ಡೀಲರ್‍ನ ಬಳಿ ಕಾಣಿಸಿಕೊಂಡ ಡ್ಯುಯಲ್ ಟೋನ್ ಟೊಯೊಟಾ ಗ್ಲಾಂಝಾ
ಟೊಯೊಟಾ ಗ್ಲಾಂಝಾ ಈ ಕಾರನ್ನು ನೋಡಿದ ತಕ್ಷಣವೇ ನೀನಪಾಗೋದು ಮಾರುತಿ ಸುಜುಕಿ ಬಲೆನೊ ಕಾರು. ಏಕೆಂದರೆ ಗ್ಲಾಂಝಾ ಕಾರು ಮಾರುತಿ ಸುಜುಕಿ ಬೆಲೆನೊ ಕಾರಿಗೆ ರೀ ಬ್ಯಾಡ್ಜಿಂಗ್ ಮಾಡಿ ಟೊಯೊಟಾ ಸಂಸ್ಥೆಯವರು ಬಿಡುಗಡೆ ಮಾಡಲಾಗಿದೆ. ಆದರೂ ಸಹ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೋ ಕಾರನ್ನೆ ಹೆಚ್ಚಾಗಿ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ.

ಸಾಧಾರಣ ಬಣ್ಣ ಹೊಂದಿರುವ ಕಾರುಗಳಿಗಿಂತಲೂ ಗ್ರಾಹಕರೂ ಇದೀಗ ಡ್ಯುಯಲ್ ಟೋನ್ ಬಣ್ಣವನ್ನು ಪಡೆದ ಕಾರುಗಳಾನ್ನು ಕೊಳ್ಳಲು ಬಯಸುತ್ತಿದ್ದು, ಗ್ರಾಹಕರ ಒತ್ತಾಯದ ಮೆರೆಗೆ ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳಿಗೆ ಡ್ಯುಯಲ್ ಟೋನ್ ಬಣ್ಣವನು ನೀಡಿ ಮಾರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಟಿಕೆಎಂ ಎಂಬ ಟೊಯೊಟಾ ಡೀಲರ್ ಗ್ಲಾಂಝಾ ಕಾರಿಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಿ ಪ್ರದರ್ಶನಕ್ಕಿಟ್ಟಿದ್ದಾರೆ.

ಡೀಲರ್‍ನ ಬಳಿ ಕಾಣಿಸಿಕೊಂಡ ಡ್ಯುಯಲ್ ಟೋನ್ ಬಣ್ಣವನ್ನು ಪಡೆದ ಟೊಯೊಟಾ ಗ್ಲಾಂಝಾ ಕಾರಿಗೆ ಗ್ಲಾಂಝಾ ಸ್ಪೋರ್ಟ್ ಕಾರು ಎಂದು ಡೀಲರ್ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕ ಹಾಗೆ ಗ್ಲಾಂಝಾ ಕಾರನ್ನು ಸ್ಪೋರ್ಟಿ ಲುಕ್ ಅನ್ನು ಹೊಂದುವ ಹಾಗೆ ಡ್ಯುಯಲ್ ಟೋನ್ ಬಣ್ಣವನ್ನು ಡೀಲರ್‍ಗಳು ನೀಡಿದ್ದಾರೆ.

ಚಿತ್ರಗಳನ್ನು ನೋಡಿದ ತಕ್ಷಣವೇ ಕೇಫ್ ವೈಟ್ ಬಣ್ಣದಲ್ಲಿರುವ ಗ್ಲಾಂಝಾ ಕಾರಿನ ರೂಫ್, ರಿಯರ್ ಸ್ಪಾಯ್ಲರ್, ಫಾಗ್ ಲ್ಯಾಂಪ್ಸ್ ಹೌಸಿಂಗ್, ಔಟ್‍ಸೈಡ್ ರಿಯರ್ ವ್ಯೂ ಮಿರರ್‍ಗಳಿಗೆ ಚೆರ್ರಿ ರೆಡ್ ಬಣ್ಣವನ್ನು ನೀಡಿ, ಡ್ಯುಯಲ್ ಟೋನ್ ಬಣ್ಣವನ್ನು ಪಡೆದ ಟೊಯೊಟಾ ಗ್ಲಾಂಝಾ ಕಾರಿನಂತೆ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ರೀತಿಯಾದ ಡ್ಯುಯಲ್ ಟೋನ್ ಬಣ್ಣಕ್ಕಾಗಿ ಡೀಲರ್ ರೂ. 20,000 ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಟೊಯೊಟಾ ಗ್ಲಾಂಝಾ ಬೆಲೆ
ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಆವೃತ್ತಿಯನ್ನೇ ಕೆಲವು ತಾಂತ್ರಿಕ ಸೌಲಭ್ಯಗಳ ಬದಲಾವಣೆಗಳೊಂದಿಗೆ ಮರುನಾಮಕರಣಗೊಳಿಸಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ಗ್ಲಾಂಝಾ ಕಾರು ಸಾಕಷ್ಟು ಆಕರ್ಷಣೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7,21,900ಕ್ಕೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮಾರ್ಥ್ಯ
ಗ್ಲಾಂಝಾ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಮ್ಯಾನುವಲ್ ಆವೃತ್ತಿಯು 89.7 ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಎಂಟಿ ಮಾದರಿಯು 82-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಎರಡು ಆವೃತ್ತಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯಾದ ಜಿ ಮ್ಯಾನುವಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀ-ಅಯಾನ್ (66 ಕಿಲೋ ವ್ಯಾಟ್) ಬ್ಯಾಟರಿ ಅಳವಡಿಸುವ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದೆ.

