ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಮುಂದಿನ ತಿಂಗಳು ನಡೆಯಲಿರುವ 2020ರ ಜಿನಿವಾ ಮೋಟಾರ್ ಶೋನಲ್ಲಿ ಹೊಸ ತಲೆಮಾರಿನ ಹ್ಯುಂಡೈ ಕಂಪನಿಯ ಐ 20 ಕಾರ್ ಅನ್ನು ಜಾಗತಿಕವಾಗಿ ಪ್ರದರ್ಶಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಕಾರಿನ ಅಧಿಕೃತ ಸ್ಕೆಚ್‍‍ಗಳನ್ನು ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಿದೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಈ ಕಾರ್ ಅನ್ನು ಭಾರತದಲ್ಲಿ ಹಾಗೂ ಇತರ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ತಲೆಮಾರಿನ ಐ20 ಕಾರು ಹಲವಾರು ವಿನ್ಯಾಸ, ಅಡ್ವಾನ್ಸ್ ಫೀಚರ್ ಹಾಗೂ ಹೊಸ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಸೆಗ್‍‍ಮೆಂಟಿನಲ್ಲಿರುವ ಆಕರ್ಷಕ ಕಾರುಗಳಲ್ಲಿ ಒಂದಾಗಿರುವ ಐ 20 ಕಾರು ಶಾರ್ಪ್ ಹಾಗೂ ಸ್ಪೋರ್ಟಿಯರ್ ಆಗಿದೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಈ ಕಾರು ಮಾರುಕಟ್ಟೆಯಲಿರುವ ಐ20 ಕಾರಿನ ಸಿಲ್‍‍ಯೋಟ್ ಹಾಗೂ ವಿನ್ಯಾಸಗಳನ್ನು ಹೊಂದಿದೆ. ಈ ಕಾರಿನಲ್ಲಿರುವ ವಿನ್ಯಾಸಗಳನ್ನು ಹ್ಯುಂಡೈ ಕಂಪನಿಯ ಬೇರೆ ಕಾರುಗಳಿಂದ ಪಡೆಯಲಾಗಿದೆ. ಬಂಪರ್ ಅನ್ನು ಇತ್ತೀಚಿಗೆ ಅನಾವರಣಗೊಂಡ ಹ್ಯುಂಡೈ ಒರಾ ಸೆಡಾನ್‍‍ನಿಂದ ಪಡೆಯಲಾಗಿದೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಮುಂಭಾಗದಲ್ಲಿರುವ ಹೆಡ್‍‍ಲೈಟ್ ಹಾಗೂ ಡಿಸೈನ್ ಅಪ್‍‍ಡೇಟ್ ಅನ್ನು ಇತ್ತೀಚಿಗೆ ಬಿಡುಗಡೆಯಾದ ಎಲಾಂಟ್ರಾ ಕಾರಿನಿಂದ ಪಡೆಯಲಾಗಿದೆ. ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಐ 20 ಕಾರಿನಲ್ಲಿರುವ ವಿನ್ಯಾಸಗಳನ್ನು ಹೆಚ್ಚು ಜಾಗರೂಕತೆಯಿಂದ ಆಯ್ಕೆ ಮಾಡಿದೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಹ್ಯುಂಡೈ ಕಂಪನಿಯು ಹೆಚ್ಚು ರಿಸ್ಕಿಯಾಗಿರುವ ವಿನ್ಯಾಸಗಳನ್ನು ಈ ಕಾರಿನಲ್ಲಿ ಅಳವಡಿಸಿಲ್ಲ. ಹ್ಯುಂಡೈ ಐ20 ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಗಾತ್ರದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಕಾರಿನ ಒಳಗೆ ಹಲವಾರು ಪ್ರೀಮಿಯಂ ಫೀಚರ್‍‍ಗಳಿರಲಿವೆ. ಈ ಕಾರಿನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಐ‍ಎಕ್ಸ್ 25 ಕಾರಿನಲ್ಲಿರುವಂತಹ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿರಲಿವೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಹೊಸ ಕಾರಿನಲ್ಲಿ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಜೊತೆಗೆ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‍‍ಲೆಸ್ ಚಾರ್ಜಿಂಗ್, ರೇರ್ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಹಾಗೂ ಮುಂಭಾಗದ, ಹಿಂಭಾಗದ ಆರ್ಮ್ ರೆಸ್ಟ್ ಗಳಿವೆ. ಈ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಹೊಸ ಐ20 ಕಾರು ಅಡ್ವಾನ್ಸ್ಡ್ ಬ್ಲೂ ಲಿಂಕ್ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಿದೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಗ್ರಾಹಕರು ಈ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಬಳಸಿ ರಿಯಲ್ ಟೈಂ ವೆಹಿಕಲ್ ಮಾನಿಟರಿಂಗ್, ಆಟೋಮ್ಯಾಟಿಕ್ ಕ್ರಾಶ್ ನೋಟಿಫಿಕೇಶನ್, ವೆಹಿಕಲ್ ಹೆಲ್ತ್ ರಿಪೋರ್ಟ್, ರಿಮೋಟ್ ಸ್ಟಾರ್ಟ್/ಸ್ಟಾಪ್, ಲಾಕ್ / ಅನ್‍‍ಲಾಕ್ ಹಾಗೂ ವೆಹಿಕಲ್ ಇಮ್‍‍ಮೊಬೈಲೈಸರ್‍‍ಗಳನ್ನು ಆಕ್ಸೆಸ್ ಮಾಡಬಹುದು.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಹೊಸ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ವೆನ್ಯೂ ಕಾರಿನಲ್ಲಿರುವಂತಹ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಅಳವಡಿಸುವ ಸಾಧ್ಯತೆಗಳಿವೆ.

ಜೂನ್‍‍ನಲ್ಲಿ ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಐ20

ಡೀಸೆಲ್ ಆವೃತ್ತಿಯಲ್ಲಿ ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ 1.5 ಲೀಟರಿನ ಬಿ‍ಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 90 ಬಿಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಹೊಸ ಹ್ಯುಂಡೈ ಐ20 ಕಾರ್ ಅನ್ನು ಭಾರತದಲ್ಲಿ 2020ರ ಜೂನ್‍‍ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಈ ಕಾರು ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಕ್ ಹಾಗೂ ಹೋಂಡಾ ಜಾಜ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Hyundai i20 next gen teaser pictures revealed. Read in Kannada.
Story first published: Saturday, February 8, 2020, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X