ಡೀಲರ್ ಬಳಿ ತಲುಪಿದ ಬಿಎಸ್-6 ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಎಸ್‍ಯುವಿ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಬೊಲೆರೊ ಕೂಡ ಒಂದಾಗಿದೆ. ಬೊಲೆರೊ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಉತ್ತಮವಾಗಿ ಮಾರಾಟವಾಗುತ್ತಿದೆ.

ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ಮಹೀಂದ್ರಾ ಕಂಪನಿಯು ಸಹ ತನ್ನ ಸರಣಿಯಲ್ಲಿನ ಪ್ರಮುಖ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಲ್ಲಿ ನಿರತವಾಗಿದೆ. ಇದರ ಭಾಗವಾಗಿ ಕಂಪನಿಯ ಜನಪ್ರಿಯ ಎಸ್‍ಯುವಿಯಾದ ಬೊಲೆರೊವನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಇದೀಗ ಮಹೀಂದ್ರಾ ಕಂಪನಿಯ ಬೊಲೆರೊ ಫೇಸ್‌ಲಿಫ್ಟ್ ಡೀಲರ್ ಗಳ ಬಳಿ ತಲುಪಿದೆ. ಹೊಸ ಬೊಲೆರೊ ಫೇಸ್‌ಲಿಫ್ಟ್ ಎಸ್‍ಯುವಿ ಡೀಲರ್ ಗಳ ಬಳಿ ತಲುಪಿರುವುದು ಆನ್‍ಲೈನ್ ನಲ್ಲಿ ಬಹಿರಂಗವಾಗಿದೆ.

ಬಿಎಸ್-6 ಬೊಲೆರೊ ಎಸ್‍ಯುವಿನಲ್ಲಿ ಹೊಸ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಅದರ ಮಂಭಾಗವನ್ನು ನವೀಕರಿಸಲಾಗಿದೆ. ಮುಂಭಾಗದ ಪ್ರಯಾಣಿಕರ ಸುರಕ್ಷತೆಗೆ ಈ ಹೊಸ ನವೀಕರಣವು ಸಹಕಾರಿಯಾಗಲಿದೆ.

ಹೊಸ ಬಿಎಸ್-6 ಮಹೀಂದ್ರಾ ಬೊಲೆರೊ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಹೊಸ ಬೊಲೆರೊ ಎಸ್‍ಯುವಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು

ಹೊಸ ಬಿಎಸ್-6 ಮಹೀಂದ್ರಾ ಬೊಲೆರೊ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಹೊಸ ಬೊಲೆರೊ ಎಸ್‍ಯುವಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು

ಇನ್ನು ಹೊಸ ಬೊಲೆರೊ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಬೊಲೆರೊ ಎಸ್‍ಯುವಿಯು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನವೀಕರಿಸುವ ಸಾಧ್ಯತೆಗಳಿವೆ. ಈ 1.5 ಲೀಟರ್‍ನ ಎಂಜಿನ್ ಟಿಯುವಿ ಎಸ್‍ಯುವಿ ಮಾದರಿಯಲ್ಲಿ 75 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಮಹೀಂದ್ರಾ ಬೊಲೆರೊ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಏರ್‍ಬ್ಯಾಗ್‍ಗಳು, ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಅನ್ನು ಅಳವಡಿಸಬಹುದು. ಬೊಲೆರೊ ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಗಳಲ್ಲಿ ಒಂದಾಗಿದೆ.

2020ರ ಬೊಲೆರೊ ಎಸ್‍ಯುವಿಯ ಬೆಲೆಯು ಪ್ರಸ್ತುತ ಮಾದರಿಗಿಂತ ತುಸು ಹೆಚ್ಚಾಗಿರಲಿದೆ. ಹೊಸ ಬೊಲೆರೊ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.


Click it and Unblock the Notifications








