TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಲಿವೆ ಟೊಯೊಟಾ ರಷ್ ಮತ್ತು ಸಿ-ಹೆಚ್ಆರ್..!
ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಒಂದು ವೇಳೆ ಈ ಹೊಸ ಎಸ್‌ಯುವಿ ಕಾರುಗಳು ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಭಾರತದಲ್ಲಿ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.
ಹೌದು, ಟೊಯೊಟಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ವಿನೂತನ ವಿನ್ಯಾಸದ ಸಿ-ಹೆಚ್‌ಆರ್ ಕ್ರಾಸ್ ಓವರ್ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ರಷ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಕುರಿತಾದ ಮಹತ್ವದ ವಿಚಾರಗಳನ್ನು ಹಂಚಿಕೊಂಡಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.
ಇದಲ್ಲದೇ ಕಳೆದ ಜೂನ್‌ನಲ್ಲಿ ಹೊಸ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡಿದ್ದ ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಎಂಡಿ ಅಕಿತೊ ತಾಚಿಬಾನಾ ಅವರು, 'ವಾಹನ ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗಾಗಿ ಸದ್ಯದಲ್ಲೇ ಎರಡು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದಿದ್ದರು.
ಜೊತೆಗೆ ಬಿಡುಗಡೆಯಾಗಲಿರುವ ಹೊಸ ಕಾರುಗಳು ರೂ. 12 ಲಕ್ಷ ರಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವುದು ನಮ್ಮ ಮುಂದಿನ ಯೋಜನೆಗಳಾಗಿವೆ ಎಂಬ ಮಾಹಿತಿಯನ್ನು ನೀಡಿದ್ದರು.
ಇದಕ್ಕೆ ಪೂರಕ ಎನ್ನುವಂತೆ ಇದೀಗ ಸಿ-ಹೆಚ್ಆರ್ ಕಾರುಗಳ ಎಂಜಿನ್ ಮಾಹಿತಿಯನ್ನು ಹೊರಹಾಕಿದ್ದು, ಶಾರ್ಪ್ ಮತ್ತು ಎಡ್ಜ್ ಡಿಸೈನ್ ಹೊಂದಿರುವ ಈ ಕಾರು ಸ್ಲಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವುದು ಕಾರಿನ ಹೊರಭಾಗದ ನೋಟವನ್ನು ಹೆಚ್ಚಿಸಿದೆ ಎನ್ನಬಹುದು.
ಇದಲ್ಲದೇ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಅಲಾಯ್ ವೀಲ್ಹ್‌ಗಳು, ಸಿ ಸೇಫ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಮಸ್ಕ್ಯೂಲರ್ ಬಂಪರ್ ಜೊತೆ ಪ್ಲಾಸಿಕ್ಟ್ ಕ್ಯಾಡಿಂಗ್ ಹೊಂದಿದೆ. ಒಟ್ಟಿನಲ್ಲಿ ಕಾರಿನ ವಿನ್ಯಾಸಗಳು ಐಷಾರಾಮಿ ಕಾರಿನ ಹೋಲಿಕೆ ಪಡೆದಿವೆ ಎನ್ನಬಹುದು.
ಹಾಗೆಯೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ರಷ್ ಕಂಪ್ಯಾಕ್ಟ್ ಎಸ್‌ಯುವಿಯು ಕೂಡಾ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಬಹುದಾದ ಕಾರು ಮಾದರಿಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿನ ಬೇಡಿಕೆಗಳನ್ನು ಇವು ಪೂರೈಸಲಿವೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟೊಯೊಟಾ ನಿರ್ಮಾಣದ ಇಟಿಯಾಸ್ ಲಿವಾ, ಪ್ಲ್ಯಾಟಿನಂ ಇಟಿಯಾಸ್ ಮತ್ತು ಇಟಿಯಾಸ್ ಕ್ರಾಸ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳು ತುಸು ದುಬಾರಿ ಎನ್ನಿಸಲಿದ್ದು, ರೂ.10 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಯಾರಿಸ್ ಸೆಡಾನ್ ಹೊರತಾಗಿ ಮತ್ಯಾವುದೇ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಲ್ಲ.
