11 ಸಾವಿರ ಗಡಿ ದಾಟಿದ ಟೊಯೊಟಾ ಗ್ಲಾಂಝಾ ಮಾರಾಟ
ಮಾರುತಿ ಸುಜುಕಿ ಗ್ಲಾಂಝಾವನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಗೆ ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಡೆಲಿವರಿಯನ್ನು ಪ್ರಾರಂಭಿಸಿತ್ತು. ಏಪ್ರಿಲ್ ತಿಂಗಳಿಂದ ಸೆಪ್ಟೆಂಬರ್ ತಿಂಗಳ ನಡುವೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 11,499 ಸಾವಿರ ಗ್ಲಾಂಝಾ ಯುನಿಟ್‍ಗಳನ್ನು ಡೆಲಿವರಿ ಮಾಡಿದೆ.

ಟೊಯೊಟಾ ಗ್ಲಾಂಝಾ ಹ್ಯಾಚ್‍ಬ್ಯಾಕ್‍ನ ಮಾರಾಟವು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‍ಗಾಗಿ ಮಾರುತಿ ಸುಜುಕಿ ಇಂಡಿಯಾ ತನ್ನ ಗುಜರಾತ್ ಸ್ಥಾವರದಲ್ಲಿ ತಯಾರಿಸುವ ರೀ-ಬ್ಯಾಡ್ಜ್ ಬಲೆನೊ ಕಾರಿನ ಮಾರಾಟವು 10,000 ಯುನಿಟ್ ಗಡಿ ದಾಡಿದೆ.

ಟೊಯೊಟಾ ಮತ್ತು ಸುಜುಕಿ ಕಂಪನಿಯ ಪಾಲುಗಾರಿಕೆಯಲ್ಲಿ ಮೊದಲ ಬಾರಿಗೆ ಈ ಕಾರನ್ನು ತಯಾರಿಸಿದ್ದಾರೆ. ಜೂನ್‍ನಲ್ಲಿ ಬಿಡುಗಡೆಯಾದ ಈ ಕಾರು ಮಾರಾಟದ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ 2,952 ಯುನಿಟ್‍ಗಳಷ್ಟು ಮಾರಾಟವಾಗಿದೆ.

ಟೊಯೊಟಾ ಗ್ಲಾಂಝಾ ಕಾರ್ ಅನ್ನು ಸದ್ಯಕ್ಕೆ ಜಿ, ವಿ, ಸಿವಿಟಿ ಮತ್ತು ವಿ ಸಿವಿಟಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರೀಮಿಯಂ ಹ್ಯಾಚ್‍ಬ್ಯಾಕ್‍ನ ಎಲ್ಲಾ ಮಾದರಿಗಳನ್ನು ಪೆಟ್ರೋಲ್ ಎಂಜಿನ್‍ನಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು. ಈ ಕಾರುಗಳಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಬಲೆನೊ ಹ್ಯಾಚ್‍ಬ್ಯಾಕ್‍ನಲ್ಲಿಯೂ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಎಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜೋಡಿಸಲಾಗುಗಿದೆ.

ಟೊಯೊಟಾ ಗ್ಲಾಂಝಾ ಜಿ ಎಂಟಿ ಮಾದರಿಯನ್ನು ಮಿಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 7 ಬಿಎಚ್‍ಪಿ ಪವರ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ. ಟೊಯೊಟಾ ಗ್ಲಾಂಝಾದಲ್ಲಿ ಬಿಎಸ್-6 ಎಂಜಿನ್ ಅಳವಡಿಸಲಾಗಿದೆ.

ಟೊಯೊಟಾ ಗ್ಲಾಂಝಾ ಕಾರು, ಮಾರುತಿ ಸುಜುಕಿಯ ಬಲೆನೊದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಹೊಸ ಗ್ಲಾಂಝಾದಲ್ಲಿ ಬಲೆನೊ ಕಾರಿನಲ್ಲಿದ್ದ ಯುನಿಟ್, ವೈಶಿಷ್ಟ್ಯಗಳು ಮತ್ತು ಸ್ಪೆಕ್‍ಗಳನ್ನು ಮುಂದುವರೆಸಲಾಗಿದೆ. ಈ ಎರಡು ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರುಗಳ ನಡುವೆ ವಾರಂಟಿ ಮತ್ತು ಇತರ ಗ್ರಾಹಕ ಸೇವೆಯ ವಿಷಯದಲ್ಲಿ ಮಾತ್ರ ವ್ಯತಾಸವಿದೆ. ಟೊಯೊಟಾ ಗ್ಲಾಂಝಾ 5 ವರ್ಷ /22,000 ವಿಸ್ತರಿತ ವಾರಂಟಿ ಪ್ಯಾಕೇಜ್ ಜೊತೆಗೆ 3 ವರ್ಷಗಳ ರೋಡ್‍ಸೈಡ್ ಅಸಿಸ್ಟೆನ್ಸ್ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ.

ಟೊಯೊಟಾ ಗ್ಲಾಂಝಾ ರೀ-ಬ್ಯಾಡ್ಜ್ ಮಾಡಿದ ಹ್ಯಾಚ್‍ಬ್ಯಾಕ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಗ್ಲಾಂಝಾ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‍ಬ್ಯಾಕ್ ಕಾರುಗಳ ಪೈಕಿ ಬಲೆನೊ ಮತ್ತು ಹ್ಯುಂಡೈ ಎಲೈಟ್ ಐ20ಯ ನಂತರದ ಸ್ಥಾನದಲ್ಲಿದೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗ್ಲಾಂಝಾದ 2,322 ಯುನಿಟ್‍ಗಳು ಮಾರಾಟವಾಗಿವೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭಾರತದ ಎಕ್ಸ್ ಶೋರೂಂ ಪ್ರಕಾರ ಈ ಕಾರಿನ ಬೆಲೆಯು ರೂ.7.22 ಲಕ್ಷವಾಗಿದೆ. ಆಟೋ ಉದ್ಯಮದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಕಾರು ಮಾರಾಟವು ಪಾತಳಕ್ಕೆ ಕುಸಿದಿತ್ತು. ಆದರೆ ಟೊಯೊಟಾ ಗ್ಲಾಂಝಾ ಮಾರಾಟದ ಮೇಲೆ ದೊಡ್ಡ ಪಾರಿಣಾಮ ಬೀರಿಲ್ಲ. ಟೊಯೊಟಾ ಗ್ಲಾಂಝಾ ಕಾರಿನ ಮಾರಟದಲ್ಲಿ ಹೆಚ್ಚಾಗುತ್ತಿದೆ.


Click it and Unblock the Notifications








