10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ಸ್‍ನ ಎಲೆಕ್ಟ್ರಿಕ್ ಕಾರು.?
ದೇಶಾದ್ಯಂತ ಸದ್ಯ ಕೈಗೆಟುವಕುವ ದರಗಳಲ್ಲಿ ಅತಿ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಗ್ರಾಹಕರು ಎದುರು ನೋಡುತ್ತಿದ್ದು, ಎಂಜಿ ಮೋಟಾರ್ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ.

ಭಾರತದಲ್ಲಿ ಸದ್ಯ ಮಹೀಂದ್ರಾ ಸಂಸ್ಥೆ ಮಾತ್ರ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ನಿಸ್ಸಾನ್, ಎಂಜಿ ಮೋಟಾರ್ ಸಂಸ್ಥೆಗಳು ಸಹ ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿವೆ. ಇದಿಗ ಎಂಜಿ ಮೋಟಾರ್ಸ್ ಕೂಡಾ ತಾವು ಬಿಡುಗಡೆ ಮಾಡಲಿರುವ ಇಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

10 ಲಕ್ಷದೊಳಗೆ ದೊರೆಯಲಿದೆ ಎಲೆಕ್ಟ್ರಿಕ್ ಕಾರು.?
ಸಧ್ಯ ಮೋಟಾರ್‍ಬೀಮ್ ಮಾಹಿತಿಗಳ ಪ್ರಕಾರ ಎಂಜಿ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ತಮ್ಮ ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಭಾರತೀಯ ಗ್ರಾಹಕರಿಗೆ ಸರಿ ತೂಗುವ ಹಾಗೆ ರೂ.10 ಲಕ್ಷದೊಳಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಹೊಸ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳಲ್ಲಿ ಎಂಜಿ (ಮೊರಿಸ್ ಗ್ಯಾರೆಜ್) ಮೋಟಾರ್ ಕೂಡಾ ಒಂದಾಗಿದ್ದು, ಭಾರತೀಯ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿದೆ.

ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ 2ನೇ ತ್ರೈಮಾಸಿಕ ಅವಧಿಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಈಗಾಗಲೇ ಹೊಸ ಯೋಜನೆ ರೂಪಿಸಿದ್ದು, 2020ರ ಆರಂಭದಲ್ಲಿ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಆವೃತ್ತಿಯಾದ ಇಜೆಡ್ಎಸ್ ಕಾರನ್ನು ಬ್ಯಾಂಕಾಕ್ ಆಟೋ ಮೇಳದಲ್ಲಿ ಅನಾವರಣಗೊಳಿಸಿದೆ.

ಇಜೆಡ್ಎಸ್ ಕಾರು ಈಗಾಗಲೇ ಚೀನಿ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಎರಡು ಮಾದರಿಯ ಮೈಲೇಜ್ ರೇಂಜ್ ಪ್ರೇರಣೆಯ ಬ್ಯಾಟರಿ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 300ಕಿ.ಮಿ ನೀಡುವ ಆರಂಭಿಕ ಆವೃತ್ತಿ ಇಲ್ಲವೇ ಪ್ರತಿ ಚಾರ್ಜ್‌ಗೆ 420 ಕಿ.ಮಿ ಮೈಲೇಜ್ ನೀಡುವ ಹೈ ಎಂಡ್ ಮಾದರಿಯನ್ನು ಖರೀದಿಸಬಹುದು.

ಈ ಸಂಬಂಧ ಭಾರತದಲ್ಲಿ ತನ್ನ ಹೊಸ ಕಾರು ಉತ್ಪನ್ನಗಳ ಬಗೆಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಂಬಂಧ ದೇಶದ ವಿವಿಧ ನಗರಗಳಲ್ಲಿ ಹೊಸ ಕಾರುಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಿರುವುದಲ್ಲದೇ ಅತ್ಯುತ್ತಮ ದರಗಳಲ್ಲಿ ಖರೀದಿಗೆ ಲಭ್ಯವಾಗುವ ಸುಳಿವು ನೀಡಿದೆ.

ಎಂಜಿ ಮೋಟಾರ್ಸ್ ಸದ್ಯ ಹೆಕ್ಟರ್ ಎನ್ನುವ ಎಸ್‌ಯುವಿ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದ್ದು, ತದನಂತರವಷ್ಟೇ ಇಜೆಡ್ಎಸ್ ಎಲೆಕ್ಟ್ರ್ಕಿಕ್ ಕಾರು ಬಿಡುಗಡೆಯಾಗಲಿದೆ. ಹೀಗಾಗಿ ಇಜೆಡ್ಎಸ್ ಕಾರು ಹ್ಯುಂಡೈ ನಿರ್ಮಾಣದ ಕೊನಾ ಕಾರಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ.


Click it and Unblock the Notifications








