Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿಫೆಂಡರ್ ಎಸ್‍ಯುವಿಗಾಗಿ ಅಕ್ಸೆಸರೀಸ್ ಪ್ಯಾಕೇಜ್‌ಗಳನ್ನು ಪರಿಚಯಿಸಿದ ಲ್ಯಾಂಡ್ ರೋವರ್
ಲ್ಯಾಂಡ್ ರೋವರ್ ಕಂಪನಿಯು ಕೊನೆಗೂ ತನ್ನ ಬಹುನಿರೀಕ್ಷಿತ ಡಿಫೆಂಡರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ 3-ಡೋರಿನ ಮಾದರಿಗೆ ರೂ.73.98 ಲಕ್ಷಗಳಾದರೆ, 5-ಡೋರಿನ ಮಾದರಿಗೆ ರೂ. 79.94 ಲಕ್ಷಗಳಾಗಿದೆ.

ಈ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಲ್ಯಾಂಡ್ ರೋವರ್ ಕಂಪನಿಯು ತನ್ನ ಐಕಾನಿಕ್ ಡಿಫೆಂಡರ್ ಎಸ್‍ಯುವಿ ಆಪ್-ರೋಡ್ ಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದೆ. ಡಿಫೆಂಡರ್ ಎಸ್‍ಯುವಿ ಎಕ್ಸ್‌ಪೆಡಿಶನ್ ಪ್ಯಾಕ್, ಕಂಟ್ರಿ ಪ್ಯಾಕ್, ಅರ್ಬನ್ ಪ್ಯಾಕ್ ಮತ್ತು ಅಡ್ವೆಂಚರ್ ಪ್ಯಾಕ್ ಎಂಬ ನಾಲ್ಕು ಅಕ್ಸೆಸರೀಸ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.

ಇದರಲ್ಲಿ ಎಕ್ಸ್‌ಪೆಡಿಶನ್ ಪ್ಯಾಕ್‌ನಲ್ಲಿ, ಮುಂಭಾಗದ ಬ್ಯಾಷ್ ಪ್ಲೇಟ್, ಎ-ಫ್ರೇಮ್ ಪ್ರೊಟೆಕ್ಷನ್ ಬಾರ್‌ಗಳು, ರೂಫ್ ಲ್ಯಾಡರ್, ಹೊರಗಿನ ಸೈಡ್-ಮೌಂಟೆಡ್ ಕ್ಯಾರಿಯರ್, ಮ್ಯಾಟ್ ಬ್ಲ್ಯಾಕ್ ಡೆಕಲ್ಸ್ (ಬಾನೆಟ್‌ನಲ್ಲಿ), ಸ್ಪೇರ್ ವ್ಹೀಲ್ ಕವರ್ ಮತ್ತು ಮಡ್‌ಫ್ಲಾಪ್‌ಗಳನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಕಂಟ್ರಿ ಪ್ಯಾಕ್‌ನಲ್ಲಿ, ಎ-ಫ್ರೇಮ್ ಪ್ರೊಟೆಕ್ಷನ್ ಬಾರ್, ಬೂಟ್ ಸ್ಪೇಸ್ ಪಾರ್ಟೆಷನ್, ಎಲ್ಲಾ ಟಯರುಗಳಲ್ಲಿ ಮಡ್ ಫ್ಲಾಪ್ಸ್ ವ್ಹೀಲ್ ಆರ್ಚ್ ಕ್ಲಾಡಿಂಗ್, ಪೋರ್ಟಬಲ್ ರೈನಿಸ್ ಸಿಸ್ಟಂ ಮತ್ತು ಹಿಂಭಾಗದ ಸ್ಕಫ್ ಪ್ಲೇಟ್‌ಗಳನ್ನು ಹೊಂದಿದೆ.

