ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ದೇಶದ ಜನಪ್ರಿಯ ಟಾಟಾ ಮೋಟಾರ್ಸ್ ಕಂಪನಿಯು ಕಾರು ಖರೀದಿ ಯೋಜನೆಯಲ್ಲಿರುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್‌ಗಳನ್ನು ಘೋಷಿಸಿದ್ದು, ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ನೀಡುತ್ತಿದೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕರೋನಾ ವಿರುದ್ಧ ಹೋರಾಟಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ಜನಮೆಚ್ಚುಗೆಗೆ ಕಾರಣವಾಗಿರುವ ಟಾಟಾ ಕಂಪನಿಯು ಇದೀಗ ಕಾರು ಮಾರಾಟ ಪುನಾರಂಭವಾದ ನಂತರ ಕರೋನಾ ವಾರಿಯರ್ಸ್‌ಗೆ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ವಿವಿಧ ಕಾರು ಮಾದರಿಗಳ ಖರೀದಿಯ ಮೇಲೆ ಗರಿಷ್ಠ ರೂ.45 ಸಾವಿರಷ್ಟು ಆಫರ್ ನೀಡುವ ಮೂಲಕ ಕರೋನಾ ವಾರಿಯರ್ಸ್ ಸೇವೆಗೆ ಧನ್ಯವಾದ ತಿಳಿಸಿದೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕಾರು ಖರೀದಿ ಯೋಜನೆಯಲ್ಲಿರುವ ಡಾಕ್ಟರ್, ಹೆಲ್ತ್ ಕೇರ್ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೆ ಆಫರ್ ಲಭ್ಯವಿದ್ದು, ಟಾಟಾ ಉತ್ಪಾದನೆಯ ಟಿಗೋರ್, ನೆಕ್ಸಾನ್ ಮತ್ತು ಹ್ಯಾರಿಯರ್ ಕಾರುಗಳ ಖರೀದಿಯ ಮೇಲೆ ರೂ.45 ಸಾವಿರದಷ್ಟು ಆಫರ್ ಪಡೆದುಕೊಳ್ಳಬಹುದಾಗಿದೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಈ ಆಫರ್ ಮೇ 31ರ ತನಕ ಲಭ್ಯವಿರಲಿದ್ದು, ಸಾಮಾನ್ಯ ಗ್ರಾಹಕರಿಗೆ ದೀರ್ಘಾವಧಿಯ ಇಎಂಐ, ಸರಳ ಸಾಲಸೌಲಭ್ಯಗಳು ಸೇರಿ ವಿವಿಧ ಮಾದರಿಯ ಆಫರ್‌ಗಳು ಲಭ್ಯವಿವೆ. ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಇದೀಗ ವಾಹನ ಮಾರಾಟಕ್ಕೆ ಷರತ್ತುಬದ್ದ ಅವಕಾಶ ನೀಡಿರುವುದರಿಂದ ಗ್ರಾಹಕರ ಸೆಳೆಯಲು ಆಟೋ ಕಂಪನಿಗಳು ಹರಸಾಹಸಪಡುತ್ತಿವೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬಹುತೇಕ ಕಾರು ಖರೀದಿದಾರರು ಖರೀದಿ ಯೋಜನೆಯನ್ನು ಮುಂದೂಡುತ್ತಿದ್ದು, ಇದರಿಂದ ಸಂಕಷ್ಟದಲ್ಲಿರುವ ಆಟೋ ಕಂಪನಿಗಳು ನಿಗದಿತ ಮಟ್ಟದ ಗ್ರಾಹಕರನ್ನು ಸೆಳೆಯಲು ಪರದಾಟುತ್ತಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಸಂಕಷ್ಟದ ಅವಧಿಯಲ್ಲಿ ಬಹುತೇಕ ಆಟೋ ಕಂಪನಿಗಳು ವಿವಿಧ ಮಾದರಿಯ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಸಾಮಾನ್ಯ ಗ್ರಾಹಕರ ಜೊತೆಗೆ ಕರೋನಾ ವಾರಿಯರ್ಸ್‌ಗೂ ವಿಶೇಷ ಆಫರ್ ನೀಡಿದೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇನ್ನು ಮಾಹಾಮಾರಿ ಕರೋನಾ ವೈರಸ್ ಹೊಡೆದೊಡಿಸಲು ಆಟೋ ಉತ್ಪಾದನಾ ಕಂಪನಿಗಳಲ್ಲೇ ಗರಿಷ್ಠ ಪ್ರಮಾಣದ ಸಹಾಯಧನ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಸರ್ಕಾರಕ್ಕೆ ನೆರವು ನೀಡುವುದರ ಜೊತೆಗೆ ದಿನಂಪ್ರತಿ ದೇಶದ ವಿವಿಧಡೆ ಲಕ್ಷಾಂತರ ಜನರ ಹಸಿವು ನೀಗಿಸುವ ಮಹತ್ಕಾರ್ಯ ಮಾಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸರ್ಕಾರಕ್ಕೆ ವಿವಿಧ ಹಂತಗಳಲ್ಲಿ ಹಣಕಾಸಿನ ಸಹಾಯ ಮಾಡಿರುವ ಟಾಟಾ ಸಮೂಹ ಸಂಸ್ಥೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿವೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮೊದಲ ಮತ್ತು ಎರಡನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಕೋಟ್ಯಾಂತರ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ ಸಾವಿರಾರು ಸಂಘ-ಸಂಸ್ಥೆಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಬಡವರಿಗೆ ಊಟ ವಿತರಣೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇದರಲ್ಲಿ ಟಾಟಾ ಮೋಟಾರ್ಸ್ ಕೂಡಾ ಒಂದಾಗಿದ್ದು, ಇದುವರೆಗೆ ದೇಶದ ವಿವಿಧಡೆ 1.50 ಲಕ್ಷ ಜನರಿಗೆ ಸಿದ್ದ ಆಹಾರದ ಪೊಟ್ಟಣಗಳನ್ನು ಮತ್ತು ಅಗತ್ಯ ಅಡುಗೆ ಪದಾರ್ಥಗಳ ಪೊಟ್ಟಣಗಳನ್ನು ವಿತರಣೆ ಮಾಡಿದೆ.

ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಜೊತೆಗೆ ಆಟೋ ಉತ್ಪಾದನಾ ಕಂಪನಿಗಳಲ್ಲೇ ಅತಿ ಹೆಚ್ಚು ದೇಣಿಗೆ ನೀಡಿರುವ ಟಾಟಾ ಸಮೂಹ ಸಂಸ್ಥೆಗಳು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ರೂ.1,500 ಕೋಟಿ ಸಹಾಯ ಘೋಷಿಸಿದ್ದು, ಅರ್ಧದಷ್ಟು ಧನಸಹಾಯ ಮತ್ತು ಇನ್ನುಳಿದ ಅರ್ಧ ಹಣದಲ್ಲಿ ವೈದ್ಯಕೀಯ ಉಪಕರಣಗಳ ಪೂರೈಕೆಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿದೆ.

More from DriveSpark

Article Published On: Thursday, May 14, 2020, 21:34 [IST]
English summary
Tata Motors has announced offers for COVID warriors. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+