2021ರ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಿನಿ ತನ್ನ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರನ್ನು ಈ ವರ್ಷದ ಮೇ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಇದೀಗ ಮಿನಿ ಕಂಪನಿಯು ಜಿಸಿಡಬ್ಲ್ಯು ವಿನ್ಯಾಸಗೊಳಿಸಿದ 2021ರ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದೆ.

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರನ್ನು ಕೆಲವು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಅನಾವರಣಗೊಳಿಸಿದೆ. ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರನ್ನು ಈ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಕಂಟ್ರಿಮ್ಯಾನ್ ಕಾರು ನವೀಕರಿಸಿದ ಎಲ್ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. ಇದರೊಂದಿಗೆ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಸಂಯೋಜಿಸಿದೆ. ಎಲ್ಇಡಿ ಟೈಲ್ ಲ್ಯಾಂಪ್ ಯೂನಿಯನ್ ಜ್ಯಾಕ್ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಹೊಸ ಕಾರಿನಲ್ಲಿ ಗ್ರಿಲ್ ಅನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ.

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಕಂಟ್ರಿಮ್ಯಾನ್ ಕಾರಿನಲ್ಲಿ ಹೊಸ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಹೊಸ ಕಂಟ್ರಿಮ್ಯಾನ್ ಕಾರಿನ ಇಂಟಿರಿಯರ್ ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಹೊಸದಾಗಿ ಈ ಕಂಟ್ರಿಮ್ಯಾನ್ ಇಂಟಿರಿಯರ್ ನಲ್ಲಿ ಹೊಸ 5.0 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಸ್ ಕಂಟ್ರಿಮ್ಯಾನ್ 1.5-ಲೀಟರ್, ಟರ್ಬೋಚಾರ್ಜ್ಡ್ 3-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಕೂಪರ್ ಎಸ್ ರೂಪಾಂತರವು 2.0-ಲೀಟರ್, 4-ಸಿಲಿಂಡರ್ ಯುನಿಟ್ ಅನ್ನು ಹೊಂದಿದೆ. ಈ ಕಾರು ಕೇವಲ 5.1 ಸೆಕೆಂಡುಗಳಲ್ಲಿ 100 ಕಿ,ಮೀ ಕ್ರಮಿಸುತ್ತದೆ.

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಕೂಪರ್ ಎಸ್‌ಇ 1.5-ಲೀಟರ್ ಎಂಜಿನ್ ಅನ್ನು 7.6 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ ಜಾನ್ ಕೂಪರ್ ವರ್ಕ್ ರೂಪಾಂತರವು ಹೆಚ್ಚು ಪವರ್ ಫುಲ್ ಮಾದರಿಯಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಎಲ್ಲಾ ರೂಪಾಂತರಗಳಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಫ್ರಂಟ್ ವ್ಹೀಲ್ ಡ್ರೈವ್ ರೂಪಾಂತರಗಳು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಪಡೆದರೆ, ಆಲ್-ವ್ಹೀಲ್-ಡ್ರೈವ್ ರೂಪಾಂತರಗಳು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಕೂಪರ್ ಎಸ್ಇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ವರ್ಷದ ಆರಂಭದಲ್ಲಿ ಮಿನಿ ಇಂಡಿಯಾ ಕಂಪನಿಯು, ಲಿಮಿಟೆಡ್ ಎಡಿಷನ್‍‍ನ ಕಂಟ್ರಿಮನ್‌ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಮಿನಿ ಕಂಟ್ರಿಮನ್ ಬ್ಲಾಕ್ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.42.40 ಲಕ್ಷಗಳಾಗಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಭಾರತದಲ್ಲಿ ಈ ಕಾರಿನ ಕೇವಲ 24 ಯುನಿ‍‍ಟ್‍‍ಗಳನ್ನು ಮಾತ್ರ ಬಿಡುಗಡೆಗೊಳಿಸಿದ್ದರು.ಕಂಟ್ರಿಮನ್ ಬ್ಲ್ಯಾಕ್ ಎಡಿಷನ್ ಕಾರನ್ನು ಕೂಪರ್ ಎಸ್ ಜಾನ್ ಕೂಪರ್ ವರ್ಕ್ಸ್ (ಜೆಸಿಡಬ್ಲ್ಯೂ) ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ.

2021ರ ಮಿನಿ ಕಂಟ್ರಿಮ್ಯಾನ್ ಕಾರನ್ನು ಅನಾವರಣಗೊಳಿಸಿದ ಮಿನಿ

ಹಲವು ಕಾಂಪ್ಯಾಕ್ಟ್ ಐಷಾರಾಮಿ ಎಸ್‍ಯುವಿಗಳ ಮಧ್ಯೆ ವಿಭಿನ್ನವಾಗಿ ಕಾಣುವ ಮಿನಿ ಕಂಟ್ರಿಮನ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ, ಆಡಿ ಕ್ಯೂ 3, ವೋಲ್ವೋ ಎಕ್ಸ್‌ಸಿ 40 ಹಾಗೂ ಬಿಎಂಡಬ್ಲ್ಯು ಎಕ್ಸ್ 1 ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, July 23, 2020, 12:36 [IST]
English summary
2021 Mini JCW Countryman unveiled, expected launch in November. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+