ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್
ಟೊಯೊಟಾ ಕಂಪನಿಯು ತನ್ನ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಅನಾವರಣಗೊಳಿಸಿತ್ತು. ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ. ಈ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಈ ಹೊಸ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಟೊಯೊಟಾ ಕಂಪನಿಯು ಸಜ್ಜಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಮೊದಲ ಬಾರಿಗೆ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಸ್ಪಾಟ್ ಟೆಸ್ಟ್ ನಡೆಸಿದೆ. ಈ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡುಸುತ್ತಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂಭಾಗ ಹೊಸ ವಿನ್ಯಾಸವನ್ನು ಹೊಂದಿದೆ. ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲೈಟ್, ಮೆಶ್ ಮಾದರಿಯ ದೊಡ್ಡದಾದ ಗ್ರಿಲ್, ಮರುರೂಪಿಸಿದ ಮುಂಭಾಗದ ಬಂಪರ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಹೊಸ ಎಸ್‍ಯುವಿಯ ಹಿಂಭಾಗದಲ್ಲಿ ಸ್ಲಿಮ್ಮರ್-ಕಾಣುವ ಎಲ್ಇಡಿ ಟೈಲ್-ಲೈಟ್ ಗಳನ್ನು ಅಳವಡಿಸಲಾಗಿದೆ. ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಸ್ಪೋರ್ಟಿಯರ್ ಟಾಪ್-ಸ್ಪೆಕ್ ‘ಲೆಜೆಂಡರ್' ಮಾದರಿಯೂ ಇದೆ. ಇದು ಸ್ಪ್ಲಿಟ್ ಗ್ರಿಲ್‌ನಲ್ಲಿ ಪ್ಯಾಕ್, ಎಲ್ಇಡಿ ಟರ್ನ್ ಇಂಡೀಕೆಟರ್ ಒಳಗೊಂಡಿರುವ ವಿಭಿನ್ನವಾದ ಬಂಪರ್ ಅನ್ನು ಹೊಂದಿದೆ.

ಇದರೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳಿಗೆ ವಿಶಿಷ್ಟ ಮಾದರಿಯನ್ನು ಹೊಂದಿರುವ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕ್ರೋಮ್ ಅಪ್ ಫ್ರಂಟ್ ಅನ್ನು ಬದಲಿಸುವ ಗ್ಲೋಸ್ ಬ್ಲ್ಯಾಕ್ ಫಿನಿಶ್, 20 ಇಂಚಿನ ಅಲಾಯ್ ವ್ಹೀಲ್ಸ್, ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಮತ್ತು ಹಿಂದಿನ ಬಂಪರ್ ಬೂಟ್ ಲೀಡ್ ನಲ್ಲಿ ಸಂಯೋಜಿಸಲ್ಪಟ್ಟಿವೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಇಂಟಿರಿಯರ್ ಬಗ್ಗೆ ಹೇಳುದಾದರೆ, ಹಿಂದಿನ ಮಾದರಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಪಲ್ ಕಾರ್ ಪ್ಲೇ ಹೊಂದಾಣಿಕೆಯೊಂದಿಗೆ ಬರುವ ದೊಡ್ಡದಾದ, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಸದಾಗಿ ಅಳವಡಿಸಲಾಗಿದೆ.

ಇದರೊಂದಿಗೆ ಸ್ವಲ್ಪ ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8-ವೇ ಪವರ್-ಹೊಂದಾಣಿಕೆ ಮಾಡುವ ಡ್ರೈವರ್ ಸೀಟ್, ಸಹ-ಚಾಲಕರ ಸೀಟುಗಳು ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಹ ಒಳಗೊಂಡಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಇನ್ನು ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು 360 ಡಿಗ್ರಿ ಕ್ಯಾಮೆರಾ. 7 ಏರ್‌ಬ್ಯಾಗ್‌ಗಳು ಮತ್ತು ಸಾಮಾನ್ಯ ಸುರಕ್ಷತಾ ಫೀಚರ್‌ಗಳ ಜೊತೆಗೆ 'ಟೊಯೋಟಾ ಸೇಫ್ಟಿ ಸೆನ್ಸ್' ಅನ್ನು ಸಹ ಹೊಂದಿದೆ.

ಈ ಎಸ್‍ಯುವಿಯ 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಪ್‌ಗ್ರೇಡ್ ಮಾಡಲಾಗಿದ್ದು, ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ನೀಡುತ್ತದೆ.

ಇನ್ನು ಈ ಎಸ್‍ಯುವಿಯಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಬಹುದು. ಟೊಯೊಟಾ ಕಂಪನಿಯು ಈ ಫಾರ್ಚೂನರ್ ಫೇಸ್‌ಲಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








