Just In
- 38 min ago
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- 12 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 12 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 12 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
Don't Miss!
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- News
ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್‍ಯುವಿ
ಹೋಂಡಾ ಕಂಪನಿಯು ಹೆಚ್‌ಆರ್-ವಿ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಅನ್ನು 2013ರಲ್ಲಿ ಮೊದಲ ಬಾರಿಗೆ ಜಪಾನ್‌ನಲ್ಲಿ ಬಿಡುಗಡೆಗೊಳಿಸಿತ್ತು. ಅದೇ ವರ್ಷದಲ್ಲಿ ಈ ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹೋಂಡಾ ಕಂಪನಿಯು ಯೋಜನೆ ರೂಪಿಸಿತು.

ಆದರೆ ಹೋಂಡಾ ಕಂಪನಿಯು ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ತುಂಬಾ ದುಬಾರಿ ಎಂದು ಪರಿಗಣಿಸಿದ್ದರು. ಇದೇ ಕಾರಣದಿಂದ ಅಂದು ಹೋಂಡಾ ಕಂಪನಿಯು ಹೆಚ್‌ಆರ್-ವಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿರ್ಧಾರದಿಂದ ಹಿಂದೆ ಸರಿದರು. ಆದರೆ ಇಂದು ಭಾರತೀಯ ಮಾರುಕಟ್ಟೆಯು ಭಾರೀ ಬೆಳವಣಿಗೆಯನ್ನು ಕಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ನಂತಹ ಕ್ರಾಸ್‌ಒವರ್‌ಗಳು ಉತ್ತಮ ಯಶಸ್ವಿಯನ್ನು ಸಾಧಿಸಿದೆ. ಇದರಿಂದ ಹೋಂಡಾ ಕಂಪನಿಯು ಭಾರತದಲ್ಲಿ ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಇದೀಗ ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೆಚ್‌ಆರ್-ವಿ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಆದರೆ ಹೋಂಡಾ ಕಂಪನಿಯು ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದರು. ಇದೀಗ ಈ ಎಸ್‍ಯುವಿಯ ಬಿಡುಗಡೆಯನ್ನು ಮುಂದಿನ ವರ್ಷದ ಮೇ ತಿಂಗಳಿಗೆ ಮುಂದೂಡಲಾಗಿದೆ ಎಂದು ವರದಿಗಳು ಪ್ರಕಟವಾಗಿದೆ.
MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಹೊಸ ಹೆಚ್‌ಆರ್-ವಿ ಎಸ್‍ಯುವಿಯು 4,400 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,590 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,610 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಹೊಸ ಹೆಚ್‌ಆರ್-ವಿ ಎಸ್‍ಯುವಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಇದರೊಂದಿಗೆ ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯನ್ನು ನೀಡಲಾಗಿದೆ. ಹೋಂಡಾ ಕಾರುಗಳ ಸರಣಿಯಲ್ಲಿ ಹೆಚ್‌ಆರ್-ವಿ ಎಸ್‍ಯುವಿಯು ಸಿಆರ್-ವಿ ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಈ ಎಸ್‍ಯುವಿಯನು ಜಪಾನ್ ಮಾರುಕಟ್ಟೆಯಲ್ಲಿ ವೆಝೆಲ್ ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಗಾಗಿ ಹೆಸರು ಬದಲಾಯಿಸಿರುವ ಹೋಂಡಾ ಸಂಸ್ಥೆಯು ಜಾಝ್ ಕಾರಿನ ಪ್ಲಾಟ್‍ಫಾರ್ಮ್‍ನಲ್ಲೇ ಹೊಸ ಎಸ್‍ಯುವಿಯನ್ನು ಅಭಿವೃದ್ದಿಗೊಳಿಸಿ ಹೆಚ್‌ಆರ್-ವಿ ಹೆಸರಿನಲ್ಲಿ ಬಿಡುಗಡೆಗೊಳಿಸಬಹುದು.

ಹಲವಾರು ಪ್ರೀಮಿಯಂ ಫೀಚರುಗಳನ್ನು ಹೊಂದಿರುವ ಹೋಂಡಾ ಹೆಚ್ಆರ್-ವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.