ಅನಾವರಣವಾಯ್ತು ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ
ಆಡಿ ಕಂಪನಿಯು ತನ್ನ 2021ರ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿದೆ.

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿಗಿಂತ ದೊಡ್ದದಾಗಿದೆ. ಈ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಡಿಆರ್‌ಎಲ್‌ಗಳೊಂದಿಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಿದ್ದಾರೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ಅಗ್ರೇಸಿವ್ ಬಂಪರ್ ಸ್ಪೋರ್ಟ್ ಲುಕ್ ಅನ್ನು ನೀಡಿದೆ. ಹಿಂಭಾಗದಲ್ಲಿ ಆಕರ್ಷಕ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಹೊಸ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಹೆಡ್-ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್ ಎರಡನ್ನು ನವೀಕರಿಸಲಾಗಿದೆ. ವಿಶೇಷವಾಗಿ ಹಿಂದಿನ ಯುನಿಟ್ ಹೊಸ ಒಎಲ್ಇಡಿ ತಂತ್ರಜ್ಞಾನವನ್ನು ಪಡೆದಿದೆ. ಹೊಸ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಮ್ಯಾಟ್ರಿಕ್ಸ್ ತಂತ್ರಜ್ಞಾನವನ್ನು ನೀಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ದೊಡ್ದ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ, ಇದು ಬ್ರ್ಯಾಂಡ್ ನ ಎಂಐಬಿ 3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಸಿಸ್ಟಂ ಹಿಂದಿನ ಮಾದರಿಗಿಂತ 10 ಪಟ್ಟು ವೇಗವಾಗಿದೆ ಎಂದು ಆಡಿ ಹೇಳಿಕೊಂಡಿದೆ.

ಈ ಹೊಸ ಇನ್ಪೋಟೇನ್ ಮೆಂಟ್ ಗೂಗಲ್ ಅರ್ಥ್‌ನಿಂದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳೊಂದಿಗೆ ನವೀಕರಿಸಿದ ನ್ಯಾವಿಗೇಷನ್ ಅನ್ನು ಸಹ ನೀಡುತ್ತದೆ. ಹೊಸ ಹೆಚ್ಚಿನ ಫೀಚರುಗಳನು ಒದಗಿಸಲು ‘ಮೈ ಆಡಿ' ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ನವೀಕರಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಇನ್ನು ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಮೌಂಟಡ್ ಕಂಟ್ರೋಲ್ ಹೊಂದಿರುವ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ಲೈಮೇಂಟ್ ಕಂಟ್ರೂಲ್, ಪನೋರಮ ಸನ್‌ರೂಫ್ ಮತ್ತು ಇನ್ನಿತರ ಫೀಚರುಗಳನ್ನು ಹೊಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೊಂದಿಗೆ ಬಿಡುಗಡೆಯಾಗಲಿದೆ. ಭಾರತದಲ್ಲಿ ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಬಿಡುಗಡೆಯಾಗಲಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ 45 ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 245 ಬಿಹೆಚ್‍ಪಿ ಪವರ್ ಮತ್ತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹೊಸ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಆಡಿ ಕ್ಯೂ5 ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3, ವೋಲ್ವೋ ಎಕ್ಸ್‌ಸಿ60 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








