ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಟೊಯೊಟಾ ಯಾರೀಸ್
2020ರ ಏಪ್ರಿಲ್ ತಿಂಗಳಿನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಜಾರಿಯಾಗುವುದರಿಂದ ಎಲ್ಲಾ ಕಂಪನಿಯು ತನ್ನ ಸರಣಿಯಲ್ಲಿರುವ ವಾಹನಗಳನ್ನು ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಅದರಂತೆ ಟೊಯೊಟಾ ಮೋಟಾರ್ಸ್ ಕಂಪನಿಯು ತನ್ನ ಸರಣಿಯಲ್ಲಿರುವ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗೊ ನವೀಕರಿಸಲಾಗುತ್ತಿದೆ.

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ಮೋಟಾರ್ಸ್ ತನ್ನ ಯಾರೀಸ್ ಸೆಡಾನ್ ಕಾರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಶೀಘ್ರದಲ್ಲೇ ಬಿಎಸ್ 6 ಎಂಜಿನ್ ಹೊಂದಿರುವ ಯಾರೀಸ್ ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಯಾರೀಸ್ ಸೆಡಾನ್ ಕಾರ್ ಅನ್ನು ಮಾರುಕಟ್ಟೆಯಲ್ಲಿ ಜೆ, ಜಿ, ವಿ, ವಿಎಕ್ಸ್ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟೊಯೊಟಾ ಯಾರೀಸ್ ಕಾರ್ ಅನ್ನು 2018ರ ಏಪ್ರಿಲ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗ ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.75 ಲಕ್ಷಗಳಾಗಿತ್ತು.

ಟೊಯೊಟಾ ಯಾರೀಸ್ ಕಾರಿನಲ್ಲಿ 1.5 ಲೀಟರಿನ 4 ಸಿಲಿಂಡರ್ ಬಿಎಸ್ 4 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 107 ಬಿಹೆಚ್‍ಪಿ ಪವರ್ ಹಾಗೂ 140 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ಅಥವಾ 7 ಸ್ಪೀಡಿನ ಸಿವಿಟಿ ಗೇರ್‍ಬಾಕ್ಸ್ ನೀಡಲಾಗುವುದು.

ಟೊಯೊಟಾ ಇಟಿಯೋಸ್‍ನಲ್ಲಿ ಅಳವಡಿಸಲಾಗಿರುವ ಪೆಟ್ರೋಲ್ ಎಂಜಿನ್ ಅನ್ನು ಯಾರೀಸ್‍ನಲ್ಲಿಯೂ ಅಳವಡಿಸಲಾಗಿದೆ. ಆದರೆ ಯಾರೀಸ್‍ನಲ್ಲಿರುವ ಎಂಜಿನ್ ಅನ್ನು ಡ್ಯುಯಲ್ ವಿವಿಟಿ - ಐ ಸಿಸ್ಟಂಗೆ ಅಪ್‍ಗ್ರೇಡ್ ಮಾಡಲಾಗಿದೆ. ವಿವಿಟಿ ಐ ಅಂದರೆ ವೆರಿಯಬಲ್ ವಾಲ್ವ್ ಟೈಮಿಂಗ್ ವಿತ್ ಇಂಟೆಲಿಜೆನ್ಸ್ ಎಂದು.

ಈ ಸಿಸ್ಟಂ ಎಂಜಿನ್‍ನಲ್ಲಿರುವ ವಾಲ್ವ್ ಗಳನ್ನು ಆರ್‍ಪಿಎಂ ಮೂಲಕ ನಿಯಂತ್ರಿಸುತ್ತದೆ. ಇದರಿಂದಾಗಿ ಎಂಜಿನ್ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೆಚ್ಚುತ್ತದೆ. ಹೊಸ ಟೊಯೊಟಾ ಯಾರೀಸ್ ಕಾರಿನಲ್ಲಿ ಎಂಜಿನ್ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಕಾರು ಡ್ಯುಯಲ್ ಟೋನ್ ಬಣ್ಣ, ಪಿಯಾನೊ ಬ್ಲಾಕ್ ಫಿನಿಶ್ ಹೊಂದಿರುವ ಫ್ರಂಟ್ ಗ್ರಿಲ್, ಎಲ್‍ಇಡಿ ಡಿಆರ್‍ಎಲ್ ಹೊಂದಿರುವ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಗೂ ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಪ್ರಯಾಣಿಕರ ಸುರಕ್ಷತೆಗಾಗಿ ಯಾರೀಸ್ ಕಾರಿನಲ್ಲಿ 7 ಏರ್‍ಬ್ಯಾಗ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಎಸ್ ಹಾಗೂ ಇಬಿಡಿ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್, ಫ್ರಂಟ್ ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮ್ಯಾಂಡರ್ ಹಾಗೂ ಹೈ ಸ್ಪೀಡ್ ಅಲರ್ಟ್ ಸಿಸ್ಟಂಗಳಿವೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಎಸ್-6 ಯಾರೀಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿಯ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications