ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಹೋಂಡಾ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಬಿಎಸ್-6 ಜಾಝ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಬಿಎಸ್-6 ಹೋಂಡಾ ಜಾಝ್ ಕಾರು ಹಲವು ಹೊಸ ಫೀಚರ್‍‍ಗಳೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಹೊಸ ಹೋಂಡಾ ಜಾಝ್ ಕಾರಿನ ವೆರಿಯೆಂಟ್ ಗಳ(ರೂಪಾಂತರಗಳ) ಮಾಹಿತಿಗಳು ಸೋರಿಕೆಯಾಗಿದೆ. ಈ ಸೊರಿಕೆಯಾದ ಮಾಹಿತಿಯನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ ಹೊಸ ಹೋಂಡಾ ಜಾಝ್ ಕಾರು ವಿ,ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ವಿ ರೂಪಾಂತರವು ಎಲ್ಇಡಿ ಡಿಆರ್ಎಲ್ ಮತ್ತು ಕ್ರೂಸ್ ಕಂಟ್ರೋಲ್ ನಂತಹ ಫೀಚರ್ ಗಳನ್ನು ಹೊಂದಿರಲಿದೆ. ವಿಎಕ್ಸ್ ರೂಪಾಂತರವು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಅನ್ನು ಹೊಂದಿರಲಿದೆ.

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಇನ್ನು ಹೋಂಡಾ ಜಾಝ್ ಝಡ್ಎಕ್ಸ್ ರೂಪಾಂತರವು ಎಲೆಕ್ಟ್ರಿಕ್ ಸನ್ ರೂಫ್, ಎಲ್ಇಡಿ ಫಾಗ್ ಲ್ಯಾಂಪ್, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್‍ಲೈಟ್ ಅನ್ನು ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಹೊಸ ಹೋಂಡಾ ಜಾಝ್ ಕಾರಿನ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹೊಸ ಹೋಂಡಾ ಜಾಝ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಹೋಂಡಾ ಕಂಪನಿಯ ಅಧಿಕೃತ ಡೀಲರ್ ಬಳಿ ತೆರಳಿ ಟೋಕನ್ ಮೊತ್ತ ರೂ.21,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಇನ್ನು ಹೊಸ ಜಾಝ್ ಕಾರಿಗಾಗಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರು ಟೋಕನ್ ಮೊತ್ತ ರೂ.5,000 ಪಾವತಿಸಿ ಕಾಯ್ದಿರಿಸಬಹುದಾಗಿದೆ. ಈ ಹೊಸ ಜಾಝ್ ಈ ಹೊಸ ಜಾಝ್ ಕಾರು ಇದೇ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಈಗಗಾಲೇ ಈ ಹೊಸ ಜಾಝ್ ಕಾರು ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ. ಈ ಬಿಎಸ್-6 ಜಾಝ್ ಕಾರು ಡೀಲರ್ ಬಳಿ ತಲುಪಿರುವ ಚಿತ್ರಗಳು ಆನ್‍‍ಲೈನ್‍‍ನಲ್ಲಿ ಬಹಿರಂಗವಾಗಿದೆ. ಹೊಸ ಹೋಂಡಾ ಜಾಝ್ ಕಾರಿನ ಕೆಲವು ಬದಲಾವಣೆಗಳೊಂದಿಗೆ ಹೊಸ ಫೀಚರ್ಸ್‍ಗಳನ್ನು ಅಳವಡಿಸಲಾಗುತ್ತದೆ.

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಈ ಹೊಸ ಕಾರಿನ ಡ್ಯಾಶ್‌ಬೋರ್ಡ್ ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಈ ಹೊಸ ಹೋಂಡಾ ಜಾಝ್ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍ಪ್ಲೇಯನ್ನು ಕನೆಕ್ಟ್ ಆಗಿರುವ ಏಳು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ಲೈಮೆಂಟ್ ಕಂಟ್ರೋಲ್ ಮತ್ತು ಪುಶ್ ಬಟನ್ ಅನ್ನು ಹೊಂದಿರಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಹೊಸ ಹೋಂಡಾ ಜಾಝ್ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಈ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುತ್ತದೆ. ಈ ಹೊಸ ಕಾರಿನಲ್ಲಿ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಹೊಸ ಹೋಂಡಾ ಜಾಝ್ ಕಾರಿನ ಮಾಹಿತಿ ಬಹಿರಂಗ

ಹೊಸ ಹೋಂಡಾ ಜಾಝ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಈ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್-ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರೇರ್ ಕ್ಯಾಮೆರಾ, ಐಎಸ್‌ಒಫಿಕ್ಸ್ ಮೌಂಟ್ಸ್ ಅನ್ನು ಹೊಂದಿರುತ್ತದೆ. ಈ ಕಾರಿನಲ್ಲಿ ಒಟ್ಟು ಆರು ಏರ್‌ಬ್ಯಾಗ್‌‍ಗಳನ್ನು ಅಳವಡಿಸಲಾಗುತ್ತದೆ.

Article Published On: Tuesday, August 25, 2020, 9:32 [IST]
English summary
2020 Honda Jazz Variant details leaked. Read In Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+