇರಿತ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಬಿಡುಗಡೆಯಾಗಲಿದ್ದು, ಹೊಸ ಎಂಜಿನ್‌ನಿಂದಾಗಿ ದುಬಾರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಸುದ್ದಿ ಮೂಲಗಳ ಪ್ರಕಾರ, 2020ರ ಇನೋವಾ ಕ್ರಿಸ್ಟಾದಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹೊರತುಪಡಿಸಿ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಕೂಡಾ ಬಿಡುಗಡೆಯಾಗಲಿದ್ದು, ಫಾರ್ಚೂನರ್‌ನಲ್ಲೂ ಕೂಡಾ ಹೊಸ ಎಂಜಿನ್ ಆಯ್ಕೆ ನೀಡುವ ನೀರಿಕ್ಷೆಯಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಬಿಎಸ್-6 ನಿಯಮ ಪಾಲನೆಗಾಗಿ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಕೈಬಿಡುತ್ತಿರುವ ಕಾರು ಉತ್ಪಾದನಾ ಸಂಸ್ಥೆಗಳು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್‌ ಎಂಜಿನ್ ಆಯ್ಕೆಯತ್ತ ಮುಖ ಮಾಡುತ್ತಿದ್ದು, ಟೊಯೊಟಾ ಕೂಡಾ ಇದೇ ಮೊದಲ ಬಾರಿಗೆ ಇನೋವಾ ಕ್ರಿಸ್ಟಾದಲ್ಲೂ ಹೈಬ್ರಿಡ್ ವರ್ಷನ್ ಪರಿಚಯಿಸುತ್ತಿದೆ. ಆದರೆ ಫಾರ್ಚೂನರ್ ಎಸ್‌ಯುವಿ ಕಾರಿನ ಎಂಜಿನ್ ಆಯ್ಕೆ ಬಗೆಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಟೊಯೊಟಾ ಸಂಸ್ಥೆಯು ಈಗಾಗಲೇ ಹೈಬ್ರಿಡ್ ತಂತ್ರಜ್ಞಾನದಲ್ಲಿ ಈಗಾಗಲೇ ಮುಂಚೂಣಿ ಸಾಧಿಸುತ್ತಿದ್ದು, ಕ್ಯಾಮ್ರಿ ಸೆಡಾನ್ ಆವೃತ್ತಿಯಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಇದೀಗ ಬಿಎಸ್-6 ನಿಯಮದಂತೆ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಟೊಯೊಟಾ ಸಂಸ್ಥೆಯು ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಪರಿಚಯಿಸುವ ಸಾಧ್ಯತೆಗಳಿದ್ದು, 2.7-ಲೀಟರ್ ಎಂಜಿನ್‌ನಲ್ಲಿಯೇ ಹೈಬ್ರಿಡ್ ಆಯ್ಕೆಯನ್ನು ನೀಡುತ್ತಾ ಅಥವಾ ಹೊಸ ಎಂಜಿನ್ ಬಿಡುಗಡೆ ಮಾಡಲಿದೆಯಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಹೊಸ ಕಾರಿನಲ್ಲಿ ಅಗತ್ಯ ಬದಲಾವಣೆ ಅವಶ್ಯಕತೆಯಿದ್ದು, ಗ್ರಾಹಕರ ಮತ್ತೊಮ್ಮೆ ಮುಂಚೂಣಿ ಸಾಧಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಇನ್ನು ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರುಗಳಿಗೆ ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಎಂಜಿನ್ ಉನ್ನತಿಕರಿಸಬೇಕು ಇಲ್ಲವೇ ಮಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಸದ್ಯ ಇನೋವಾ ಕ್ರಿಸ್ಟಾ ಕಾರು ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ್ದು, ಗ್ರಾಹಕರ ಬೇಡಿಕೆಯಂತೆ 2.4-ಲೀಟರ್ ಡೀಸೆಲ್, 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.88 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.65 ಲಕ್ಷ ಬೆಲೆ ಹೊಂದಿದ್ದು, ಬಿಎಸ್-6 ಎಂಜಿನ್ ಜೋಡಣೆಯ ನಂತರ ಮತ್ತಷ್ಟು ದುಬಾರಿಯಾಗಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಹಾಗೆಯೇ ಫಾರ್ಚೂನರ್ ಕಾರು 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ. 27.83 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 33.85 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಬಿಎಸ್-6 ಎಂಜಿನ್ ನಂತರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳು ಬೆಲೆಯು ಪೆಟ್ರೋಲ್ ಮಾದರಿಗಳಲ್ಲಿ ರೂ.50 ಸಾವಿರದಿಂದ ರೂ.80 ಸಾವಿರ ದುಬಾರಿಯಾದಲ್ಲಿ, ಡೀಸೆಲ್ ಎಂಜಿನ್ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಡುಗಡೆಗೆ ಸಿದ್ದವಾದ ನವೀಕೃತ ಟೊಯೊಟಾ ಫಾರ್ಚೂನರ್

ಬಿಎಸ್-6 ಡೀಸೆಲ್ ಎಂಜಿನ್ ಉನ್ನತೀಕರಣದ ಕುರಿತು ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು, ಬಿಎಸ್-6 ಜಾರಿ ನಂತರವೂ ಪೆಟ್ರೋಲ್ ಜೊತೆಗೆ ಹೊಸ ನಿಯಮದ್ವನ ಉನ್ನತೀಕರಣಗೊಂಡ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯು ಮುಂದುವರೆಯಲಿದೆ ಎಂದಿದ್ದಾರೆ.

Most Read Articles

Kannada
Read more on ಟೊಯೊಟಾ toyota
English summary
Toyota Fortuner SUV to be launched next year. Read more in Kannada.
Story first published: Thursday, December 26, 2019, 9:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X