ಟೊಯೊಟಾ ಸಂಸ್ಥೆಯು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಜಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ವಿ ಆವೃತ್ತಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 19.59 ಮತ್ತು ಸಿವಿಟಿ ಮಾದರಿಯು 21.01 ಮೈಲೇಜ್ ನೀಡುತ್ತದೆ.

ಹೊಸ ಕಾರಿನ ವೈಶಿಷ್ಟ್ಯತೆಗಳು
ಗ್ಲಾಂಝಾ ಕಾರು ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್, ಆಟೋ ಹೆಡ್‌ಲ್ಯಾಂಪ್, ಫಾಲೋ ಮೀ ಕಾರ್ ಫಂಕ್ಷನ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ರಿಯರ್ ಕಾಂಬಿನೇಷನ್ ಟೈಲ್‌ಗೇಟ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಕಾರಿನ ಒಳಾಂಗಣ ವಿನ್ಯಾಸ
ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಪ್ಲೇ ಕಾಸ್ಟ್, ಟಚ್ ಸ್ಕ್ರೀನ್ ಆಡಿಯೋ, 4-ಸ್ಪೀಕರ್ಸ್‌ಗಳು, ಸ್ಮಾರ್ಟ್ ಫೋನ್ ಕನೆಕ್ಟ್(ಆ್ಯಪಲ್ ಕಾರ್ ಪ್ಲೇ/ಅಂಡ್ರಾಯಿಡ್ ಆಟೋ), ನ್ಯಾವಿಗೇಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲರ್, ವೈಸ್ ಕಮಾಂಡ್, ಮುಂಭಾಗದ ಸೀಟುಗಳಲ್ಲಿ ಆರ್ಮ್ ರೆಸ್ಟ್ ಮತ್ತು ಲಗೇಜ್ ರೂಂ ಬಳಿ ಲೈಟಿಂಗ್ ಸೌಲಭ್ಯ ಹೊಂದಿದೆ.

ಹಾಗೆಯೇ ಹೊಸ ಕಾರಿನಲ್ಲಿ ಚಾಲಕ ಸೇರಿ ಐದು ಜನ ಅರಾಮಾದಾಯಕವಾಗಿ ಪ್ರಯಾಣಿಸುವ ಹಾಗೆ ಆಸನ ಸೌಲಭ್ಯವಿದ್ದು, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, 60:40 ಅನುಪಾತದಲ್ಲಿ ವಿಭಜಿಸಬಹುದಾದ ಹಿಂಬದಿ ಆಸನಗಳು, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ORVM, ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೋಡಿಸಲಾಗಿದೆ.

ಸುರಕ್ಷಾ ವೈಶಿಷ್ಟ್ಯತೆಗಳು
ಗ್ಲಾಂಝಾ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷಾ ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಟೆಕ್ ಬಾಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ನೀಡಲಾಗಿದೆ.

ಗ್ಲಾಂಝಾ ಖರೀದಿ ಮೇಲೆ ಭರ್ಜರಿ ವಾರಂಟಿ
ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್ ಗ್ಲಾಂಝಾ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಸೌಲಭ್ಯವನ್ನು ಘೋಷಣೆ ಮಾಡಿದ್ದು, 3 ವರ್ಷದ ಅವಧಿಗೆ ಇಲ್ಲವೇ 1 ಲಕ್ಷ ಕಿ.ಮಿ ರನ್ನಿಂಗ್ ಮೇಲೆ ವಾರಂಟಿಯನ್ನು ಆಯ್ಕೆಮಾಡಬಹುದಾಗಿದೆ.


Click it and Unblock the Notifications