ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್7 ಡಾರ್ಕ್ ಶ್ಯಾಡೋ ಲಿಮಿಟೆಡ್ ಎಡಿಷನ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಲಿಮಿಟೆಡ್ ಎಡಿಷನ್ ಆಗಿರುವುದರಿಂದ ವಿಶ್ವಾದ್ಯಂತ ಕೇವಲ 500 ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಇನ್ನು ಈ ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಮಾದರಿಯ ಉತ್ಪಾದನೆಯನ್ನು ಅಮೇರಿಕದ ಸ್ಪಾರ್ಟನ್‌ಬರ್ಗ್ ನಲ್ಲಿ ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಬಿಎಂಡಬ್ಲ್ಯು ಎಕ್ಸ್7 ನೀಡಲಾಗಿರುವ ಎಲ್ಲಾ ಎಂಜಿನ್ ಆಯ್ಕೆಗಳನ್ನು ನೀಡಬಹುದು. ಈ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಆದರೆ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಫ್ರೋಜನ್ ಆರ್ಕ್ಟಿಕ್ ಗ್ರೇ ಮೆಟಾಲಿಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಲಿಮಿಟೆಡ್ ಎಡಿಷನ್ ಎಸ್‍ಯುವಿಯಲ್ಲಿ ಬಿ ಮತ್ತು ಸಿ ಕಾಲಮ್‌ಗಳ ಕವರ್‌ಗಳು ಹೈ ಗ್ಲೋಸ್ ಶ್ಯಾಡೋ ಲೈನ್ ಫಿನಿಶ್ ಅನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ ಸಿಗ್ನೇಚರ್ ಕಿಡ್ನಿ ಗ್ರಿಲ್, ಏರ್ ಬ್ರೀಥರ್‌ಗಳು ಮತ್ತು ಎಕಾಸ್ಟ್ ಸಿಸ್ಟಂನ ಟೈಲ್‌ಪೈಪ್ ಕವರ್‌ಗಳನ್ನು ಬ್ಲ್ಯಾಕ್ ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಲಿಮಿಟೆಡ್ ಎಡಿಷನ್ ಎಂ ಸ್ಪೋರ್ಟ್ಸ್ ಪ್ಯಾಕೇಜ್‌ನ ಆಪ್ಟಿಮೈಸ್ಡ್ ಬಾಡಿವರ್ಕ್ ಅಂಶಗಳನ್ನು ಹೊಂದಿದೆ.

ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಪರ್ಫಾಮೆನ್ಸ್ ಟಯರುಗಳೊಂದಿಗೆ ಜೆಟ್ ಬ್ಲ್ಯಾಕ್ ಮ್ಯಾಟ್ ಫಿನಿಶ್ ಶಾಡ್‌ನೊಂದಿಗೆ ವಿ-ಸ್ಪೋಕ್ ವಿನ್ಯಾಸದ ವಿಭಿನ್ನ ಬಂಪರ್‌ಗಳು, ಏರ್ ಡ್ಯಾಮ್, ಸೈಡ್ ಸ್ಕರ್ಟ್‌ಗಳು ಮತ್ತು 22 ಇಂಚಿನ ಎಂ ಲೈಟ್-ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿವೆ.
MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಮೊದಲೇ ಹೇಳಿದಂತೆ ಲಿಮಿಟೆಡ್ ಎಡಿಷನ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಈ ಬಿಎಂಡಬ್ಲ್ಯು ಎಕ್ಸ್7 ಮಾದರಿಯಲ್ಲಿ 3.0-ಲೀಟರ್, ಇನ್-ಲೈನ್ ಸಿಕ್ಸ್-ಸಿಲಿಂಡರ್, ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 264 ಬಿಹೆಚ್ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಬಿಎಂಡಬ್ಲ್ಯು ಎಕ್ಸ್7 ಮಿಡ್ ಸ್ಪೆಕ್ ಮಾದರಿಯಲ್ಲಿ 3.0-ಲೀಟರ್, ಇನ್ಲೈನ್-ಸಿಕ್ಸ್, ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಈ ಎಂಜಿನ್ 339 ಬಿಹೆಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಟಾಪ್ ಸ್ಪೆಕ್ ನಲ್ಲಿ ಕ್ವಾಡ್-ಟರ್ಬೊ ಹೊಂದಿರುವ 3.0-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 395 ಬಿಹೆಚ್ಪಿ ಪವರ್ ಮತ್ತು 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು ಎಕ್ಸ್7 ಬ್ರ್ಯಾಂಡ್‌ನ ಪ್ರಮುಖ ಎಸ್‍ಯುವಿಗಳಲ್ಲಿ ಒಂದಾಗಿದೆ. ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಲಿಮಿಟೆಡ್ ಎಡಿಷನ್ ನಲ್ಲಿ ಕೆಲವು ಹೆಚ್ಚುವರಿ ಫೀಚರುಗಳನ್ನು ಅಳವಡಿಸಬಹುದು.


Click it and Unblock the Notifications








