ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಹ್ಯುಂಡೈ ಕಂಪನಿಯು ಸಾಂಟಾ ಎಫ್‍‍ಇ ಕಾರ್ ಅನ್ನು ಸ್ಥಗಿತಗೊಳಿಸಿದ ನಂತರ ಟಕ್ಸನ್ ಕಾರು ಹ್ಯುಂಡೈನ ಪ್ರಮುಖ ಎಸ್‍‍ಯುವಿಯಾಗಿದೆ. ಇತ್ತೀಚಿಗೆ ಮುಕ್ತಾಯವಾದ 2020ರ ಆಟೋ ಎಕ್ಸ್ ಪೋದಲ್ಲಿ ಎರಡನೇ ತಲೆಮಾರಿನ ಟಕ್ಸನ್ ಎಸ್‍‍ಯುವಿಯನ್ನು ಪ್ರದರ್ಶಿಸಲಾಗಿತ್ತು.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಮುಂಬೈನಲ್ಲಿರುವ ಕೆಲವು ಡೀಲರ್‍‍ಗಳ ಪ್ರಕಾರ 2020ರ ಹೊಸ ಹ್ಯುಂಡೈ ಟಕ್ಸನ್ ಎಸ್‍‍ಯುವಿಯ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ರೂ.25,000 ಪಾವತಿಸಿ ಈ ಎಸ್‍‍ಯುವಿಯನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಇದು ಫೇಸ್‍‍ಲಿಫ್ಟ್ ಆವೃತ್ತಿಯಾಗಿರುವ ಕಾರಣಕ್ಕೆ ಈ ಎಸ್‍‍ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಈ ಎಸ್‍‍ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಬಂಪರ್‍, ಪೆಂಟಾ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್ ಯುನಿಟ್, ಎಲ್‍ಇ‍‍ಡಿ ಟೇಲ್‍‍ಲೈಟ್, 18 ಇಂಚಿನ ಡೈಮಂಡ್ ಕಟ್ ವ್ಹೀಲ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಇನ್ನು ಹೊಸ ಟಕ್ಸನ್ ಎಸ್‍‍ಯುವಿಯ ಒಳಭಾಗದಲ್ಲಿ 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 8ವೇ ಪವರ್ಡ್ ಕೋ ಪ್ಯಾಸೆಂಜರ್ ಸೀಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬ್ಲೂ ಲಿಂಕ್ ಕನೆಕ್ಟಿವಿಟಿ, ವೈರ್‍‍ಲೆಸ್ ಚಾರ್ಜಿಂಗ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳಿವೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಇದರ ಜೊತೆಗೆ ಹ್ಯುಂಡೈನ ಐಬ್ಲೂ ಹಾಗೂ ವಾಯ್ಸ್ ಕಮಾಂಡ್‍‍ಗಳಿವೆ. ಕ್ಯಾಬಿನ್‍‍ನಲ್ಲಿ ಎಸಿ ವೆಂಟ್‍‍ಗಳನ್ನು ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್‍‍ಬೋರ್ಡ್‍‍ಗಳನ್ನು ನೀಡಲಾಗಿದೆ. ಹೊಸ ಎಸ್‍‍ಯುವಿ 360 ಡಿಗ್ರಿಯ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಪನೋರಾಮಿಕ್ ಸನ್‍‍ರೂಫ್‍‍ಗಳನ್ನು ಹೊಂದಿದೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಹೊಸ ಹ್ಯುಂಡೈ ಟಕ್ಸನ್ ಎಸ್‍‍ಯುವಿಯನ್ನು ಜಿ‍ಎಲ್ 2 ಡಬ್ಲ್ಯುಡಿ, ಜಿ‍ಎಲ್‍ಎಸ್ 2 ಡಬ್ಲ್ಯುಡಿ ಹಾಗೂ ಜಿ‍ಎಲ್‍ಎಸ್ 4 ಡಬ್ಲ್ಯುಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜಿಎಲ್ ಹಾಗೂ ಜಿ‍ಎಲ್‍ಎಸ್ ಮಾದರಿಗಳನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುವುದು.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಟಾಪ್ ಎಂಡ್ ಮಾದರಿಯಾದ ಜಿ‍ಎಲ್‍ಎಸ್ 4‍ ಡಬ್ಲ್ಯುಡಿ ಮಾದರಿಯನ್ನು ಡೀಸೆಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಈ ಎಸ್‍‍ಯುವಿಯಲ್ಲಿ ಇಕೊ, ಸ್ಮಾರ್ಟ್ ಹಾಗೂ ಪ್ರೊ ಎಂಬ ಮೂರು ವಿಧದ ಡ್ರೈವಿಂಗ್ ಮೋಡ್‍‍ಗಳಿವೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಹೊಸ ಟಕ್ಸನ್ ಎಸ್‍‍ಯುವಿ ಪಾರ್ಕಿಂಗ್ ಸೆನ್ಸಾರ್, ಇ‍ಎಸ್‍‍ಸಿ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಅಸಿಸ್ಟ್, ಪಡಲ್ ಲ್ಯಾಂಪ್, ಕಾರ್ನರಿಂಗ್ ಲ್ಯಾಂಪ್, ಪವರ್ಡ್ ಟೇಲ್‍‍ಗೇಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಡೈನಾಮಿಕ್ ಸ್ಟಾಬಿಲಿಟಿ ಕಂಟ್ರೋಲ್‍‍ನಂತಹ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

2020ರ ಹ್ಯುಂಡೈ ಟಕ್ಸನ್ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 182 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

2.0 ಲೀಟರಿನ ಪೆಟ್ರೋಲ್ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಹಾಗೂ 192 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಯಾವುದೇ ಮಾದರಿಗಳಲ್ಲೂ ಮ್ಯಾನುವಲ್ ಟ್ರಾನ್ಸ್ ಮಿಷನ್ ನೀಡುತ್ತಿಲ್ಲ.

ಹೊಸ ಟಕ್ಸನ್ ಎಸ್‍‍ಯುವಿ ಬುಕ್ಕಿಂಗ್ ಆರಂಭ

ಹ್ಯುಂಡೈ ಕಂಪನಿಯು ಹೊಸ ಹ್ಯುಂಡೈ ಟಕ್ಸನ್ ಮೇಲೆ ಹಲವು ರೀತಿಯ ವಾರಂಟಿ ನೀಡಲಿದೆ. 3 ವರ್ಷಗಳ ಅಥವಾ ಅನ್‍‍ಲಿಮಿಟೆಡ್ ಕಿ.ಮೀಗಳು, 4 ವರ್ಷ ಅಥವಾ 60,000 ಕಿ.ಮೀ ಹಾಗೂ 5 ವರ್ಷ ಅಥವಾ 50,000 ಕಿ.ಮೀಗಳ ವಾರಂಟಿಯನ್ನು ನೀಡಲಿದೆ. ಬಿ‍ಎಸ್ 6 ಎಂಜಿನ್ ಹೊಂದಲಿರುವ 2020ರ ಹ್ಯುಂಡೈ ಟಕ್ಸನ್ ಎಸ್‍‍ಯುವಿಯ ಬೆಲೆಯು ಬಿ‍ಎಸ್ 4 ಎಂಜಿನ್‍‍ಗಳಿಗಿಂತ ಹೆಚ್ಚಾಗಿರಲಿದೆ.

Article Published On: Friday, February 21, 2020, 17:55 [IST]
English summary
2020 Hyundai Tucson Bookings Commences. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+