ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ರೀ ಬ್ಯಾಡ್ಜ್ ಆಧಾರದ ಮೇಲೆ ಮಾರುತಿ ಸುಜುಕಿಯ ಬಲೆನೊ ಕಾರನ್ನು ಗ್ಲಾಂಝಾ ಹೆಸರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟ ಮಾಡುತ್ತಿರುವ ಟೊಯೊಟಾ ಸಂಸ್ಥೆಯು ಹೊಸ ಕಾರಿನ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆ ಮೇರೆಗೆ ಮ್ಯಾನುವಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಕಳೆದ ಜೂನ್ ಆರಂಭದಲ್ಲಿ ಬಿಡುಗಡೆಗೊಂಡಿದ್ದ ಗ್ಲಾಂಝಾ ಕಾರು ಜಿ ಮತ್ತು ವಿ ಎನ್ನುವ ಎರಡು ಆವೃತ್ತಿಗಳಲ್ಲಿ ಮಾತ್ರ ಬಿಡುಗಡೆಗೊಂಡಿದ್ದಲ್ಲದೇ ಎರಡು ಆವೃತ್ತಿಗಳು ಸಹ ಪೆಟ್ರೋಲ್ ಎಂಜಿನ್‌ನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದವು. ಇದೀಗ ಮತ್ತೊಂದು ಆರಂಭಿಕ ಆವೃತ್ತಿಯ ಮೂಲಕ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದ್ದು, ಜಿ ವೆರಿಯೆಂಟ್‌ನಲ್ಲಿ ಹೊಸ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಹೊಸ ಗ್ಲಾಂಝಾ ಜಿ ಮ್ಯಾನುವಲ್ ಆವೃತ್ತಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.97 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹೊಸ ಕಾರಿನಲ್ಲಿ ಸ್ಮಾರ್ಟ್ ಹೈಬ್ರಿಡ್ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಆದರೆ ಈ ಮೊದಲಿನ ಜಿ ಮತ್ತು ವಿ ವೆರಿಯೆಂಟ್‌ಗಳ ಆಟೋ ಮ್ಯಾಟಿಕ್ ಆವೃತ್ತಿಯಲ್ಲಿ ಸ್ಮಾರ್ಟ್ ಹೈಬ್ರಿಡ್ ಸೌಲಭ್ಯ ಮುಂದುವರಿಸಲಾಗಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಗ್ಲಾಂಝಾ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಮ್ಯಾನುವಲ್ ಆವೃತ್ತಿಯು 89.7 ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಎಂಟಿ ಮಾದರಿಯು 82-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಎರಡು ಆವೃತ್ತಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯಾದ ಜಿ ಮ್ಯಾನುವಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀ-ಅಯಾನ್ (66 ಕಿಲೋ ವ್ಯಾಟ್) ಬ್ಯಾಟರಿ ಅಳವಡಿಸುವ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದೆ. ಇರಲ್ಲಿ ಜಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ವಿ ಆವೃತ್ತಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್‌ಗೆ 19.59 ಮತ್ತು ಸಿವಿಟಿ ಮಾದರಿಯು 21.01 ಮೈಲೇಜ್ ನೀಡುತ್ತದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಗ್ಲಾಂಝಾ ಕಾರು ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್, ಆಟೋ ಹೆಡ್‌ಲ್ಯಾಂಪ್, ಫಾಲೋ ಮೀ ಕಾರ್ ಫಂಕ್ಷನ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ರಿಯರ್ ಕಾಂಬಿನೇಷನ್ ಟೈಲ್‌ಗೇಟ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಹಾಗೆಯೇ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಪ್ಲೇ ಕಾಸ್ಟ್, ಟಚ್ ಸ್ಕ್ರೀನ್ ಆಡಿಯೋ, 4-ಸ್ಪೀಕರ್ಸ್‌ಗಳು, ಸ್ಮಾರ್ಟ್ ಫೋನ್ ಕನೆಕ್ಟ್(ಆ್ಯಪಲ್ ಕಾರ್ ಪ್ಲೇ/ಅಂಡ್ರಾಯಿಡ್ ಆಟೋ), ನ್ಯಾವಿಗೇಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲರ್, ವೈಸ್ ಕಮಾಂಡ್, ಮುಂಭಾಗದ ಸೀಟುಗಳಲ್ಲಿ ಆರ್ಮ್ ರೆಸ್ಟ್ ಮತ್ತು ಲಗೇಜ್ ರೂಂ ಬಳಿ ಲೈಟಿಂಗ್ ಸೌಲಭ್ಯ ಹೊಂದಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಜೊತೆಗೆ ಪುಶ್ ಸ್ಮಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, 60:40 ಅನುಪಾತದಲ್ಲಿ ವಿಭಜಿಸಬಹುದಾದ ಹಿಂಬದಿ ಆಸನಗಳು, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ORVM, ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೋಡಿಸಲಾಗಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಗ್ಲಾಂಝಾ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷಾ ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಟೆಕ್ ಬಾಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ನೀಡಲಾಗಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಗ್ಲಾಂಝಾ ಖರೀದಿ ಮೇಲೆ ಭರ್ಜರಿ ವಾರಂಟಿ

ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್ ಗ್ಲಾಂಝಾ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಸೌಲಭ್ಯವನ್ನು ಘೋಷಣೆ ಮಾಡಿದ್ದು, 3 ವರ್ಷದ ಅವಧಿಗೆ ಇಲ್ಲವೇ 1 ಲಕ್ಷ ಕಿ.ಮಿ ರನ್ನಿಂಗ್ ಮೇಲೆ ವಾರಂಟಿಯನ್ನು ಆಯ್ಕೆಮಾಡಬಹುದಾಗಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಇನ್ನು ಗ್ಲಾಂಝಾ ಕಾರು ಮಾದರಿಯು ಒಟ್ಟು ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಕೆಫೆ ವೈಟ್, ಸ್ಪೋರ್ಟಿನ್ ರೆಡ್, ಇನ್ಸ್ಟಾ ಬ್ಲ್ಯೂ, ಗೇಮಿಂಗ್ ಗ್ರೇ ಮತ್ತು ಸಿಲ್ಪರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಟೊಯೊಟಾ ಗ್ಲಾಂಝಾ ಜಿ ವೆರಿಯೆಂಟ್‌ನಲ್ಲಿ ಮ್ಯಾನುವಲ್ ಆವೃತ್ತಿ ಬಿಡುಗಡೆ

ಈ ಮೂಲಕ ಹ್ಯಾಚ್‌ಬ್ಯಾಕ್ ಕಾರುಗಳ ಆಯ್ಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಗ್ಲಾಂಝಾ ಕಾರು ಟೊಯೊಟಾ ಸಂಸ್ಥೆಗೆ ಅಷ್ಟೇ ಅಲ್ಲದೇ ಮಾರುತಿ ಸಂಸ್ಥೆಗೂ ಭರ್ಜರಿ ಲಾಭ ತಂದುಕೊಡುತ್ತಿದ್ದು, ಮುಂಬರುವ ದಿನಗಳಲ್ಲಿ ವಿಟಾರಾ ಬ್ರೆಝಾ ಸೇರಿದಂತೆ ಟೊಯೊಟಾ ಕಾರುಗಳು ಸಹ ಮಾರುತಿ ಸುಜುಕಿ ಹೆಸರಿನಲ್ಲಿ ಬಿಡುಗಡೆಗಾಗಿ ಸಿದ್ದವಾಗುತ್ತಿವೆ.

More from DriveSpark

Article Published On: Saturday, October 5, 2019, 11:35 [IST]
English summary
Toyota has launched new base variant of Glanza in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+