ಟೊಯೊಟಾ ಗ್ಲಾಂಝಾ ಬಂದ್ರೂನು ಮಾರುಕಟ್ಟೆಯಲ್ಲಿ ಬಲೆನೊ ಕಾರಿನದ್ದೆ ಹವಾ
ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಜೊತೆಗೂಡಿ ಇದೇ ಜೂನ್ 6ರಂದು ತಮ್ಮ ಹೊಸ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಟೊಯೊಟಾ ಗ್ಲಾಂಝಾ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ ಸಂಗತಿ ನಮಗೆಲ್ಲರಿಗು ತಿಳಿದಿದ್ದೆ.

ಆದರೆ ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಹೊಂದು, ರೀ ಬ್ಯಾಡ್ಜಿಂಗ್‍ನೊಂದಿಗೆ ದೊರೆಯುತ್ತಿದೆ. ಮಾರುತಿ ಸುಜುಕಿ ಬಲೆನೊ ಕಾರುಗಳು ಪ್ರೀಮಿಯಂ ಹ್ಯಾಚ್‍ಬ್ಯಾಕ್‍ಗಳ ಸರಣಿಯಲ್ಲಿ ಪ್ರತೀ ತಿಂಗಳು ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದ್ದೆ, ಗ್ಲಾಂಝಾ ಕಾರಿಗೆ ಅಷ್ಟು ಬೇಡಿಕೆ ಇಲ್ಲವೆಂದು ವರದಿಗಳು ಹೇಳುತ್ತಿದೆ.

ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಕಾರಿಗಿಂತಲೂ ಕಡಿಮೆ ಬೆಲೆ ಇದ್ದರೂ ಸಹ, ಮಾರಾಟ ಸಂಖ್ಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಮಾರುತಿ ಸುಜುಕಿ ಸಂಸ್ಥೆಯು ಪ್ರತೀ ತಿಂಗಳು ಸುಮಾರು 15000 ಬಲೆನೊ ಕಾರುಗಳು ಮಾರಾಟವಾಗುತ್ತಿದ್ದರೆ, ಇನ್ನು ಬಲೆನೊ ಮಾತ್ರ ಕೇವಲ 2000 ಯೂನಿಟ್‍ನಲ್ಲಿ ಮಾರಾಟವಾಗುತ್ತಿದೆ.

ಇಲ್ಲಿ ಟೊಯೊಟಾ ಸಂಸ್ಥೆಯು ಮಾರುತಿ ಸುಜುಕಿಯೊಂದಿಗೆ ಮಾರಾಟದಲ್ಲಿ ಪೈಪೋಟಿ ನೀಡುತ್ತಿದೆ ಅಂತಲ್ಲ. ಏಕಂದರೆ ಟೊಯೊಟಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಗ್ಲಾಂಝಾ ಕಾರಿಗೆ ದೊರೆಯುತ್ತಿರುವ ಬೇಡಿಕೆಯಿಂಡಾಗಿ ಖುಷಿಯಾಗಿದೆ. ಟೊಯೊಟಾ ಸಂಸ್ಥೆಯು ಪ್ರತೀ ತಿಂಗಳು 2000 ಯೂನಿಟ್ ಗ್ಲಾಂಝಾ ಕಾರುಗಳನ್ನು ಮಾರಾಟ ಮಾಡುವ ಯೋನಜೆಯನ್ನು ಹಮ್ಮಿಕೊಂಡಿದ್ದು, ಅಂದುಕೊಂಡತೆ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆಯುತ್ತಿದೆ.

ದೇಶದ ಕೆಲವು ನಗರಗಳಲ್ಲಿ ಟೊಯೊಟಾ ಗ್ಲಾಂಝಾ ಕಾರಿನ ಬೇಡಿಕೆಯು ಹೆಚ್ಚಿತ್ತಿರುವ ಕಾರಣ ಅಲ್ಲಿ ಎರಡು ತಿಂಗಳುಗಳ ಕಾಲ ಕಾಯುವಿಕೆಯ ಅವಧಿಯನ್ನು ಘೋಷಿಸಲಾಗಿದೆ. ಇನ್ನು ಮೇ 2019ರಲ್ಲಿ 2,142 ಯೂನಿಟ್ ಗ್ಲಾಂಝಾ, 1,5176 ಯೂನಿಟ್ ಬಲೆನೊ ಕಾರುಗಳು ಮರಾಟವಾಗಿದ್ದಾರೆ. ಜೂನ್ 2019ರಲ್ಲಿ 1,919 ಯೂನಿತ್ ಗ್ಲಾಂಝಾ ಹಾಗು 13,689 ಯೂನಿಟ್ ಮಾರುತಿ ಸುಜುಕಿ ಬಲೆನೊ ಕಾರುಗಳು ಮಾರಾಟವಾಗಿದೆ.

ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಆವೃತ್ತಿಯನ್ನೇ ಕೆಲವು ತಾಂತ್ರಿಕ ಸೌಲಭ್ಯಗಳ ಬದಲಾವಣೆಗಳೊಂದಿಗೆ ಮರುನಾಮಕರಣಗೊಳಿಸಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ಗ್ಲಾಂಝಾ ಕಾರು ಸಾಕಷ್ಟು ಆಕರ್ಷಣೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7,21,900ಕ್ಕೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮಾರ್ಥ್ಯ
ಗ್ಲಾಂಝಾ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಮ್ಯಾನುವಲ್ ಆವೃತ್ತಿಯು 89.7 ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಎಂಟಿ ಮಾದರಿಯು 82-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಎರಡು ಆವೃತ್ತಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯಾದ ಜಿ ಮ್ಯಾನುವಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀ-ಅಯಾನ್ (66 ಕಿಲೋ ವ್ಯಾಟ್) ಬ್ಯಾಟರಿ ಅಳವಡಿಸುವ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದೆ.

ಟೊಯೊಟಾ ಸಂಸ್ಥೆಯು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಜಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ವಿ ಆವೃತ್ತಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 19.59 ಮತ್ತು ಸಿವಿಟಿ ಮಾದರಿಯು 21.01 ಮೈಲೇಜ್ ನೀಡುತ್ತದೆ.

ಹೊಸ ಕಾರಿನ ವೈಶಿಷ್ಟ್ಯತೆಗಳು
ಗ್ಲಾಂಝಾ ಕಾರು ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್, ಆಟೋ ಹೆಡ್‌ಲ್ಯಾಂಪ್, ಫಾಲೋ ಮೀ ಕಾರ್ ಫಂಕ್ಷನ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ರಿಯರ್ ಕಾಂಬಿನೇಷನ್ ಟೈಲ್‌ಗೇಟ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಕಾರಿನ ಒಳಾಂಗಣ ವಿನ್ಯಾಸ
ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಪ್ಲೇ ಕಾಸ್ಟ್, ಟಚ್ ಸ್ಕ್ರೀನ್ ಆಡಿಯೋ, 4-ಸ್ಪೀಕರ್ಸ್‌ಗಳು, ಸ್ಮಾರ್ಟ್ ಫೋನ್ ಕನೆಕ್ಟ್(ಆ್ಯಪಲ್ ಕಾರ್ ಪ್ಲೇ/ಅಂಡ್ರಾಯಿಡ್ ಆಟೋ), ನ್ಯಾವಿಗೇಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲರ್, ವೈಸ್ ಕಮಾಂಡ್, ಮುಂಭಾಗದ ಸೀಟುಗಳಲ್ಲಿ ಆರ್ಮ್ ರೆಸ್ಟ್ ಮತ್ತು ಲಗೇಜ್ ರೂಂ ಬಳಿ ಲೈಟಿಂಗ್ ಸೌಲಭ್ಯ ಹೊಂದಿದೆ.

ಹಾಗೆಯೇ ಹೊಸ ಕಾರಿನಲ್ಲಿ ಚಾಲಕ ಸೇರಿ ಐದು ಜನ ಅರಾಮಾದಾಯಕವಾಗಿ ಪ್ರಯಾಣಿಸುವ ಹಾಗೆ ಆಸನ ಸೌಲಭ್ಯವಿದ್ದು, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, 60:40 ಅನುಪಾತದಲ್ಲಿ ವಿಭಜಿಸಬಹುದಾದ ಹಿಂಬದಿ ಆಸನಗಳು, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ORVM, ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೋಡಿಸಲಾಗಿದೆ.

ಸುರಕ್ಷಾ ವೈಶಿಷ್ಟ್ಯತೆಗಳು
ಗ್ಲಾಂಝಾ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷಾ ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಟೆಕ್ ಬಾಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ನೀಡಲಾಗಿದೆ.

ಗ್ಲಾಂಝಾ ಖರೀದಿ ಮೇಲೆ ಭರ್ಜರಿ ವಾರಂಟಿ
ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್ ಗ್ಲಾಂಝಾ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಸೌಲಭ್ಯವನ್ನು ಘೋಷಣೆ ಮಾಡಿದ್ದು, 3 ವರ್ಷದ ಅವಧಿಗೆ ಇಲ್ಲವೇ 1 ಲಕ್ಷ ಕಿ.ಮಿ ರನ್ನಿಂಗ್ ಮೇಲೆ ವಾರಂಟಿಯನ್ನು ಆಯ್ಕೆಮಾಡಬಹುದಾಗಿದೆ.


Click it and Unblock the Notifications