ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊ
ಫೋಕ್ಸ್‌ವ್ಯಾಗನ್ ಕಂಪನಿಯ ವೆಂಟೊ ಹಾಗೂ ಪೊಲೊ ಮಾದರಿಯ ನವೀಕೃತ ಕಾರುಗಳು ಶೀಘ್ರದಲ್ಲಿಯೇ ಬಿಡುಗಡೆಯಾಗಲಿವೆ. ಬಿಡುಗಡೆಯ ದಿನಗಳು ಹತ್ತಿರವಾದಂತೆ ನಾವು ಈ ಮಾದರಿಯ ಕಾರುಗಳ ಮರೆಮಾಡಿದ ಚಿತ್ರಗಳನ್ನು ಕಾಣುತ್ತಿದ್ದೇವೆ. ಇತ್ತೀಚಿಗೆ ನವೀಕೃತ ಮಾದರಿಯ ಕಾರುಗಳ ಚಿತ್ರಗಳನ್ನು ಕ್ಯಾಮರಾದಲ್ಲಿ ರಹಸ್ಯವಾಗಿ ಸೆರೆಹಿಡಿಯಲಾಗಿದ್ದು, ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದ್ದು, ಈ ಕಾರುಗಳು ಸ್ಪಾಟ್ ಟೆಸ್ಟ್ ನ ಅಂತಿಮ ಹಂತದಲ್ಲಿರುವಂತೆ ಕಾಣುತ್ತಿವೆ.

ಜಿಗ್‍ವ್ಹೀಲ್ಸ್ ಇತ್ತೀಚಿಗೆ ಸೆರೆಹಿಡಿದಿರುವ ಈ ಚಿತ್ರಗಳಲ್ಲಿ, ವೆಂಟೊ ಕಾರಿನ ಸೈಡ್ ಪ್ರೊಫೈಲ್ ಅನ್ನು ಕಾಣಬಹುದು. ಇದರ ಜೊತೆಗೆ ನವೀಕೃತ ಆವೃತ್ತಿಯು ಹೊಸ ಅಲಾಯ್ ವ್ಹೀಲ್‍ಗಳನ್ನು ಹೊಂದಲಿರುವುದನ್ನು ಕಾಣಬಹುದು. ಕಾರಿನ ಮುಂಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣುವ ಹೊಸ ಹನಿಕೂಂಬ್ ಮೆಶ್ ಗ್ರಿಲ್ ಅನ್ನು ಕಾಣಬಹುದು. ಬಿಡುಗಡೆಯಾಗಲಿರುವ ವೆಂಟೊ ಕಾರಿನ ಮುಂಭಾಗದ ಬಂಪರ್ ಈಗಿರುವ ಕಾರಿನಲ್ಲಿರುವ ಬಂಪರ್‍ಗಿಂತ ಹೆಚ್ಚು ಆಂಗ್ಯುಲರ್ ಆಗಿದೆ.

ಫೆಂಡರ್ ಅನ್ನು ಸಹ ತಿರುಚಲಾಗಿದೆ. ಈ ಮೊದಲು ಸೋರಿಕೆಯಾದ ಚಿತ್ರಗಳಲ್ಲಿ ಕಾರಿನ ಹಿಂಭಾಗವನ್ನು ಸೆರೆಹಿಡಿಯಲಾಗಿತ್ತು. ಇದರಲ್ಲಿ ಬೂಟ್ ಲಿಡ್ ಹಾಗೂ ರೇರ್ ಬಂಪರ್‍ಗಳನ್ನು ಅಪ್‍ಡೇಟ್ ಮಾಡಲಾಗಿರುವುದನ್ನು ಕಾಣಬಹುದಾಗಿತ್ತು. ಹೊಸ ವೆಂಟೊ ಕಾರಿನ ಜೊತೆಗೆ, ಫೋಕ್ಸ್‌ವ್ಯಾಗನ್ ಪೊಲೊವಿನ ಚಿತ್ರವನ್ನು ಸಹ ಸೆರೆ ಹಿಡಿಯಲಾಗಿದೆ. ಈ ಕಾರು, ಮಾರುಕಟ್ಟೆಯಲ್ಲಿರುವ ಕಾರುಗಳನ್ನೇ ಹೋಲುವುದಾದರೂ ಹಿಂಭಾಗದಲ್ಲಿರುವ ಬಂಪರ್‌ನಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ.

