ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಮಾರುತಿ ಸುಜುಕಿ, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಕಂಪನಿಯು 50%ಕ್ಕೂ ಹೆಚ್ಚಿನ ಷೇರುಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಎಂಟ್ರಿ ಲೆವೆಲ್‍‍ನಿಂದ ಎಸ್‍‍ಯುವಿ ಸೆಗ್‍‍ಮೆಂಟ್‍‍ಗಳವರೆಗೆ ಹಲವು ಕಾರುಗಳನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಇದರ ಜೊತೆಗೆ ಕಂಪನಿಯು ಹಳೆಯ ಕಾರುಗಳನ್ನು ಅಪ್‍‍ಡೇಟ್‍‍ಗೊಳಿಸುವುದರ ಜೊತೆಗೆ ಹೊಸ ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತಹ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಈ ಲೇಖನದಲ್ಲಿ ಮಾರುತಿ ಸುಜುಕಿ ಕಂಪನಿಯು ಯಾವೆಲ್ಲಾ ಕಾರುಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ ಎಂಬುದನ್ನು ನೋಡೋಣ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಎಸ್ ಪ್ರೆಸ್ಸೊ

ಮಾರುತಿ ಸುಜುಕಿ ಕಂಪನಿಯು 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡ ಫ್ಯೂಚರ್ ಎಸ್ ಕಾನ್ಸೆಪ್ಟ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾರ್ ಅನ್ನು ಎಸ್ ಪ್ರೆಸ್ಸೊ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು. ಎಸ್ ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ಕಾರಿಗೆ ಪೈಪೋಟಿ ನೀಡಲಿದೆ. ಈ ಹೊಸ ಕಾರು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಈ ಹೊಸ ಕಾರು ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಡ್ಯುಯಲ್ ಏರ್ ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ಸ್ಪೀಡ್ ಸೆನ್ಸಾರ್ ಅಲರ್ಟ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿರಲಿದೆ. ಹೊಸ ಸುರಕ್ಷಾ ನಿಯಮಗಳಿಗೆ ತಕ್ಕಂತೆ ಈ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಬಲಿಷ್ಟವಾಗಿ ನಿರ್ಮಿಸಲಾಗುವುದು. ಈ ಕಾರು 1.0 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಇದರ ಜೊತೆಗೆ ಮ್ಯಾನುವಲ್ ಹಾಗೂ ಎ‍ಎಂಟಿ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಮಾರುತಿ ವ್ಯಾಗನ್ ಆರ್-ಇವಿ

ಈಗ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಮಾರುತಿ ಸುಜುಕಿ ಕಂಪನಿಯು ಸಹ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಎಲೆಕ್ಟ್ರಿಕ್ ಸರಣಿಯ ಮೊದಲ ಕಾರ್ ಆಗಿ ವ್ಯಾಗನ್ ಆರ್ ಇವಿಯನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಕಂಪನಿಯು ಜೆ‍‍ಡಿ‍ಎಂ ಮಾದರಿಯ ವ್ಯಾಗನ್ ಆರ್-ಇವಿ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಸ್ಪಾಟ್ ಟೆಸ್ಟ್ ನಲ್ಲಿ ಭಾರತದ ಹವಾಮಾನ ಹಾಗೂ ರಸ್ತೆ ಪರಿಸ್ಥಿತಿಗಳನ್ನು ಪರೀಕ್ಷಿಸಿದ ನಂತರ ಉತ್ತಮ ಗುಣಮಟ್ಟದ ಬ್ಯಾಟರಿ ಪ್ಯಾಕ್ ಅನ್ನು ತಯಾರಿಸಲಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಮಾರುತಿ ವಿಟಾರಾ ಎಸ್‍‍ಯುವಿ

