ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಥೈಲ್ಯಾಂಡ್ ನಂತರ ಭಾರತದಲ್ಲಿ ನ್ಯೂ ಜನರೇಷನ್ ಸಿಟಿ ಸೆಡಾನ್ ಕಾರು ಬಿಡುಗಡೆಗೆ ಸಿದ್ದವಾಗಿರುವ ಹೋಂಡಾ ಕಂಪನಿಯು ಆನ್‌ಲೈನ್ ಬುಕ್ಕಿಂಗ್ ಆರಂಭಿಸಿದ್ದು, ಆಸಕ್ತ ಗ್ರಾಹಕರು ರೂ.5 ಸಾವಿರ ಮುಂಗಡದೊಂದಿಗೆ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ದಾಖಲಿಸಬಹುದಾಗಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಹೋಂಡಾ ಕಂಪನಿಯು ಹೊಸ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಉತ್ಪಾದನೆಯನ್ನು ಈಗಾಗಲೇ ಉತ್ತರಪ್ರದೇಶದ ನೋಯ್ದಾದಲ್ಲಿನ ಘಟಕದಲ್ಲಿ ಅಧಿಕೃತವಾಗಿ ಆರಂಭಿಸಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರನ್ನು ಮುಂದಿನ ತಿಂಗಳು ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹೊಸ ಕಾರು ಹಳೆಯ ಆವೃತ್ತಿಗಿಂತಲೂ ಭಾರೀ ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿದ್ದು, 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಮೂಲಕ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲೇ ಆಕರ್ಷಕ ಲುಕ್ ಹೊಂದಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಸಿ-ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಸಿಟಿ ಕಾರು ಸದ್ಯ ಅಗ್ರಸ್ಥಾನದಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ನ್ಯೂ ಜನರೇಷನ್ ಮಾದರಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಜಪಾನ್‌ನಲ್ಲಿ ಬಳಕೆ ಮಾಡಲಾಗುತ್ತಿದ್ದ ಪ್ರಾಚೀನ ಆಯುಧ ಮಾದರಿಯಾದ ಕತಾನಾ ಬ್ರೆಡ್ ಮಾದರಿಯಲ್ಲಿ ಹೊಸ ಸಿಟಿ ಕಾರಿನ ಮುಂಭಾಗದ ಡಿಸೈನ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ತಾಂತ್ರಿಕ ವಿಚಾರದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಸಿಟಿ ಸೆಡಾನ್ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಮಾದರಿಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಕಾರು ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಹೊಸ ಸಿಟಿ ಕಾರಿನಲ್ಲಿ ಡ್ಯುಯಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 119-ಬಿಎಚ್‌ಪಿ ಮತ್ತು 155-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, 130-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಥೈಲ್ಯಾಂಡ್‌ನಲ್ಲಿ ಹೊರತುಪಡಿಸಿ ಭಾರತದಲ್ಲಿ ಬಿಡುಗಡೆ ಮಾಡುತ್ತಿಲ್ಲ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಇನ್ನು ಹೊಸ ಕಾರು ಸಿವಿಕ್ ಮಾದರಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸಿಟಿ ಝೆಡ್ಎಕ್ಸ್ ನಲ್ಲಿ ಹೋಂಡಾ ಲೇನ್ ವಾಚ್ ಕ್ಯಾಮೆರಾ ಸಿಸ್ಟಂ ಇದ್ದು, ಇದನ್ನು ಎಡ ಭಾಗದ ರಿಯರ್ ವ್ಯೂ ಮಿರರ್‌ನಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಹೊಸ ಹೋಂಡಾ ಲೋ ಸ್ಪೆಕ್ ಮಾದರಿಯ ಇಂಟಿರಿಯರ್ ಚಿತ್ರವನ್ನು ಈಗಾಗಲೇ ಬಹಿರಂಗವಾಗಿದ್ದು, ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಇನ್‌ಟೈನ್‌ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಟಾಪ್ ವೆರಿಯೆಂಟ್ ಆಗಿರುವ ಹೋಂಡಾ ಸಿಟಿ ಝಡ್ಎಕ್ಸ್ ನಲ್ಲಿ ಹಲವಾರು ಹೊಸ ಫೀಚರ್ಸ್‍ಗಳನ್ನು ಅಳವಡಿಸಿದ್ದು, ಕಟಿಂಗ್ ಎಡ್ಜ್ ಎಲ್ಇಡಿ ಹೆಡ್‍ ಲೈಟ್, ಎಲ್ಇಡಿ ಟೈಲ್ ಲ್ಯಾಂಪ್, ಆರು ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ನಂತಹ ಹಲವಾರು ಉನ್ನತ ಮಟ್ಟದ ಫೀಚರ್ಸ್‌ಗಳನ್ನು ಹೊಂದಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ನ್ಯೂ ಜನರೇಷನ್ ಸಿಟಿ ಸೆಡಾನ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಹೋಂಡಾ

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್‍‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳು ಹೊಸ ಸಿಟಿ ಕಾರಿನಲ್ಲೂ ಅಳವಡಿಸಿರುವ ಸಾಧ್ಯತೆಗಳಿದ್ದು, 2020ರ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
2020 Honda City Bookings Commence Ahead Of India Launch. Read in Kannada.
Story first published: Thursday, June 25, 2020, 19:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X