ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ಸಂಸ್ಥೆಯು ತನ್ನ ಐಷಾರಾಮಿ ಕಾರು ಉತ್ಪನ್ನವಾದ ಆಲ್ಫಾರ್ಡ್ ಎಂಪಿವಿ ಮತ್ತು ಹಯೆಸ್ ವ್ಯಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಬದಲಾಗಿರುವ ಆಮದು ನೀತಿಯಿಂದಾಗಿ ಐಷಾರಾಮಿ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಯಾಗಲಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಕೇಂದ್ರ ಸರ್ಕಾರವು ವಾಹನ ಉತ್ಪಾದನಾ ಸಂಸ್ಥೆಗಳ ಮೇಲೆ ಇಷ್ಟು ದಿನಗಳ ವಿಧಿಸಲಾಗಿದ್ದ ಆಮದು ಕಾರುಗಳ ಮಾರಾಟದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಯಾವುದೇ ವಾಹನ ಉತ್ಪಾದನಾ ಸಂಸ್ಥೆಯು ಹೊರ ದೇಶದಲ್ಲಿ ಉತ್ಪಾದನೆಯಾಗುವ ತಮ್ಮದೆ ಸಂಸ್ಥೆಯ 2,500 ವಾಹನಗಳನ್ನು ವಾರ್ಷಿಕವಾಗಿ ಯಾವುದೇ ಷರತ್ತುಗಳಿಲ್ಲದೇ ಆಮದು ಮಾಡಿಕೊಳ್ಳಬಹುದು ಎಂಬ ಹೊಸ ನಿಯಮ ರೂಪಿಸಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಹೀಗಾಗಿ ಇಷ್ಟು ದಿನಗಳ ಕಾಲ ವಿದೇಶಿ ಮಾರುಕಟ್ಟೆಗಳಿಂದ ಕಾರು ಆಮದು ಮಾಡಿಕೊಳ್ಳಲು ಭಾರೀ ಪ್ರಮಾಣದ ತೆರಿಗೆ ಪಾವತಿಸಬೇಕಿದ್ದರಿಂದ ಸಾಮಾನ್ಯವಾಗಿ ಕಾರುಗಳ ಬೆಲೆಯು ದುಬಾರಿಯಾಗಿರುತ್ತಿತ್ತು. ಆದ್ರೆ ಹೊಸ ನಿಯಮದಿಂದಾಗಿ ಐಷಾರಾಮಿ ಕಾರುಗಳ ಮಾರಾಟವು ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಜೊತೆಗೆ ಆಟೋ ಉತ್ಪಾದನಾ ಸಂಸ್ಥೆಗಳು ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿರುವ ತಮ್ಮ ಹೊಸ ಕಾರು ಮತ್ತು ಬೈಕ್ ಉತ್ಪನ್ನಗಳನ್ನು ಭಾರತದಲ್ಲಿ ಟೆಸ್ಟಿಂಗ್ ಮಾಡಲು ಸಹ ಭಾರೀ ಪ್ರಮಾಣದ ತೆರಿಗೆ ಪಾವತಿಸಬೇಕಿದ್ದ ಪರಿಸ್ಥಿತಿಯು ಕೂಡಾ ಹೊಸ ನಿಯಮದಿಂದ ಸರಳವಾಗಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಇದೇ ಕಾರಣಕ್ಕೆ ಟೊಯೊಟಾ ಸಂಸ್ಥೆಯು 2018ರ ಆಟೊ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿದ್ದ ತನ್ನ ಲಗ್ಷುರಿ ಆಲ್ಫಾರ್ಡ್ ಎಂಪಿವಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ಅಲ್ಫಾರ್ಡ್ ಮಾರಾಟಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಇದರ ಜೊತೆಗೆ ಮತ್ತೊಂದು ಐಷಾರಾಮಿ ವ್ಯಾನ್ ಮಾದರಿಯಾದ ಹಯೆಸ್ ಉತ್ಪನ್ನವನ್ನು ಸಹ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿರುವ ಟೊಯೊಟಾ ಸಂಸ್ಥೆಯು ಹೋಟೆಲ್ ಹಾಗೂ ಪ್ರವಾಸೋದ್ಯಮ ವಿಭಾಗದಲ್ಲಿ ವಿಶೇಷ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಇನ್ನು ಭಾರತದಲ್ಲಿ ಆಲ್ಫಾರ್ಡ್ ಕಾರುಗಳನ್ನು ಹಳೆಯ ಆಮದು ನೀತಿ ಅಡಿ ಈಗಾಗಲೇ ಸಾವಿರಾರು ಉದ್ಯಮಿಗಳು ಈ ವಿನೂತನ ಕಾರುನ್ನು ಖರೀದಿ ಮಾಡಿದ್ದು, ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ದಿ. ಕರುಣಾನಿಧಿಯವರು ಕೂಡಾ ಈ ಕಾರಿನ ವಿನ್ಯಾಸಕ್ಕೆ ಮನಸೋತು ಖರೀದಿ ಮಾಡಿದ್ದರು.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಟೊಯೊಟಾ ಸಂಸ್ಥೆಯು ನಿರ್ಮಾಣದ ಕಾರುಗಳಲ್ಲೇ ವಿಶೇಷ ಎನ್ನಿಸುವ ಆಲ್ಫಾರ್ಡ್ ಕಾರು ನೋಡಲು ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ದುಬಾರಿ ಕಾರು ಮಾದರಿಯಾಗಿದ್ದು, ಫಾರ್ಚೂನರ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಬಲಿಷ್ಠತೆಯನ್ನು ಹೊಂದಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಕಾರಿನ ಹೊರ ವಿನ್ಯಾಸ

