ಹೊಸ ಹುಂಡೈ ಎಲಾಂಟ್ರಾ ಕಾರಿನ ಟೀಸರ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ಕ್ರೆಟಾ ಮತ್ತು ವೆರ್ನಾ ಫೇಸ್‍‍ಲಿಫ್ಟ್ ಕಾರುಗಳನ್ನು ಭಾರತೀಯ ಮಾರುಕಟ್ಟಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹ್ಯುಂಡೈ ಕಂಪನಿಯು 2021ರ ಹ್ಯುಂಡೈ ಎಲಾಂಟ್ರಾ ಕಾರಿನ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಹೊಸ ಟೀಸರ್ ವೀಡಿಯೋದಲ್ಲಿ ಕಾರಿನ ಸೈಡ್ ಪ್ರೊಫೈಲ್ ಮತ್ತು ಇಂಟಿರಿಯರ್ ಅನ್ನು ಪ್ರದರ್ಶಿಸಲಾಗಿದೆ. ಹಿಂದಿನ ಎಲಾಂಟ್ರಾ ಮಾದರಿಗೆ ಹೋಲಿಸಿದರೆ ಹೊಸ ಎಲಾಂಟ್ರ ಕಾರು ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಸ್ಪೋರ್ಟಿನೆಸ್ ಥೀಮ್ ಅನ್ನು ಆಧರಿಸಿದೆ. 2021ರ ಹ್ಯುಂಡೈ ಎಲಾಂಟ್ರಾ ಮುಂಭಾಗ ಪಾಲಿಹೆಡ್ರಲ್ ಲುಕ್ ಅನ್ನು ಹೊಂದಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಹೊಸ ಎಲಾಂಟ್ರಾ ಕಾರು ಸ್ಪೋರ್ಟಿ ಸಿಲೂಯೆಟ್, ಬೆಲ್ಪ್ಲೈನ್, ಹೊಸದಾಗಿ ವಿನ್ಯಾಸಗೊಳಿಸಿದ ವ್ಹೀಲ್‍ಗಳು, ಶಾರ್ಪರ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು ಮತ್ತು ಬ್ಲ್ಯಾಕ್ ಬಿ-ಪಿಲ್ಲರ್‍‍ನೊಂದಿಗೆ ಸೈಡ್ ಪ್ರೊಫೈಲ್ ಅನ್ನು ಹೊಂದಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಟೀಸರ್‍‍‍ನಲ್ಲಿ ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಮುಂಭಾಗ ಸೊನಾಟ ಮಾದರಿಯಂತೆ ನವೀಕರಿಸಲಾದ ಗ್ರಿಲ್ ಮತ್ತು ಬಂಪರ್ ಸೇರಿದಂತೆ ಇತರ ಸ್ಟೈಲಿಂಗ್ ಅಂಶಗಳನ್ನು ಅಳವಡಿಸಲಾಗಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಇನ್ನು ಈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಪೋಕ್ ವ್ಹೀಲ್ ಮತ್ತು ಹ್ಯುಂಡೈ ಐ20 ಮಾದರಿಯಂತೆ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದನ್ನು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಯಲ್ಲಿ ವಿಲೀನಗೊಳಿಸಲಾಗಿದೆ. ಹೊಸ ಎಲಾಂಟ್ರಾ ಕಾರಿನಲ್ಲಿ 4 ಎಸಿ ವೆಂಟ್ಸ್ ಮತ್ತು ಡ್ಯಾಶ್ ಬೋರ್ಡ್‍‍ನಲ್ಲಿರುವ ಎಲ್‍ಇಡಿ ಲೈಟ್ ಎದ್ದು ಕಾಣುವಂತಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

2021ರ ಹುಂಡೈ ಎಲಾಂಟ್ರಾ ಕಾರಿನ ಮ್ಯಾಕಾನಿಕಲ್ ಅಂಶಗಳು ಯಾವುದು ಬಹಿರಂಗವಾಗಿಲ್ಲ. ಆದರೆ ಹೊಸ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಈ ಹೊಸ ಕಾರಿನಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸುವ ಸಾಧ್ಯತೆಗಳಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಈ ಎರಡು ಎಂಜಿನ್‍‍ಗಳೊಂದಿಗೆ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ನೀಡಬಹುದು.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖತೆಯನ್ನು ನೀಡಬಹುದು. ಈ ಕಾರಿನಲ್ಲಿ ಸುರಕ್ಷತೆಗಾಗಿ ರಿವರ್ಸ್ ಕ್ಯಾಮೆರಾ, ಕ್ಲ್ಯಾಮೇಟ್ ಕಂಟ್ರೋಲರ್,ಟಯರ್ ಫ್ರೆಶ್ರರ್ ಮಾನಿಟರಿಂಗ್ ಸಿಸ್ಟಮ್, ಸೆಪ್ಟಿ ಕಿಟ್, 6 ಏರ್‍‍ಬ್ಯಾಗ್, ಎಬಿ‍ಎಸ್, ಇಬಿಡಿ ವಾಹನ ನಿಯಂತ್ರಣ ಮುಂತಾದ ಫೀಚರ್‍‍‍‍ಗಳನ್ನು ಹೊಂದಿರಲಿದೆ.

ಹೊಸ ಹುಂಡೈ ಎಲಾಂಟ್ರ ಕಾರಿನ ಟೀಸರ್ ಬಿಡುಗಡೆ

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಎಲಾಂಟ್ರಾ ಕಾರನ್ನು ಪರಿಚಯಿಸಲಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.16 ಲಕ್ಷದಿಂದ 22 ಲಕ್ಷಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Wednesday, March 11, 2020, 19:03 [IST]
English summary
2021 Hyundai Elantra previewed ahead of March 18 debut. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+