ಅರ್ಬನ್ ಪ್ಯಾಕ್‌ನಲ್ಲಿ, 22 ಇಂಚಿ ಅಲಾಯ್ ವ್ಹೀಲ್ ಗಳು(5-ಸ್ಪೋಕ್, ಗ್ಲೋಸ್ ಬ್ಲ್ಯಾಕ್), ಸೈಡ್ ಟ್ಯೂಬ್‌ಗಳು, ಸ್ಕಫ್ ಪ್ಲೇಟ್‌ಗಳು, ಫ್ರಂಟ್ ಬ್ಯಾಷ್ ಪ್ಲೇಟ್, ಮೆಟಲ್ ಪೆಡಲ್‌ಗಳು (ಆಕ್ಸಿಲರೇಟರ್ ಮತ್ತು ಬ್ರೇಕ್ ಪೆಡಲ್‌ಗಳು), ಮತ್ತು ಸ್ಪೇರ್ ವ್ಹೀಲ್ ಕವರ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅಡ್ವೆಂಚರ್ ಪ್ಯಾಕ್‌ನಲ್ಲಿ ಎ-ಫ್ರೇಮ್ ಪ್ರೊಟೆಕ್ಷನ್ ಬಾರ್‌ಗಳು, ಫಿಕ್ಸ್ಡ್ ಸೈಡ್ ಸ್ಟೆಪ್ಸ್, ಇಂಟಿಗ್ರೇಟೆಡ್ ಏರ್ ಕಾಂಪರೇಸರ್, ಸ್ಪೇರ್ ವ್ಹೀಲ್ ಕವರ್, ಸೀಟ್ ಬ್ಯಾಕ್‌ಪ್ಯಾಕ್, ಸೈಡ್-ಮೌಂಟೆಡ್ ಕ್ಯಾರಿಯರ್, ರಿಯರ್ ಸ್ಕಫ್ ಪ್ಲೇಟ್, ಪೋರ್ಟಬಲ್ ಸಿಸ್ಟಂ, ಎಲ್ಲಾ ವ್ಜೀಲ್ ಗಳಿಗೆ ಮಡ್ ಫ್ಲಾಪ್‌ಗಳನ್ನ ಹೊಂದಿರುತ್ತದೆ.

ಹೊಸ ಡಿಫೆಂಡರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಆಗಿ ಬರುತ್ತದೆ. ಇದು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. 3-ಡೋರಿನ ಮಾದರಿಯನ್ನು ಡಿಫೆಂಡರ್ 90 ಆದರೆ 5-ಡೋರಿನ ಮಾದರಿಯು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಲ್ಯಾಂಡ್ ರೋವರ್ ಡಿಫೆಂಡರ್ 5,018 ಎಂಎಂ ಉದ್ದ, 2,105 ಎಂಎಂ ಅಗಲ ಮತ್ತು 1,967 ಎಂಎಂ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಡಿಸಿ 100 ಡಿಫೆಂಡರ್ ಕಾನ್ಸೆಪ್ಟ್ ನಿಂದ ಹೆಚ್ಚು ಪ್ರೇರಿತವಾಗಿದೆ ಮೂಲ ಆವೃತ್ತಿಯಿಂದ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ.

ಇಂಡಿಯಾ-ಸ್ಪೆಕ್ ಡಿಫೆಂಡರ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 92 ಬಿಹೆಚ್‌ಪಿ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಹೊಸ ಡಿಫೆಂಡರ್ ಲ್ಯಾಂಡ್ ರೋವರ್‌ನ ಟೆರೈನ್ ರೆಸ್ಪಾನ್ಸ್ 2 ಸಿಸ್ಟಂ ಅನ್ನು ಸಹ ಪಡೆಯುತ್ತದೆ.

2020ರ ಲ್ಯಾಂಡ್ ರೋವರ್ ಡಿಫೆಂಡರ್ 110 ಹಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಈ ಎಸ್‍ಯುವಿಯಲ್ಲಿ ಹೊಸ 10 ಇಂಚಿನ ಪಿವಿಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇಂಟರ್ಫೇಸ್ ಆಯ್ಕೆಯೊಂದಿಗೆ ಸುಲಭವಾಗಿ ಉಪಯೋಗಿಸಬಹುದು.