Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಫೀಚರ್‍ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಹ್ಯುಂಡೈ ಟ್ಯುಸಾನ್ ಎಸ್‍ಯುವಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಮುಂದಿನ ತಲೆಮಾರಿನ ಟ್ಯುಸ್ಯಾನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. 2021ರ ಹ್ಯುಂಡೈ ಟ್ಯುಸಾನ್ ಎಸ್‍ಯುವಿಯು ಈ ವರ್ಷದ ಅಂತ್ಯದೊಳಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಹೊಸ ತಲೆಮಾರಿನ ಟ್ಯುಸಾನ್ ಎಸ್‍ಯುವಿಯು ಹಲವಾರು ಹೊಸ ತಂತ್ರಜ್ಞಾನವನ್ನು ಸಹ ಹೊಂದಿರುತ್ತದೆ. ಇತ್ತೀಚಿನ ವರದಿಯ ಪ್ರಕಾರ, ಮುಂಬರುವ ಮಾದರಿಯು ಟೆಸ್ಲಾ ತರಹದ ಸಮನ್ಸ್ ಫೀಚರನ್ನು ಹೊಂದಿರುತ್ತದೆ. ಈ ಫೀಚರ್ ಕಾರನ್ನು ತನ್ನ ಪಾರ್ಕಿಂಗ್ ಸ್ಥಳದಿಂದ ತನ್ನ ಮಾಲೀಕರಿಗೆ ವರ್ಚುವಲ್ ವ್ಯಾಲೆಟ್ನಂತೆ ಸ್ವಾಯತ್ತವಾಗಿ ಓಡಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚೆಗೆ ಸೋರಿಕೆಯಾದ ಸ್ಪೈ ಚಿತ್ರದಲ್ಲಿ ಹೊಸ ತಲೆಮಾರಿನ ಹ್ಯುಂಡೈ ಟ್ಯುಸಾನ್ ಎಸ್‍ಯುವಿಯ ಕೆಲವು ಫೀಚರ್ ಗಳು ಬಹಿರಂಗವಾಗಿದೆ.

ಈ ಹೊಸ ಎಸ್‍ಯುವಿಯಲ್ಲಿ ಸಾಮಾನ್ಯ ಲಾಕ್ ಮತ್ತು ಅನ್-ಲಾಕ್ ಬಟನ್‌ಗಳ ಹೊರತಾಗಿ, ಇನ್ನೂ ಕೆಲವು ಹೊಸ ಫೀಚರ್ ಅನ್ನು ಹೊಂದಿರಲಿದೆ. 2021ರ ಟ್ಯುಸ್ಯಾನ್ ಎಸ್‍ಯುವಿಯು ಬ್ಲೂಲಿಂಕ್ ಕನೆಕ್ಟಿವಿಟಿ ಟೆಕ್ ಅನ್ನು ಸಹ ಹೊಂದಿರಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರಲ್ಲಿ ರಿಮೋಟ್ ಎಂಜಿನ್ ಸ್ಟಾರ್ಟ್, ಕಾರ್ ಟ್ರ್ಯಾಕಿಂಗ್, ವೆಹಿಕಲ್ ಟೆಲಿಮ್ಯಾಟಿಕ್ಸ್, ವೆಹಿಕಲ್ ಅಲರ್ಟ್ಸ್, ಜಿಯೋ-ಫೆನ್ಸಿಂಗ್ ಮತ್ತು ವಾಯ್ಸ್ ಕಮಾಂಡ್ ರೆಕಗ್ನಿಷನ್ ಜೊತೆಗೆ ಸ್ಮಾಟ್ ಫೋನ್ ಮತ್ತು ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಇರುತ್ತದೆ.

ಇನ್ನು ಈ ಎಸ್‍ಯುವಿಯಲ್ಲಿ ಇನ್-ಕ್ಯಾಬಿನ್ ಏರ್ ಪ್ಯೂರಿಫೈಯರ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಹೊಂದಿರಲಿದೆ. 2021ರ ಹ್ಯುಂಡೈ ಟ್ಯುಸಾನ್ ಎಸ್‍ಯುವಿಯಲ್ಲಿ ಅನೇಕ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇದರಲ್ಲಿ 1.6-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 180 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಇನ್ನು 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ಹೊಂದಿರಲಿದೆ. ಈ ಎಂಜಿನ್ 163 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರೊಂದಿಗೆ 2.4-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಈ ಎಂಜಿನ್ 183 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಬಹುದು.

ಇನ್ನು 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿರಲಿದೆ. ಈ ಎಂಜಿನ್ 183 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮಾದರಿಯಲ್ಲಿ ‘ವರ್ಚುವಲ್ ವ್ಯಾಲೆಟ್ ಫೀಚರ್ ಅನ್ನು ನೀಡುವುದು ಇನ್ನು ಖಚಿತವಾಗಿಲ್ಲ.