ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ
ಜೀಪ್ ಕಂಫನಿಯು ತನ್ನ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಚೀನಾದಲ್ಲಿ ನಡೆದ 2020ರ ಗುವಾಂಜು ಆಟೋ ಶೋನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಆಟೋ ಶೋನಲ್ಲಿ ಕಂಪನಿಯು ನವೀಕರಿಸಿದ ಜೀಪ್ ಕಂಪಾಸ್‌ನ ಸ್ಟ್ಯಾಂಡರ್ಡ್ ಮತ್ತು ಟ್ರೈಲ್‌ಹಾಕ್ ರೂಪಾಂತರವನ್ನು ಪ್ರದರ್ಶಿಸಿತು.

ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಚಿತ್ರಗಳಲ್ಲಿ ಕಂಡುಬಂದಂತೆ ಕೆಲವು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಮಿಡ್-ಲೈಫ್ ಫೇಸ್‌ಲಿಫ್ಟ್ ಭಾಗವಾಗಿ ಜೀಪ್ ಕಂಪಾಸ್ ಎಸ್‍ಯುವಿಯ ಒಳಗೆ ಮತ್ತು ಹೊರಭಾಗದಲ್ಲಿ ಹಲವು ನವೀಕರಣಗಳನ್ನು ಪಡೆದುಕೊಂಡಿದೆ. ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದ ಬಂಪರ್ ಅನ್ನು ಅದೇ ಏಳು-ಪೆಟ್ಟಿಗೆಗಳ ಗ್ರಿಲ್ ಅನ್ನು ಕ್ರೋಮ್‌ನ ಫಿನಿಶಿಂಗ್ ಅನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯ ಇತರ ನವೀಕರಣಗಳಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್ ಗಳೊಂದಿಗೆ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಗಳಿಗಾಗಿ ನವೀಕರಿಸಿದ ಫ್ರಂಟ್ ಬಂಪರ್ ಮತ್ತು ಹಿಂಭಾಗದಲ್ಲಿ ಟೇಲ್ ಲೈಟ್ ಅನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಹೊಸ ವಿನ್ಯಾಸದ ಮಲ್ಟಿ-ಸ್ಪೋಕ್ ಬ್ಲ್ಯಾಕ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಅಲ್ಲದೇ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. 2021 ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದ ಫೀಚರುಗಳ ಮಾಹಿತಿ ಬಹಿರಂಗವಾಗಿದೆ. ಈ ಹೊಸ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಯುಕನೆಕ್ಟ್ 5 ತಂತ್ರಜ್ಞಾನವನ್ನು ಅಳವಡಿಸಿದೆ.

2021ರ ಜೀಪ್ ಕಂಪಾಸ್‌ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 160 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿ-ರೋಕ್, ಸ್ಕೋಡಾ ಕರೋಕ್, ನಿಸ್ಸಾನ್ ಕಿಕ್ಸ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಆಕರ್ಷಕ ಲುಕ್ ಅನ್ನು ಹೊಂದಿದೆ.


Click it and Unblock the Notifications