ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಕಿಯಾ ಮೋಟಾರ್ಸ್ ತನ್ನ 2021ರ ರಿಯೋ ಕಾರನ್ನು ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಗೆಯಲ್ಲಿ ಬಿಡುಗಡೆಗೊಳಿಸಿದೆ. ಕಿಯಾ ತನ್ನ 2021ರ ರಿಯೋ ಮಾದರಿಯನ್ನು ಮಿಡ್-ಲೈಫ್ ಅಪ್‌ಡೇಟ್‌ ನಡೆಸಿ ಬಿಡುಗಡೆಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

2021ರ ಕಿಯಾ ರಿಯೋ ಕಾರು ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್ ಮತ್ತು ಏರ್ ಟೆಕ್ ಅನ್ನು ಪಡೆದುಕೊಂಡಿದೆ. ಇನ್ನು ಈ ಹೊಸ ಕಿಯಾ ರಿಯೋ ಕಾರು ನಯವಾದ ಹೆಡ್‌ಲ್ಯಾಂಪ್‌ಗಳು, ಸ್ಪೋರ್ಟಿ ಕ್ಯಾರೆಕ್ಟರ್ ಲೈನ್ಸ್, ಬ್ಯುಸಿ ಬಂಪರ್, ಹೊದಿಕೆ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಸ್ಕಪಲಡಡ್ ಬೂಟ್ ಮತ್ತು ರ್ಯಾಕ್ಡ್ ವಿಂಡ್‌ಶೀಲ್ಡ್ ಅನ್ನು ಒಳಗೊಂಡಿದೆ. ರಿಯೋ ಮಾದರಿಯನ್ನು ಅಮೆರಿಕಾದಲ್ಲಿ ಸೆಡಾನ್ ಆಗಿ ಬಿಡುಗಡೆಗೊಳಿಸಿದೆ. ಆದರೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ಹೊಸ ಕಿಯಾ ರಿಯೋ ಕಾರಿನ ಇಂಟಿರಿಯರ್ ನಲ್ಲಿ ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕೆನೆಕ್ಟಿವಿಟಿಯೊಂದಿಗೆ ದೊಡ್ಡ ಎಂಟು ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ಆದರೆ ಕಿಯಾ ರಿಯೋ ಮಾದರಿಯ ಬೇಸ್ ಎಲ್ಎಕ್ಸ್ ವೆರಿಯೆಂಟ್ ನಲ್ಲಿ 3.5 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಸ್ ಪ್ಲೇ ಅನ್ನು ಅಳವಡಿಸಿದೆ. ಇನ್ನು ಹೊಸ ರಿಯೋ ಕಾರಿನಲ್ಲಿ 15 ಇಂಚಿನ ಸ್ಟೀಲ್ ವ್ಹೀಲ್ಸ್ ಆಡಿಯೊ ಸಿಸ್ಟಂ, ಪವರ್ ವಿಂಡೋಸ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

2021ರ ಕಿಯಾ ರಿಯೋ ಟಾಪ್-ಸ್ಪೆಕ್ ನಲ್ಲಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಫ್ರಂಟ್ ಸೆಂಟರ್ ಆರ್ಮ್‌ಸ್ಟ್ರೆಸ್ಟ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಕಾರ್ ಅಲಾರ್ಮ್ ಮತ್ತು ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ಇನ್ನು ಈ ಮಾದರಿಯಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಸಿರಿಯಸ್ ಸ್ಯಾಟಲೈಟ್ ರೇಡಿಯೋ, 4.2-ಇಂಚಿನ ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್ ಮತ್ತು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

2021ರ ಕಿಯಾ ರಿಯೋ ಕಾರಿನಲ್ಲಿ 1.6-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 152 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ಇನ್ನು ಇದರೊಂದಿಗೆ ಕಿಯಾ ಮೋಟಾರ್ಸ್ ಕಂಪನಿಯು ತನ್ನ 2021ರ ಸೊರೆಂಟೊ ಪ್ಲಗ್-ಇನ್ ಹೈಬ್ರಿಡ್ ಮಾದರಿಯನ್ನು ಬ್ರಿಟನ್‌ನಲ್ಲಿ ಪರಿಚಯಿಸುವುದಕ್ಕೆ ಸಜ್ಜಾಗುತ್ತಿದೆ. ಕಿಯಾ ಕಾರುಗಳ ಸರಣಿಯಲ್ಲಿ ಸೊರೆಂಟೊ ಜನಪ್ರಿಯ ಮಾದರಿಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಕಿಯಾ ರಿಯೋ ಕಾರು

ಇನ್ನು 2021ರ ಕಿಯಾ ರಿಯೋ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ಲೇನ್ ಫಾಲೋಯಿಂಗ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ರಿಯರ್ ಆಕ್ಯುಪೆಂಟ್ ಅಲರ್ಟ್ ಮತ್ತು ಫಾರ್ವರ್ಡ್ ಕೊಲಿಷನ್ ಅವೈಡ್ ನೆಸ್ ಎಂಬ ಫೀಚರ್ ಗಳನ್ನು ಹೊಂದಿವೆ

Most Read Articles

Kannada
English summary
2021 Kia Rio Launched In The US With Cosmetic Updates. Read In Kannada.
Story first published: Wednesday, December 30, 2020, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X