ಆದರೆ ರಹಸ್ಯವಾಗಿ ಸೆರೆಹಿಡಿಯಲಾಗಿರುವ ಈ ಚಿತ್ರಗಳಲ್ಲಿ ಪೊಲೊ ಕಾರಿನ ಹಿಂಭಾಗ ಮಾತ್ರ ಗೋಚರಿಸುತ್ತದೆ. ಪೊಲೊ ಕಾರು ವೆಂಟೊ ಕಾರಿನ ಸೈಡ್ ಪ್ರೊಫೈಲ್ ಹಾಗೂ ಫ್ರಂಟ್‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ. ಈ ಎರಡೂ ಕಾರುಗಳು ಸಾಕಷ್ಟು ಸಮಯದಿಂದಲೂ ಮಾರುಕಟ್ಟೆಯಲ್ಲಿದ್ದು, ಇವುಗಳನ್ನು ಅಪ್‍ಡೇಟ್ ಮಾಡುವುದು ಅಗತ್ಯವಾಗಿತ್ತು. ಆದ್ದರಿಂದ, ವೆಂಟೊ ಹಾಗೂ ಪೊಲೊ ಮಾದರಿಗಳನ್ನು ಸಾಕಷ್ಟು ಅಪ್‍ಡೇಟ್ ಮಾಡಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ನವೀಕೃತ ಪೋಲೊ ಹಾಗೂ ವೆಂಟೊ ಕಾರುಗಳು ಒಂದೇ ರೀತಿಯ 1.0 ಲೀಟರ್ ಹಾಗೂ 1.6 ಲೀಟರ್ ಎಂಪಿಐ ಎಂಜಿನ್ ಹೊಂದಿರಲಿವೆ. ಈ ಎಂಜಿನ್‍ಗಳು ಮುಂದಿನ ವರ್ಷದ ಏಪ್ರಿಲ್‍ನಿಂದ ಜಾರಿಗೆ ಬರಲಿರುವ ಬಿಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತೆ ಇರಲಿವೆ. ಇದರ ಜೊತೆಗೆ, ಜಿಟಿ ಟಿಎಸ್ಐ ಹಾಗೂ ವೆಂಟೊ ಟಿಎಸ್ಐನಲ್ಲಿ ಕಂಡುಬರುವ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಅನ್ನು ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವಂತಹ 1.0 ಲೀಟರ್ ಟಿಎಸ್ಐ ಮೋಟಾರ್‍ಗೆ ಬದಲಾಯಿಸುವ ಸಾಧ್ಯತೆಗಳಿವೆ.

ಈ ಎಂಜಿನ್ ಅನ್ನು 1.0 ಲೀಟರ್‌ನಿಂದ 95 ಬಿಹೆಚ್‌ಪಿ ಉತ್ಪಾದಿಸುವಂತೆ ಹಾಗೂ 1.6 ಲೀಟರ್‌ನಿಂದ 115 ಬಿಹೆಚ್‌ಪಿ ಉತ್ಪಾದಿಸುವಂತೆ ಎರಡು ರೀತಿಯಲ್ಲಿ ಟ್ಯೂನ್ ಮಾಡಬಹುದಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಈ ಎರಡೂ ಕಾರುಗಳು ಬಹಳ ಹಿಂದಿನಿಂದಲೂ ಇದ್ದು ಜನರು ಪೊಲೊ ಹಾಗೂ ವೆಂಟೊಗಳೆರಡನ್ನೂ ಇಷ್ಟಪಡುತ್ತಾರೆ. ಹೊಸ ತಲೆಮಾರಿನ ಮಾದರಿಗಳು ಬರುವವರೆಗೆ, ಕಂಪನಿಯು ಎರಡೂ ಕಾರುಗಳ ನವೀಕೃತ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತದೆ. ಅಪ್‍ಡೇಟ್ ಆಗಿರುವ ಪೋಲೊ ಹಾಗೂ ವೆಂಟೊ ಕಾರುಗಳು, ಗ್ರಾಹಕರನ್ನು, ವಿಶೇಷವಾಗಿ ಯುವಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ.


Click it and Unblock the Notifications








