ಸ್ಪಾಟ್ ಟೆಸ್ಟ್‌ನಲ್ಲಿ ಸೆರೆಯಾದ ಬಿಎಸ್-6 ಫೋಕ್ಸ್ ವ್ಯಾಗನ್ ಪೊಲೊ, ವೆಂಟೊ
ಜರ್ಮನ್ ವಾಹನ ತಯಾರಕ ಕಂಪನಿಯಾದ ಫೋಕ್ಸ್ ವ್ಯಾಗನ್ ಮುಂದಿನ ವರ್ಷದ ಪ್ರಾರಂಭದಲ್ಲಿ ತಮ್ಮ ಬಿಎಸ್-6 ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮುಂದಿನ ವರ್ಷ ಬಿಡುಗಡೆಗೊಳಿಸಲಿರುವ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಮೋಟಾರ್‍ಭೀಮ್ ಸ್ಪೈ ಚಿತ್ರವು ಫೋಕ್ಸ್ ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಫೋಕ್ಸ್ ವ್ಯಾಗನ್ ತಮ್ಮ ಡೀಸೆಲ್ ಎಂಜಿನ್‍ಗಳನ್ನು ಬಿಎಸ್-6 ಎಂಜಿನ್‍ಗಳಾಗಿ ನವೀಕರಿಸಲು ಮುಂದಾಗಿದೆ. ಕಂಪನಿಯು ಆರಂಭದಲ್ಲಿ ತಮ್ಮ ಬಿಎಸ್-6 ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಬಿಡುಗಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಪ್ರಸ್ತುತ ಪೋಕ್ಸ್ ವ್ಯಾಗನ್ ಪೊಲೊ ಎರಡು ಬಗೆಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.0 ಲೀಟರಿನ 3 ಸಿಲಿಂಡರ್‍ನ ಪೆಟ್ರೋಲ್ ಎಂಜಿನ್, 75 ಬಿಹೆಚ್‍ಪಿ ಪವರ್ ಮತ್ತು 153 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡನೇ ಬಗೆಯ 1.5 ಲೀಟರಿನ 4 ಸಿಲಿಂಡರ್‍ನ ಡೀಸೆಲ್ ಎಂಜಿನ್, 88.5 ಬಿಹೆಚ್‍ಪಿ ಪವರ್ ಮತ್ತು 230 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡು ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಬಿಎಸ್ ಎಂಜಿನ್ ಕೂಡ ಇದೇ ಮಾದರಿಯಲ್ಲಿ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ.

ಪ್ರಸ್ತುತ ಪೋಕ್ಸ್ ವ್ಯಾಗನ್ ಪೊಲೊ ಎರಡು ಬಗೆಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.0 ಲೀಟರಿನ 3 ಸಿಲಿಂಡರ್‍ನ ಪೆಟ್ರೋಲ್ ಎಂಜಿನ್, 75 ಬಿಹೆಚ್‍ಪಿ ಪವರ್ ಮತ್ತು 153 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡನೇ ಬಗೆಯ 1.5 ಲೀಟರಿನ 4 ಸಿಲಿಂಡರ್‍ನ ಡೀಸೆಲ್ ಎಂಜಿನ್, 88.5 ಬಿಹೆಚ್‍ಪಿ ಪವರ್ ಮತ್ತು 230 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡು ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಬಿಎಸ್ ಎಂಜಿನ್ ಕೂಡ ಇದೇ ಮಾದರಿಯಲ್ಲಿ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ.

ವೆಂಟೊ ಸೆಡಾನ್‍ನ 1.6 ಪೆಟ್ರೋಲ್ ಮತ್ತು 1.5 ಡೀಸೆಲ್ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆದರೆ 1.2 ಪೆಟ್ರೋಲ್ ಮತ್ತು 1.5 ಡೀಸೆಲ್ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಂಪನಿಯು ಮೊದಲ ಬಾರಿಗೆ ಬಿಎಸ್-6 ಪ್ರೇರಿತ 1.6 ಲೀಟರ್ ಪೆಟ್ರೋಲ್ ಎಂಜಿನ್‍ನೊಂದಿಗೆ ವೆಂಟೊ ಸೆಡಾನ್ ಅನ್ನು ಬಿಡುಗಡೆಗೊಳಿಸುತ್ತಿದೆ.

ಫೋಕ್ಸ್ ವ್ಯಾಗನ್ ತಮ್ಮ ಪೊಲೊ ಜಿಟಿ ಮಾದರಿಗಳನ್ನು ಕೂಡ ಬಿಎಸ್-6 ಎಂಜಿನ್ ಆಗಿ ನವೀಕರಿಸುವ ಸಾಧ್ಯತೆಗಳಿವೆ. ಪೊಲೊ ಜಿಟಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 103.2 ಬಿಹೆಚ್‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರಿನ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 108.6 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ 7 ಸ್ಪೀಡ್ ಡಿಎಸ್‍ಜಿ ಡ್ಯುಯಲ್ ಕ್ಲಚ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಡೀಸೆಲ್ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಕಂಪನಿಯು ಇತ್ತೀಚೆಗೆ ಪೊಲೊ ಮತ್ತು ವೆಂಟೊ ಫೇಸ್‍ಲಿಫ್ಟ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಮುಂಬರುವ ಬಿಎಸ್-6 ಎಂಜಿನ್ ಹೊರತುಪಡಿಸಿ ಯಾವುದೇ ಇತರೆ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನು ಬಿಡುಗಡೆಗೊಳಿಸುವವರೆಗೆ ಕಾಯಬೇಕಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಫೋಕ್ಸ್ ವ್ಯಾಗನ್ ಕಂಪನಿಯು ದೇಶಿಯ ಮಾರುಕಟ್ಟೆಗೆ ಹೊಸ ಟಿ-ರಾಕ್ ಎಂಬ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಎಸ್‍ಯುವಿಯು ಕಿಯಾ ಸಲ್ಟೋಸ್ ಎಸ್‍ಯುವಿಗೆ ಪೈಪೋಟಿಯನ್ನು ನೀಡಲಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕೇಂದ್ರ ಸರ್ಕಾರವು ಮುಂದಿನ ವರ್ಷ ಏಪ್ರೀಲ್ ತಿಂಗಳಲ್ಲಿ ಜಾರಿಗೊಳಿಸುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಲು ಜನಪ್ರಿಯ ವಾಹನ ತಯಾರಕರು ಸಜ್ಜಾಗುತ್ತಿವೆ. ಕೆಲವು ಕಂಪನಿಗಳು ತಮ್ಮ ಶ್ರೇಣಿಯ ಕೆಲವು ಡೀಸೆಲ್ ಎಂಜಿನ್‍ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದರೆ, ಇನ್ನೂ ಕೆಲವು ಕಂಪನಿಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸುತ್ತಿವೆ.
Source: MotorBeam


Click it and Unblock the Notifications