ವಿಟಾರಾ, ಮಾರುತಿ ಸುಜುಕಿ ಕಂಪನಿಯು ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಜನಪ್ರಿಯವಾದ ಕಾರುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಈ ಕಾರು ವಿಟಾರಾ ಬ್ರಿಝಾ ಎಸ್‍‍ಯುವಿಗಿಂತ ಮೇಲಿನ ಸ್ಥಾನದಲ್ಲಿರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಹಳೆಯ ಮಾದರಿಯಾಗಿದೆ. ಕಂಪನಿಯು ಹೊಸ ಕಾರ್ ಅನ್ನು ಅಭಿವೃದ್ಧಿಪಡಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಯಾದ ನಂತರ ಈ ಕಾರು ಹ್ಯುಂಡೈನ ಕ್ರೆಟಾ ಕಾರಿಗೆ ಪೈಪೋಟಿ ನೀಡಲಿದೆ.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಈ ಕಾರು ಹೊಸ ವಿನ್ಯಾಸ ಹಾಗೂ ಹೊಸ ಗ್ರಿಲ್‍‍ಗಳ ಜೊತೆಗೆ ಮರು ವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ ಹಾಗೂ ಟೇಲ್‍‍ಲ್ಯಾಂಪ್‍‍ಗಳೊಂದಿಗೆ ಹೊಸ ಬಂಪರ್‍‍ಗಳನ್ನು ಹೊಂದಿರಲಿದೆ. ಈ ಕಾರಿನ ಇಂಟಿರಿಯರ್ ಹೆಚ್ಚಿನ ಪ್ರಮಾಣದ ಪ್ರೀಮಿಯಂ ಹೊಂದಿರಲಿದೆ. ವಿಟಾರಾ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿರಲಿದೆ. ಈ ಕಾರು ಸಹ 2020ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೆಲೆರಿಯೊ ಕಾರು ಸಹ ಮಾರುತಿ ಸುಜುಕಿ ಕಂಪನಿಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಕಂಪನಿಯು ಈ ಕಾರಿನ ಹೊಸ ತಲೆಮಾರಿನ ಕಾರ್ ಅನ್ನು ಅಭಿವೃದ್ದಿಪಡಿಸುತ್ತಿದೆ. ಸೆಲೆರಿಯೊದ ಹೊಸ ಕಾರು ಫ್ಯೂಚರ್ ಎಸ್ ಕಾನ್ಸೆಪ್ಟ್ ಕಾರಿನಲ್ಲಿದ್ದ ವಿನ್ಯಾಸವನ್ನು ಹೊಂದಿರುವ ಸಾಧ್ಯತೆಗಳಿವೆ. ಇಂಟಿರಿಯರ್‍‍ನಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಮಾಡಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ವರದಿಗಳ ಪ್ರಕಾರ ಹೊಸ ತಲೆಮಾರಿನ ಸೆಲೆರಿಯೊ ಕಾರು ವ್ಯಾಗನ್ ಆರ್ ಕಾರಿನಲ್ಲಿರುವಂತಹ ಇವಿ ಪವರ್‍‍ಟ್ರೇನ್ ಹೊಂದಿರಲಿದೆ. ಈ ಪವರ್‍‍ಟ್ರೇನ್ ಅನ್ನು ಟೊಯೊಟಾ ಕಂಪನಿಯು ಅಭಿವೃದ್ಧಿಪಡಿಸಲಿದೆ. ಹೊಸ ಸೆಲೆರಿಯೊ ಕಾರು ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿರಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ವಿಟಾರಾ ಬ್ರಿಝಾ ನವೀಕೃತ ಕಾರು

ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ವಿಟಾರಾ ಬ್ರಿಝಾ ಎಸ್‍‍ಯುವಿಯನ್ನು ಪೆಟ್ರೋಲ್ ಎಂಜಿನ್‍‍ನಲ್ಲಿ ಮಾರಾಟ ಮಾಡುತ್ತಿಲ್ಲ. ಕಂಪನಿಯು ಬಿ‍ಎಸ್6 ಮಾಲಿನ್ಯ ನಿಯಮಗಳು ಜಾರಿಯಾದ ನಂತರ ಡೀಸೆಲ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಮುಂಬರುವ ದಿನಗಳಲ್ಲಿ ಮಾರುತಿ ಸುಜುಕಿ ಕಂಪನಿಯು ವಿಟಾರಾ ಬ್ರಿಝಾವನ್ನು 1.5 ಲೀಟರಿನ ಪೆಟ್ರೋಲ್ ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಿದೆ. ಈ ಎಂಜಿನ್ ಅನ್ನು ಸಿಯಾಜ್ ಕಾರಿನಲ್ಲಿ ಅಳವಡಿಸಲಾಗಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