ಅಲ್ಫಾರ್ಡ್ ಕಾರಿನ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಗ್ರಿಲ್ ಅನ್ನು ಪಡೆದುಕೊಂಡಿರಲಿದ್ದು, ಜೊತೆಗೆ, ಲಾರ್ಜ್ ಸೆಂಟ್ರಲ್ ಏರ್ ಇಂಟೇಕ್, ಪ್ರಾಮಿನಂಟ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಯೂನಿಟ್ಸ್, ಫಾಗ್ ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಕಾರಿನ ಒಳ ವಿನ್ಯಾಸ

6 ಸೀಟರ್ ಆಲ್ಫಾರ್ಡ್ ಐಷಾರಾಮಿ ಎಂಪಿವಿಗಳ ಒಳಭಾಗವು ಲೆದರ್ ಮತ್ತು ಮರದ ಫಲಕಗಳಿಂದ ನಿರ್ಮಾಣಗೊಂಡಿದ್ದು, ಇಂಟಿಗ್ರೇಟೆಡ್ ಮಸಾಜರ್ಸ್, ರೆಕ್ಲೈನಿಂಗ್ ಸೀಟ್ಸ್, ಟಚ್‍ ಕಂಟ್ರೋಲ್ಸ್, ಅಗಲವಾದ ಇನ್ಫೋಟೈನೆಂಟ್ ಸಿಸ್ಟಂ ಮತ್ತು ಕಾರಿನ ಮಧ್ಯದಲ್ಲಿರುವ ಸೀಟುಗಳು ಹಲವಾರು ಐಷಾರಾಮಿ ಸೌಕರ್ಯಗಳನ್ನು ಪಡೆದುಕೊಂಡಿರುವುದೇ ಈ ಕಾರಿನ ವಿಶೇಷ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಎಂಜಿನ್ ವೈಶಿಷ್ಟ್ಯತೆ

ಆಲ್ಫಾರ್ಡ್ ಐಷಾರಾಮಿ ಎಂಪಿವಿ ಕಾರುಗಳು ಪೆಟ್ರೋಲ್ ಮಾದರಿಯಲ್ಲೇ ಎರಡು ವಿಭಾಗಗಳಲ್ಲಿ ಅಭಿವೃದ್ಧಿಯಾಗಿದ್ದು, 2.5- ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 179-ಬಿಹೆಚ್‌ಪಿ ಮತ್ತು 235-ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಹಾಗೆಯೇ 3.5-ಲೀಟರ್ ವಿ6 ಡೀಸೆಲ್ ಎಂಜಿನ್ ಹೊಂದಿರುವ ಮತ್ತೊಂದು ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 297-ಬಿಎಚ್‌ಪಿ ಮತ್ತು 361-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಕಾರ್ಪೊರೇಟ್ ವಲಯದಲ್ಲಿ ಈ ಕಾರಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುವ ಸಾಧ್ಯತೆಗಳಿವೆ.

MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಇಷ್ಟೇ ಅಲ್ಲದೇ ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಂಪಿವಿಗಳು ಹೈಬ್ರಿಡ್ ಆವೃತ್ತಿಯಲ್ಲಿ ಸಹ ಖರೀದಿಗೆ ಲಭ್ಯವಾಗಲಿದ್ದು, 2.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿರಲಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಪ್ರಸ್ತುತ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಂ‍ಪಿವಿ ಕಾರುಗಳು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಆರಂಭಿಕವಾಗಿ ರೂ.45 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.58 ಲಕ್ಷದ ತನಕ ಬೆಲೆ ಹೊಂದಿದ್ದು, ಹೊಸ ಆಮದು ನೀತಿ ಅಡಿ ಭಾರತದಲ್ಲಿ ಬಿಡುಗಡೆಗೊಂಡಲ್ಲಿ ಕಾರಿನ ಬೆಲೆಯು ರೂ. 40 ಲಕ್ಷದಿಂದ ರೂ.48 ಲಕ್ಷಕ್ಕೆ ತಗ್ಗಬಹುದು ಎನ್ನಲಾಗಿದೆ.

ಭಾರತದಲ್ಲಿ ಟೊಯೊಟಾ ಆಲ್ಫಾರ್ಡ್ ಮತ್ತು ಹಯೆಸ್ ಬಿಡುಗಡೆಯಾಗುವುದು ಪಕ್ಕಾ..!

ಮತ್ತೊಂದು ಐಷಾರಾಮಿ ವ್ಯಾನ್ ಮಾದರಿಯಾದ ಹಯೆಸ್ ಕೂಡಾ ಈ ಹಿಂದೆ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾಗ ರೂ.30 ಲಕ್ಷ ಬೆಲೆ ಹೊಂದಿತ್ತು. ಹೀಗಾಗಿ ಹೊಸ ಆಮದು ನೀತಿ ಅಡಿ ಈ ಕಾರು ಕೂಡಾ ಮರಳಿ ಬಿಡುಗಡೆಯಾಗುತ್ತಿದ್ದು, ಇದು ಕೂಡಾ ಐಷಾರಾಮಿ ಸೌಲಭ್ಯಗಳೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಳ್ಳಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota To Bring In Hiace And Alphard MPVs To India — Launch Timeline Revealed. Read in Kannada.
Story first published: Thursday, February 28, 2019, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X