ತದನಂತರದಲ್ಲಿ ಬರುವ ಇನೋವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ಕಾರುಗಳು ಕನಿಷ್ಠ ಅಂದ್ರು ಆನ್ ರೋಡ್ ಬೆಲೆಗಳ ಪ್ರಕಾರ ರೂ.19 ಲಕ್ಷದಿಂದ ರೂ.38 ಲಕ್ಷ ಬೆಲೆ ಹೊಂದಿದ್ದು, ಇದು ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಅಸಾಧ್ಯದ ಮಾತು.
ಹೀಗಾಗಿ ರಷ್ ಮತ್ತು ಸಿ-ಹೆಚ್ಆರ್ ಕಾರುಗಳನ್ನು ಪರಿಚಯಿಸಲು ಎದುರು ನೋಡುತ್ತಿರುವ ಟೊಯೊಟಾ ಸಂಸ್ಥೆಯು ಇದರ ಜೊತೆ ಜೊತೆಯಲ್ಲಿ ಮಾರುತಿ ಸುಜುಕಿ ಜೊತೆಗೂಡಿ ಸಹಭಾಗಿತ್ವದ ಆಧಾರ ಮೇಲೆ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಸಹ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲು ಹೊಸ ಒಪ್ಪಂದ ಮಾಡಿಕೊಂಡಿವೆ.
ಇದಕ್ಕೆ ಪ್ರತಿಯಾಗಿ ಮಾರುತಿ ಸುಜುಕಿ ಸಂಸ್ಥೆಯು ಸಹ ಟೊಯೊಟಾ ನಿರ್ಮಾಣದ ಕಾರುಗಳ ಮಾರಾಟಕ್ಕೆ ಸಹಕಾರಿಯಾಗಲಿದ್ದು, ಒಪ್ಪಂದ ಆಧಾರದ ಮೇಲೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳನ್ನು ಸಹ ಅಭಿವೃದ್ಧಿ ಪಡಿಸಲು ಮಾತುಕತೆ ನಡೆಸಿವೆ.
ಇನ್ನು ಬಿಡುಗಡೆಯಾಗಲಿರುವ ಸಿ-ಹೆಚ್ಆರ್ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 107.5-ಬಿಎಚ್‌ಪಿ ಮತ್ತು 141.2-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ರಷ್ ಕೂಡಾ ಥರ್ಡ್ ಜನರೇಷನ್ ಆವೃತ್ತಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
ಕೆಲವು ಮೂಲಗಳ ಪ್ರಕಾರ, ಈ ಎರಡು ಹೊಸ ಕಾರುಗಳು ಬಿಎಸ್ 6 ಪೆಟ್ರೋಲ್ ಎಂಜಿನ್ ಜೊತೆಗೆ ಹೈಬ್ರಿಡ್ ವರ್ಷನ್‌ಗಳನ್ನು ಸಹ ಹೊಂದಿರಲಿವೆ ಎನ್ನಲಾಗುತ್ತಿದ್ದು, ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳನ್ನು ತಗ್ಗಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗುತ್ತಿದೆ.
ಕಾರಿನ ಬೆಲೆ ಮತ್ತು ಬಿಡುಗಡೆ (ಅಂದಾಜು)
ಹೊಚ್ಚ ಸಿ-ಹೆಚ್ಆರ್ ಮತ್ತು ರಷ್ ಕಾರುಗಳು ಭಾರತದಲ್ಲಿ 2019ರ ಮಧ್ಯಂತರದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಾರಿನ ಬೆಲೆಯು ರೂ.12 ಲಕ್ಷದಿಂದ ರೂ.16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.