ಇದೇ ತಿಂಗಳು 12ರಂದು ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚೂನರ್ ಟಿಡಿಆರ್ ಸ್ಪೋರ್ಟಿವೊ
ಟೊಯೊಟಾ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಸ್‍ಯುವಿ ಆವೃತ್ತಿಯಾದ ಫಾರ್ಚೂನರ್ ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರ ಬೇಡಿಕೆ ಮೇರೆಗೆ ಫಾರ್ಚೂನರ್ ಟಾಪ್ ಎಂಡ್ ಆವೃತ್ತಿಯಲ್ಲಿ ವಿನೂತನ ತಂತ್ರಜ್ಞಾನ ಪ್ರೇರಿತ ಸ್ಪೋರ್ಟಿ ವರ್ಷನ್ ಒಂದನ್ನು ಬಿಡುಗಡೆಗಾಗಿ ಸಿದ್ದಗೊಳಿಸಿದೆ.

ಇದೇ ತಿಂಗಳು 12ಕ್ಕೆ ಹೊಸ ಫಾರ್ಚೂನರ್ ಟಿಡಿಆರ್ ಸ್ಪೋರ್ಟಿವೊ ಆವೃತ್ತಿಯು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಟೊಯೊಟಾ ಸಂಸ್ಥೆಯು ತನ್ನ ರೇಸಿಂಗ್ ಡೆವೆಲೆಪ್ಮೆಂಟ್ ತಂಡದೊಂದಿಗೆ ವಿಶೇಷ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಫಾರ್ಚೂನರ್‌ಗಿಂತಲೂ ಹೆಚ್ಚಿನ ಮಟ್ಟದ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ.

ಟೊಯೊಟಾ ಫಾರ್ಚೂನರ್ ಟಿಆರ್‍ಡಿ ಸ್ಪೋರ್ಟಿವೊ ಕಾರು ಈಗಾಗಲೇ ಥಾಯ್ಲಾಂಡ್ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಯಾಗುತ್ತಿರುವ ಹೊಸ ಕಾರು ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಟೊಯೊಟಾ ಫಾರ್ಚೂನರ್ ಟಿಆರ್‍ಡಿ ಸ್ಪೋರ್ಟಿವೊ ಕಾರು ಮುಂಭಾಗದ ಹೊಸ ಗ್ರಿಲ್‍ಗೆ ಕ್ರೋಮ್ ಪಡೆದುಕೊಂಡಿದ್ದು, ಕಾರಿನ ಮುಂಭಾಗ, ಹಿಂಭಾಗ ಮತ್ತು ಬಾಡಿ ಎಡ್ಜ್‌ಗಳಲ್ಲಿ ಟಿಡಿಆರ್ ಸ್ಪೋರ್ಟಿವೊ ಬ್ಯಾಡ್ಜ್ ಹೊಸ ಲುಕ್ ನೀಡಿದೆ.

ಹಾಗೆಯೇ ಹೊಸ ಕಾರು ಸಂಪೂರ್ಣವಾಗಿ ಬಿಳಿ ಬಣ್ಣದಲ್ಲಿ ಲಭ್ಯವಿರಲಿದ್ದು, ಕಪ್ಪು ಬಣ್ಣದ ಟಾಪ್ ರೂಫ್ ಅನ್ನು ಹೊಂದಿರಲಿದೆ. ಕಾರಿನ ಒಳಭಾಗವನ್ನು ವಿಶೇಷವಾಗಿ ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಬಾಗಿಲುಗಳಲ್ಲಿಯೂ ಸಹ ಟಿಆರ್‍ಡಿ ಬ್ಯಾಡ್ಜಿಂಗ್ ಅನ್ನು ಕಾಣಬಹುದಾಗಿದೆ.ಕಾರನ್ನು ಸ್ಟಾರ್ಟ್ ನಂತರ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈನಲ್ಲಿ ಟಿಆರ್‍ಡಿ ಸ್ಪೋರ್ಟಿವೊ ಆನಿಮೇಷನ್ ಗೋಚರಿಸಲಿದ್ದು, ಕೀ ಫೋಬ್‍ನ ಮೇಲೆಯೂ ಕೂಡಾ ನೀವು ಟಿಆರ್‍ಡಿ ಟ್ರಿಟ್ಮೆಂಟ್ ಅನ್ನು ಕಾಣಬಹುದಾಗಿದೆ.

ಫಾರ್ಚುನರ್ ಸ್ಪೋರ್ಟಿವೊ ಕಾರಿನಲ್ಲಿ ಜೆಬಿಎಲ್‍ನಿಂದ ಎರವಲು ಪಡೆಯಲಾದ 11-ಸ್ಪೀಕರ್ ಆಡಿಯೋ ಸಿಸ್ಟಂ, ಟಿಆರ್‍ಡಿ ಸಸ್ಷೆಷನ್, ಅಗಲವಾದ ಡಿಸ್ಕ್ ಬ್ರೇಕ್, 20-ಇಂಚಿನ ಅಲಾಯ್ ವ್ಹೀಲ್ಸ್, ಕೆಂಪು ಮತ್ತು ಕಪ್ಪು ಬಣ್ಣದ ಸ್ಟಿಚಿಂಗ್ ಪಡೆದ ಸೀಟ್‍ಗಳು, ಕಾರ್ಬನ್ ಕೆವ್ಲರ್ ಟ್ರಿಮ್ ಅನ್ನು ಗೇರ್ ಕ್ನಾಬ್‍ನ ಮೇಲೆ ಮತ್ತು ಸ್ಟೀರಿಂಗ್‍ನ ಮೇಲೆ ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚೂನರ್ ಟಿಆರ್‍ಡಿ ಸ್ಪೋರ್ಟಿವೊ ಕಾರು 2.8 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 174 ಬಿಹೆಚ್‍ಪಿ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಬಹುದು ಎನ್ನಲಾಗಿದೆ.

ಬೆಲೆ ಮತ್ತು ಬಿಡುಗಡೆಯ ಅವಧಿ
ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚುನರ್ ಟಿಆರ್‍ಡಿ ಸ್ಪೋರ್ಟಿವೊ ಕಾರು 2WD ಮತ್ತು 4WD ಚಾಲಾನಾ ತಂತ್ರಜ್ಞಾನದೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ. 37 ಲಕ್ಷದ ಬೆಲೆಯಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇನ್ನು ಸಾಧಾರಣ ಟೊಯೊಟಾ ಫಾರ್ಚೂನರ್ ಕಾರು ಬಿಡುಗಡೆಗೊಂಡು ಸುಮಾರು 10 ವರ್ಷಗಳಾದರೂ ಇಂದಿಗೂ ಸಹ ಎಸ್‌ಯುವಿ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾವನನ್ನು ಪಡೆದುಕೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ 21,141 ಯೂನಿಟ್ ಫಾರ್ಚೂನರ್ ಕಾರುಗಳು ಮಾರಾಟವಾಗಿದ್ದು, ವಿಶೇಷ ವಿನ್ಯಾಸದ 7 ಸೀಟರ್ ಸೌಲಭ್ಯದೊಂದಿಗೆ ಭಾರೀ ಬೇಡಿಕೆ ಪಡೆದುಕೊಂಡಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಹೀಗಾಗಿಯೇ ಗ್ರಾಹಕರ ಬೇಡಿಕೆಯೆಂತೆ ಟಾಪ್ ಎಂಡ್ ಫಾರ್ಚೂನರ್‌ನಲ್ಲಿ ಸ್ಪೋರ್ಟಿ ವರ್ಷನ್ ಆವೃದ್ದಿಗೊಳಿಸಿ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಎಂಟ್ರಿ ಲೆವಲ್ ಬಿಎಂಡಬ್ಯು, ಮರ್ಸಿಡಿಷ್ ಎಸ್‌ಯುವಿ ಮಾದರಿಗಳಿಗೆ ಈ ಹೊಸ ಕಾರು ಭರ್ಜರಿ ಪೈಪೋಟಿ ನೀಡಲಿದೆ.


Click it and Unblock the Notifications