ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಜನಪ್ರಿಯ ಹ್ಯಾರಿಯರ್ ಎಸ್‍ಯುವಿಯನ್ನು ಹಲವು ನವೀಕರಣಗಳೊಂದಿಗೆ ಇತ್ತೀಚೆಗೆ ಜಪಾನ್‌ನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಟೊಯೊಟಾ ಹ್ಯಾರಿಯರ್ ಎಸ್‍ಯುವಿಗೆ ಜಪಾನ್‌ನಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಟೊಯೊಟಾ ಕಂಪನಿಯು ಹೊಸ ಹ್ಯಾರಿಯರ್ ಎಸ್‍ಯುವಿಗಾಗಿ 45,000ಕ್ಕೂ ಹೆಚ್ಚು ಯೂನಿಟ್‌ಗಳ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಟೊಯೊಟಾ ಕಂಪನಿಯು ಒಂದು ತಿಂಗಳಲ್ಲಿ 3,100 ಯೂನಿಟ್‌ಗಳನ್ನು ಮಾರಾಟ ಮಾಡಲು ನಿಗಧಿಪಡಿಸಿದ್ದರು. ಇದರ ಪ್ರಕಾರ ನೋಡಿದರೆ ನಿಗದಿಪಡಿಸಿರುವುದಕ್ಕಿಂತ 15 ಪಟ್ಟು ಹೆಚ್ಚು ಬುಕ್ಕಿಂಗ್ ಆಗಿದೆ. ಇದರಿಂದ ಟೊಯೊಟಾ ಕಂಪನಿಯು ಈ ಹೊಸ ಹ್ಯಾರಿಯರ್ ಎಸ್‍ಯುವಿಯ ಕಾಯುವಿಕೆಯ ಅವಧಿಯನ್ನು ಹೆಚ್ಚಿಸಬಹುದು.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

1990ರಲ್ಲಿ ಹ್ಯಾರಿಯರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಇನ್ನು ಈ ಹೊಸ ಟೊಯೊಟಾ ಹ್ಯಾರಿಯರ್ ಮಾಡ್ಯುಲರ್ ಟಿಎನ್‌ಜಿಎ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ. ಹೊಸ ತಲೆಮಾರಿನ ಎಸ್‍ಯುವಿಯು ಸ್ಲೀಕರ್ ವಿನ್ಯಾಸ ಅಂಶಗಳು ಮತ್ತು ಕೂಪ್ ಸಿಲೂಯೆಟ್ ಅನ್ನು ಹೊಂದಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಹೊಸ ಹ್ಯಾರಿಯರ್ ಎಸ್‍ಯುವಿಯಲ್ಲಿ ಉದ್ದವಾದ ಬಾನೆಟ್ ಅನ್ನು ಅಳವಡಿಸಲಾಗಿದೆ. ಜೆ-ಆಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ-ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಸ್ಲಿಮ್ ಎಲ್ಇಡಿ ಟೈಲ್ ಲೈಟ್ ಗಳನ್ನು ಹೊಂದಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಹೊಸ ಟೊಯೊಟಾ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ 12.3-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದರ ಕೆಳಗೆ ಟಚ್ ಸೆನ್ಸಿಟಿವ್ ಹೆಚ್‌ವಿಎಸಿ ಕಂಟ್ರೋಲ್‍ ಹೊಂದಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಇನ್ನು ಈ ಹ್ಯಾರಿಯರ್ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ದೊಡ್ಡ ಎಂಐಡಿ ಡಿಸ್‍ಪ್ಲೇ ಎರಡು ಬದಿಯಲ್ಲಿ ಟ್ವಿನ್ ಡಯಲ್‌ಗಳನ್ನು ಹೊಂದಿದೆ. ಇದರೊಂದಿಗೆ ಎಲೆಕ್ಟ್ರೋಕ್ರೊಮಿಕ್ ಪನೋರಮಿಕ್ ಸನ್‌ರೂಫ್, ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು ಡಿಜೆಟಲ್ ರೇರ್ ವ್ಯೂ ಮಿರರ್ ಮತ್ತು ಇತರ ಫೀಚರ್‍ಗಳನ್ನು ಹೊಂದಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಹೊಸ ಟೊಯೊಟಾ ಹ್ಯಾರಿಯರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್‍ ಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ 2.0-ಲೀಟರ್ ಡೈರೆಕ್ಟ್-ಇಂಜೆಕ್ಷನ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 207 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡೈರೆಕ್ಟ್-ಶಿಫ್ಟ್ ಸಿವಿಟಿಯನ್ನು ಜೋಡಿಸಲಾಗಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಇನ್ನು ಹೈಬ್ರಿಡ್ ಆವೃತ್ತಿಯಲ್ಲಿ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 175 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಟಯರ್‍ನೊಂದಿಗೆ 88ಕಿ.ವ್ಯಾಟ್ ಮೋಟರ್‍ಗೆ ಜೋಡಿಸಲಾಗಿದೆ. ಎರಡು ಆವೃತ್ತಿಗಳನ್ನು ಆಲ್-ವೀಲ್ ಡ್ರೈವ್‌ ಸಿಸ್ಟಂ ಅನ್ನು ನೀಡಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ದಾಖಲೆ ಬರೆದ 2020ರ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಭಾರತದಲ್ಲಿ ಎಸ್‍ಯುವಿಗಳಿಗೆ ಉತ್ತಮ ಬೇಡಿಕೆ ಇದ್ದರೂ ಸದ್ಯಕ್ಕೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಆದರೆ ಮುಂದಿನ ವರ್ಷಗಳಲ್ಲಿ ಈ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Thursday, July 23, 2020, 20:33 [IST]
English summary
2021 Toyota Harrier Bookings Cross 45k Units. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+