ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಒಂದು ವೇಳೆ ಈ ಹೊಸ ಕಾರುಗಳು ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಭಾರತದಲ್ಲಿ ಪ್ರಮುಖ ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಹೌದು, ಟೊಯೊಟಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ವಿನೂತನ ವಿನ್ಯಾಸದ ಸಿ-ಹೆಚ್‌ಆರ್ ಕ್ರಾಸ್ ಓವರ್ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ರಷ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಕುರಿತಾದ ಮಹತ್ವದ ವಿಚಾರಗಳನ್ನು ಹಂಚಿಕೊಂಡಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಕಳೆದ ಜೂನ್‌ನಲ್ಲೇ ಹೊಸ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡಿದ್ದ ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಎಂಡಿ ಅಕಿತೊ ತಾಚಿಬಾನಾ ಅವರು, 'ವಾಹನ ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗಾಗಿ ಸದ್ಯದಲ್ಲೇ ಎರಡು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದಿದ್ದರು.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಜೊತೆಗೆ ಬಿಡುಗಡೆಯಾಗಲಿರುವ ಹೊಸ ಕಾರುಗಳು ರೂ. 12 ಲಕ್ಷ ರಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವುದು ನಮ್ಮ ಮುಂದಿನ ಯೋಜನೆಗಳಾಗಿವೆ ಎಂಬ ಮಾಹಿತಿಯನ್ನು ನೀಡಿದ್ದಲ್ಲದೇ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದ್ದರು.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಇದಕ್ಕೆ ಪೂರಕ ಎನ್ನುವಂತೆ ಇದೀಗ ಸಿ-ಹೆಚ್ಆರ್ ಕ್ರಾಸ್ ಓವರ್ ಎಂಜಿನ್ ಮಾಹಿತಿಯನ್ನು ಹೊರಹಾಕಿದ್ದು, ಶಾರ್ಪ್ ಮತ್ತು ಎಡ್ಜ್ ಕಟಿಂಗ್ ಡಿಸೈನ್ ಹೊಂದಿರುವ ಈ ಕಾರು ಸ್ಲಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವುದು ಕಾರಿನ ಹೊರಭಾಗದ ನೋಟವನ್ನು ಹೆಚ್ಚಿಸಿದೆ ಎನ್ನಬಹುದು.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಇದಲ್ಲದೇ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಅಲಾಯ್ ವೀಲ್ಹ್‌ಗಳು, ಸಿ ಸೇಫ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಮಸ್ಕ್ಯೂಲರ್ ಬಂಪರ್ ಜೊತೆ ಪ್ಲಾಸಿಕ್ಟ್ ಕ್ಯಾಡಿಂಗ್ ಹೊಂದಿದೆ. ಒಟ್ಟಿನಲ್ಲಿ ಈ ಕಾರಿನ ವಿನ್ಯಾಸಗಳು ಐಷಾರಾಮಿ ಕಾರಿನ ಹೋಲಿಕೆ ಪಡೆದಿದಿರುವುದಲ್ಲದಲೇ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟೊಯೊಟಾ ನಿರ್ಮಾಣದ ಇಟಿಯಾಸ್ ಲಿವಾ, ಪ್ಲ್ಯಾಟಿನಂ ಇಟಿಯಾಸ್ ಮತ್ತು ಇಟಿಯಾಸ್ ಕ್ರಾಸ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳು ತುಸು ದುಬಾರಿ ಎನ್ನಿಸಲಿದ್ದು, ರೂ.10 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಯಾರಿಸ್ ಸೆಡಾನ್ ಹೊರತಾಗಿ ಮತ್ಯಾವುದೇ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಲ್ಲ.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಹೀಗಾಗಿ ರಷ್ ಮತ್ತು ಸಿ-ಹೆಚ್ಆರ್ ಕಾರುಗಳನ್ನು ಪರಿಚಯಿಸಲು ಎದುರು ನೋಡುತ್ತಿರುವ ಟೊಯೊಟಾ ಸಂಸ್ಥೆಯು ಇದರ ಜೊತೆ ಜೊತೆಯಲ್ಲಿ ಮಾರುತಿ ಸುಜುಕಿ ಜೊತೆಗೂಡಿ ಸಹಭಾಗಿತ್ವದ ಆಧಾರ ಮೇಲೆ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಸಹ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲು ಹೊಸ ಒಪ್ಪಂದ ಮಾಡಿಕೊಂಡಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಇನ್ನು ಬಿಡುಗಡೆಯಾಗಲಿರುವ ಸಿ-ಹೆಚ್ಆರ್ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 107.5-ಬಿಎಚ್‌ಪಿ ಮತ್ತು 141.2-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಜೊತೆಗೆ ರಷ್ ಕೂಡಾ ಥರ್ಡ್ ಜನರೇಷನ್ ಆವೃತ್ತಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಮಾದರಿಯಾಗಿದೆ.

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಕೆಲವು ಮೂಲಗಳ ಪ್ರಕಾರ, ಈ ಎರಡು ಹೊಸ ಕಾರುಗಳು ಬಿಎಸ್ 6 ಪೆಟ್ರೋಲ್ ಎಂಜಿನ್‌ ಜೊತೆಗೆ ಹೈಬ್ರಿಡ್ ವರ್ಷನ್‌ಗಳನ್ನು ಸಹ ಹೊಂದಿರಲಿವೆ ಎನ್ನಲಾಗುತ್ತಿದ್ದು, 2020ರ ಆರಂಭದಲ್ಲಿ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರವಷ್ಟೇ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಕ್ರೆಟಾ ಪ್ರತಿಸ್ಪರ್ಧಿ ಟೊಯೊಟಾ ಸಿ-ಹೆಚ್ಆರ್ ಕಾರಿನ ಸ್ಪೆಷಲ್ ಏನು?

ಕಾರಿನ ಬೆಲೆ ಮತ್ತು ಬಿಡುಗಡೆ (ಅಂದಾಜು)

ಹೊಚ್ಚ ಸಿ-ಹೆಚ್ಆರ್ ಮತ್ತು ರಷ್ ಕಾರುಗಳ ಕಾರಿನ ಬೆಲೆಯು ರೂ.12 ಲಕ್ಷದಿಂದ ರೂ.16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ರೆನಾಲ್ಟ್ ಕ್ಯಾಪ್ಚರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿವೆ.

Article Published On: Monday, March 18, 2019, 17:39 [IST]
English summary
Toyota To Launch New SUV Based On C-HR Platform: Will Rival Hyundai Creta. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+