ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಮುಂದಿನ ತಿಂಗಳು ಜುಲೈ ಆರಂಭದಲ್ಲಿ ಹೊಸ ಮಾದರಿಯ 2020ರ ಸಿಟಿ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಕಾರು ಶಾರ್ಪ್ ಡಿಸೈನ್‌ನೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹೊಸ ವಿನ್ಯಾಸದ ಸಿಟಿ ಸೆಡಾನ್ ಮಾದರಿಯನ್ನು ಕಳೆದ ಮಾರ್ಚ್‌ನಲ್ಲೇ ಬಿಡುಗಡೆಗೆ ಸಿದ್ದವಾಗಿದ್ದ ಹೋಂಡಾ ಕಂಪನಿಯ ಯೋಜನೆಗೆ ಕರೋನಾ ವೈರಸ್ ಬ್ರೇಕ್ ಹಾಕಿದ್ದು, ಹೊಸ ಕಾರಿನ ಬಿಡುಗಡೆ ಇದೀಗ ಲಾಕ್‌ಡೌನ್ ವಿನಾಯ್ತಿ ನಂತರ ಬಿಡುಗಡೆ ಮಾಡಲಾಗುತ್ತಿದೆ. ಸಿ-ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಸಿಟಿ ಕಾರು ಅಗ್ರಸ್ಥಾನದಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ 2020ರ ಮಾದರಿಯಲ್ಲೇ ಭಾರೀ ಬದಲಾವಣೆ ಪಡೆದುಕೊಂಡಿದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಜಪಾನ್‌ನಲ್ಲಿ ಬಳಕೆ ಮಾಡಲಾಗುತ್ತಿದ್ದ ಪ್ರಾಚಿನ ಆಯುಧ ಮಾದರಿಯಾದ ಕತಾನಾ ಬ್ರೆಡ್ ಮಾದರಿಯಲ್ಲಿ ಹೊಸ ಸಿಟಿ ಕಾರಿನ ಮುಂಭಾಗದ ಡಿಸೈನ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ತಾಂತ್ರಿಕ ವಿಚಾರದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಸಿಟಿ ಸೆಡಾನ್ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಮಾದರಿಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಕಾರು ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹೊಸ ಸಿಟಿ ಕಾರಿನಲ್ಲಿ ಡ್ಯುಯಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 119-ಬಿಎಚ್‌ಪಿ ಮತ್ತು 155-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, 130-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಥೈಲ್ಯಾಂಡ್‌ನಲ್ಲಿ ಹೊರತುಪಡಿಸಿ ಭಾರತದಲ್ಲಿ ಬಿಡುಗಡೆ ಮಾಡುತ್ತಿಲ್ಲ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಇನ್ನು ಹೊಸ ಕಾರು ಸಿವಿಕ್ ಮಾದರಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸಿಟಿ ಝೆಡ್ಎಕ್ಸ್ ನಲ್ಲಿ ಹೋಂಡಾ ಲೇನ್ ವಾಚ್ ಕ್ಯಾಮೆರಾ ಸಿಸ್ಟಂ ಇದ್ದು, ಇದನ್ನು ಎಡ ಭಾಗದ ರಿಯರ್ ವ್ಯೂ ಮಿರರ್‌ನಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹೊಸ ಹೋಂಡಾ ಲೋ ಸ್ಪೆಕ್ ಮಾದರಿಯ ಇಂಟಿರಿಯರ್ ಚಿತ್ರವನ್ನು ಈಗಾಗಲೇ ಬಹಿರಂಗವಾಗಿದ್ದು, ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಇನ್‌ಟೈನ್‌ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಟಾಪ್ ವೆರಿಯೆಂಟ್ ಆಗಿರುವ ಹೋಂಡಾ ಸಿಟಿ ಝಡ್ಎಕ್ಸ್ ನಲ್ಲಿ ಹಲವಾರು ಹೊಸ ಫೀಚರ್ಸ್‍ಗಳನ್ನು ಅಳವಡಿಸಿದ್ದು, ಕಟಿಂಗ್ ಎಡ್ಜ್ ಎಲ್ಇಡಿ ಹೆಡ್‍ ಲೈಟ್, ಎಲ್ಇಡಿ ಟೈಲ್ ಲ್ಯಾಂಪ್, ಆರು ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ನಂತಹ ಹಲವಾರು ಉನ್ನತ ಮಟ್ಟದ ಫೀಚರ್ಸ್‌ಗಳನ್ನು ಹೊಂದಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಶಾರ್ಪ್ ಡಿಸೈನ್‌ನೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ ಸೆಡಾನ್

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್‍‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳು ಹೊಸ ಸಿಟಿ ಕಾರಿನಲ್ಲೂ ಅಳವಡಿಸಿರುವ ಸಾಧ್ಯತೆಗಳಿದ್ದು, 2020ರ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುತ್ತದೆ.

Article Published On: Wednesday, June 17, 2020, 21:13 [IST]
English summary
2020 Honda City Details Officially Revealed Ahead Of Launch In July. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+