ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಹೊಸ ತಲೆಮಾರಿನ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹೊಸ ತಲೆಮಾರಿನ ಸೆಲೆರಿಯೊ ಕಾರಿನ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಈ ಹೊಸ ತಲೆಮಾರಿನ ಸೆಲೆರಿಯೊ ಕಾರನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಭಾರತದಲಿ ಸೆಲಿರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಸಧ್ಯ ಭಾರತೀಯ ಮಾರುಕಟ್ಟೆಯಲ್ಲಿ ಕರೋನಾ ಸೋಂಕಿನಿಂದ ಸಣ್ಣ ಕಾರುಗಳ ಮಾರಾಟ ಹೆಚ್ಚಾಗಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಕರೋನಾ ಸೋಂಕಿನ ಭೀತಿಯಿಂದ ಜನರು ಸಾರ್ವಜನಿಕ ವಾಹನಗಳಲ್ಲಿ ಓಡಾಡುವುದು ಅಷ್ಟು ಸುರಕ್ಷಿತವಲ್ಲವೆಂದು ಸಣ್ಣ ಕಾರುಗಳ ಮೊರೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪನಿಯು ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸಿದರೆ ಮಾರಾಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಇದೇ ಕಾರಣದಿಂದ ಸೆಲೆರಿಯೊ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ ಮಾರುತಿ ಸೆಲೆರಿಯೊ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಆಟೋಎಕ್ಸ್ ಬಹಿರಂಗಪಡಿಸಿದೆ. ಮಾರುತಿ ಸುಜುಕಿ ಕಂಪನಿಯು ಹಾರ್ಟ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹೊಸ ಸೆಲೆರಿಯೊ ಕಾರನ್ನು ಅಭಿವೃದ್ದಿಪಡಿಸಲಾಗುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್‌ ಸ್ವಲ್ಪ ಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಈ ಸೆಲೆರಿಯೊ ಕಾರು ಕ್ರಾಸ್‌ಒವರ್‌ನಂತೆ ವಿನ್ಯಾಸವಿರುತ್ತದೆ. ಎಸ್-ಪ್ರೆಸ್ಸೊ, ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊಗಳಂತಹ ಇತರ ಮಾರುತಿ ಕಾರುಗಳೊಂದಿಗೆ ಪ್ಲಾಟ್‌ಫಾರ್ಮ್ ಹಂಚಿಕೊಳ್ಳುವ ಹೊಸ ಸೆಲೆರಿಯೊವನ್ನು ಕ್ರಾಸ್‌ಒವರ್ ಆಗಿ ಮಾರಾಟ ಮಾಡಲಾಗುವುದು.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಹೊಸ ಸೆಲೆರಿಯೊ ಕಾರಿನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಪ್ರೊಜೆಕ್ಟರ್ ಹೆಡ್‌ಲೈಟ್, ಸ್ಟೈಲಿಶ್ ಅಲಾಯ್ ವ್ಹೀಲ್ ಗಳು, ಎಲ್‌ಇಡಿ ಟೈಲ್ ಲೈಟ್‌ಗಳು, ರಿಯರ್ ವೈಪರ್, ಚಂಕಿಯರ್ ಬಂಪರ್ ಗಳೂ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ಒಆರ್‌ವಿಎಂಗಳು ಮುಂತಾದ ಫೀಚರುಗಳನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಮಾರುಕಟ್ಟೆಯಲ್ಲಿರುವ ಸೆಲೆರಿಯೊ 1.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಬಿಎಸ್ 6 ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತಿದೆ. ಹೊಸ ತಲೆಮಾರಿನ ಸೆಲೆರಿಯೊದಲ್ಲಿ ಅದೇ ಎಂಜಿನ್ ಆಯ್ಜೆಯನ್ನು ಹೊಂದಿರಲಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಇನ್ನು ಹೊಸ ಸೆಲೆರಿಯೊ ಕಾರಿನ ಇಂಟಿರಿಯರ್ ನಲ್ಲಿ ಮೌಂಟಡ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಳಗೊಂಡಿರುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಇನ್ನು ಈ ಹೊಸ ಕಾರಿನಲ್ಲಿ ಫ್ಯಾಬ್ರಿಕ್ ಸೀಟುಗಳು, ಕಪ್ ಹೋಲ್ಡರ್‌ಗಳು, ಆಟೋಮ್ಯಾಟಿಕ್ ಎಸಿ, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಇತರ ಫೀಚರುಗಳನ್ನು ಹೊಂದಿರುತ್ತದೆ.

MOST READ: ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಇನ್ನು ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನುಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ, ಇನ್ನು ಪಾರ್ಕಿಂಗ್ ಕ್ಯಾಮೆರಾ ಅಸಿಸ್ಟ್, ಸ್ಪೀಡ್ ಸೆನ್ಸರ್, ಸೀಟ್‌ಬೆಲ್ಟ್, ಎಬಿಎಸ್ ಮತ್ತು ಇಬಿಡಿ ಅನ್ನು ಹೊಂದಿರುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು

ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಯಾಗೋ, ಹ್ಯುಂಡೈ ಸ್ಯಾಂಟ್ರೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Thursday, September 17, 2020, 12:06 [IST]
English summary
New Generation Maruti Suzuki Celerio Spied For First Time In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+