1.5 ಲೀಟರಿನ ಪೆಟ್ರೋಲ್ ಎಂಜಿನ್ 103.2 ಬಿಹೆ‍‍ಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಎಂಜಿನ್ ಡ್ಯೂಯಲ್ ಬ್ಯಾಟರಿ ಸೆಟ್ ಅಪ್ ಹಾಗೂ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ ಹೊಂದಿರಲಿದ್ದು, ಇದರಿಂದ ಎಂಜಿನ್‍‍ನ ಎಫಿಶಿಯನ್ಸಿ ಸುಧಾರಿಸುತ್ತದೆ. ಈ ಎಂಜಿನ್ ಬಿ‍ಎಸ್6 ಆಧಾರಿತವಾಗಿರಲಿದೆ. ಹೊಸ ಎಂಜಿನ್‍‍ನ ಜೊತೆಗೆ, ಹೊಸ ಬ್ರಿಝಾ ಕಾರು ಸನ್‍‍ರೂಫ್ ಹಾಗೂ 4 ಏರ್‍‍ಬ್ಯಾಗ್ ಹೊಂದಿರಲಿದೆ. ಬಂಪರ್‍‍ನಲ್ಲಿ ಹಲವಾರು ಬದಲಾವಣೆಗಳಾಗಲಿವೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಇಗ್ನಿಸ್ ನವೀಕೃತ ಕಾರು

ಇಗ್ನಿಸ್, ನೆಕ್ಸಾ ಡೀಲರ್‍‍ಗಳ ಮೂಲಕ ಮಾರಾಟವಾದ ಮಾರುತಿ ಸುಜುಕಿ ಕಂಪನಿಯ ಮೊದಲ ಹ್ಯಾಚ್‍‍ಬ್ಯಾಕ್ ಕಾರ್ ಆಗಿದೆ. ಇಗ್ನಿಸ್ ಕಾರ್ ಅನ್ನು ಹೆಚ್ಚು ಜನಪ್ರಿಯಗೊಳಿಸಲು ಮಾರುತಿ ಸುಜುಕಿ ಕಂಪನಿಯು ಈ ಕಾರಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಿ ಈ ವರ್ಷದ ಆರಂಭದಲ್ಲಿ ನವೀಕೃತ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ನವೀಕೃತ ಕಾರು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗದ ಕಾರಣ, ಮಾರುತಿ ಕಂಪನಿಯು ಮತ್ತೊಮ್ಮೆ ಈ ಕಾರ್ ಅನ್ನು ನವೀಕೃತಗೊಳಿಸಲು ಬಯಸಿದೆ. ಈ ಕಾರಿನಲ್ಲಿ ಬಿ‍ಎಸ್6 ಎಂಜಿನ್ ಅಳವಡಿಸಲಾಗುವುದು. ಹೊಸ ಇಗ್ನಿಸ್ ಕಾರ್ ಅನ್ನು ಈ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಸುಜುಕಿ ಜಿಮ್ನಿ

ಸುಜುಕಿ ಕಂಪನಿಯು ಹೊಸ ತಲೆಮಾರಿನ ಜಿಮ್ನಿ ಕಾರ್ ಅನ್ನು ಕಳೆದ ವರ್ಷ ವಿಶ್ವದ ಹಲವು ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರ್ ಅನ್ನು ಮಹೀಂದ್ರಾ ಥಾರ್ ಕಾರಿಗೆ ಪೈಪೋಟಿ ನೀಡುವ ಉದ್ದೇಶದಿಂದ ದೇಶಿಯ ಮಾರುಕಟ್ಟೆಯಲ್ಲಿಯೂ ಸಹ ಬಿಡುಗಡೆಗೊಳಿಸಲಾಗುವುದು. ಹೊಸ ಜಿಮ್ನಿ ಕಾರು ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಕಾರಿನಲ್ಲಿರುವ ವಿನ್ಯಾಸವನ್ನು ಹೊಂದಿರಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಈ ಕಾರಿನಲ್ಲಿರುವ ಇಂಟಿರಿಯರ್ ಸಂಪೂರ್ಣವಾಗಿ ಹೊಸದಾಗಿರಲಿದೆ. ಈ ಕಾರು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿರುವ ಮೂರು ಸ್ಪೋಕಿನ ಮಲ್ಟಿಫಂಕ್ಷನ್ ಸ್ಟಿಯರಿಂಗ್ ವ್ಹೀಲ್ ಹೊಂದಿರಲಿದೆ. ಈ ಕಾರಿನಲ್ಲಿರುವ ಸೆಂಟರ್ ಕಂಸೊಲ್ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹೊಂದಿರಲಿದೆ. ಇದರಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ, ಕ್ಲೈಮೇಟ್ ಕಂಟ್ರೋಲ್‍‍ಗಳಿರಲಿವೆ. ಪೆಟ್ರೋಲ್ ಎಂಜಿನ್ ಹೊಂದಲಿರುವ ಈ ಎಸ್‍‍ಯುವಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಸಹ ಹೊಂದಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಮಾರುತಿ ಸುಜುಕಿ ವಿಟಾರಾ 7 ಸೀಟರ್

ಮಧ್ಯಮ ಗಾತ್ರದ ಎಸ್‍‍ಯುವಿಯಾದ ವಿಟಾರಾ 7 ಸೀಟುಗಳನ್ನು ಹೊಂದಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಹೊಸ ಎಸ್‍‍ಯುವಿ 7 ಸೀಟರ್‍‍ಗಳ ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಎಸ್‍‍ಯುವಿಯ ಮೂಲ ಮಾದರಿಯ ಬೆಲೆಯು ರೂ.15 ಲಕ್ಷಗಳಿರುವ ಸಾಧ್ಯತೆಗಳಿವೆ. 7 ಸೀಟುಗಳ ವಿಟಾರಾ, 5 ಸೀಟುಗಳ ವಿಟಾರಾದಲ್ಲಿರುವಂತಹ ಮೆಕಾನಿಕಲ್ ಅಂಶಗಳನ್ನು ಹಾಗೂ ಫೀಚರ್‍‍ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್ 7 ಸೀಟರ್

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹೊಸ ತಲೆಮಾರಿನ ವ್ಯಾಗನ್ ಆರ್ ಜನಪ್ರಿಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈಗ ಮಾರುತಿ ಸುಜುಕಿ ಕಂಪನಿಯು 5 ಸೀಟುಗಳನ್ನು ಹೊಂದಿರುವ ವ್ಯಾಗನ್ ಆರ್ ಕಾರ್ ಅನ್ನು 7 ಸೀಟುಗಳೊಂದಿಗೆ ಬಿಡುಗಡೆಗೊಳಿಸಲಿದೆ. 7 ಸೀಟುಗಳನ್ನು ಹೊಂದಲಿರುವ ವ್ಯಾಗನ್ ಆರ್ ರೆನಾಲ್ಟ್ ಟ್ರೈಬರ್ ಎಂ‍‍ಪಿವಿ ಕಾರಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಹೊಸ ಕಾರುಗಳಿವು

ಹೊಸ ಕಾರು ಸೊಲಿಯೊ ಎಂಬ ಹೆಸರನ್ನು ಹೊಂದಿರುವ ಸಾಧ್ಯತೆಗಳಿವೆ. ಹೊಸ ಮಾದರಿಯು ಸಹ ಹಾರ್ಟ್‍‍‍ಟೆಕ್ ಪ್ಲಾಟ್‍‍‍ಫಾರಂ ಮೇಲೆ ತಯಾರಾಗಲಿದೆ. ನಿರ್ಮಾಣದ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಕಾರಿನ ವಿನ್ಯಾಸವನ್ನು ವ್ಯಾಗನ್ ಆರ್ ಕಾರಿನಿಂದ ಪಡೆಯಲಾಗುವುದು. ಹೊಸ 7 ಸೀಟುಗಳ ವ್ಯಾಗನ್ ಆರ್ ಕಾರು 1.2 ಲೀಟರಿನ ಎಂಜಿನ್ ಹೊಂದಿರಲಿದ್ದು, 81 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸಲಿದೆ.

Most Read Articles

Kannada
English summary
Upcoming Maruti Suzuki Cars In India - Read in kannada
Story first published: Friday, August 30, 2019, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X