ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ನ್ಯೂ ಜನರೇಷನ್ ಐ20 ಕಾರು ಬಿಡುಗಡೆಯ ಮೂಲಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿಗಾಗಿ ಕಂಪನಿಯು ತನ್ನ ಅಧಿಕೃತ ಆಕ್ಸೆಸರಿಸ್ ಸೌಲಭ್ಯಗಳ ಮಾರಾಟ ಆರಂಭಿಸಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಐ20 ಕಾರು ಮಾದರಿಯು ಇದೀಗ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿದದ್ದು, ಹೊಸ ಕಾರಿನಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದೆ. ಇದರ ಜೊತೆಗೆ ಹೆಚ್ಚುವರಿ ಕೆಲವು ಪ್ರಮುಖ ಬಿಡಿಭಾಗಗಳನ್ನು ಸಹ ಬಿಡುಗಡೆ ಮಾಡಿದ್ದು, ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ಹೆಚ್ಚಿಸಲು ಈ ಹೆಚ್ಚುವರಿ ಬಿಡಿಭಾಗಗಳು ಸಹಕಾರಿಯಾಗಿವೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಕಾರಿಗಾಗಿ ಡೋರ್ ಹ್ಯಾಂಡಲ್ ಗಾರ್ನಿಶ್, ಹೆಡ್‌ಲ್ಯಾಂಪ್ ಗಾರ್ನಿಶ್, ಫಾಗ್ ಲ್ಯಾಂಪ್ ಗಾರ್ನಿಶ್, ಪ್ರೀಮಿಯಂ ಬಾಡಿ ಕವರ್ ಮತ್ತು ಕಾರಿನ ಒಳಭಾಗದಲ್ಲಿ ರೆಡ್ ಆ್ಯಂಡ್ ಬ್ಲ್ಯಾಕ್ ಬಣ್ಣದ ಸ್ಟೀರಿಂಗ್ ವೀಲ್ಹ್ ಕವರ್‌ಗಳನ್ನು ಬಿಡುಗಡೆ ಮಾಡಿದ್ದು, ಆಸಕ್ತ ಗ್ರಾಹಕರು ಪ್ರೀಮಿಯಂ ಆಕ್ಸೆಸರಿಸ್‌ಗಳನ್ನು ಪತ್ಯೇಕ ದರದಲ್ಲಿ ಖರೀದಿ ಮಾಡಬಹುದಾಗಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನು ಹೊಸ ಐ20 ಕಾರು ಪ್ರಮುಖ ಮೂರು ಎಂಜಿನ್ ಮಾದರಿಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 11.17 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್‌, ಆಕರ್ಷಕ ಸ್ಪೋರ್ಟಿ ಲುಕ್ ಮತ್ತು ವಿವಿಧ ಎಂಜಿನ್ ಆಯ್ಕೆಗಳು ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಫ್ರಂಟ್ ಲಿಪ್ ಸ್ಪ್ಲಿಟರ್, ಆಕರ್ಷಕ ಸೈಡ್ ಪ್ರೊಫೈಲ್, ಡ್ಯುಯಲ್-ಟೋನ್ ಹೊಂದಿರುವ ಐದು-ಸ್ಪೋಕ್ ನ 16-ಇಂಚಿನ ಅಲಾಯ್ ವ್ಹೀಲ್, ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್, ಕಪ್ಪು ಬಣ್ಣದ ರೂಫ್ ಹಾಗೂ ಪ್ರೀಮಿಯಂ ಟಚ್ ಹೊಂದಿರುವ ಸನ್‌ರೂಫ್ ನೀಡಲಾಗಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹಿಂಭಾಗದಲ್ಲಿ ಜೆಡ್ ಶೇಫ್‌ನಲ್ಲಿರುವ ಎಲ್ಇಡಿ ಅಂಶವನ್ನು ಹೊಂದಿರುವ ಸ್ಲೀಕ್ ಟೆಲ್‌ಲೈಟ್ ಯುನಿಟ್, ವಾಷರ್ ಹೊಂದಿರುವ ಹಿಂಭಾಗದ ವೈಪರ್, ಶಾರ್ಕ್ ಫಿನ್ ಆಂಟೆನಾ, ಫೇಕ್ ರೇರ್ ಡಿಫ್ಯೂಸರ್ ನೀಡಲಾಗಿದ್ದು, ಹ್ಯುಂಡೈ ಕಂಪನಿಯು ಹೊರಭಾಗದಲ್ಲಿನ ವಿನ್ಯಾಸದಂತೆ ಕಾರಿನ ಇಂಟಿರಿಯರನ್ನು ಕೂಡಾ ಪ್ರೀಮಿಯಂ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಐ20 ಕಾರಿನಲ್ಲಿ ಇಂಟಿರಿಯರ್ ರೆಡ್ ಹೈ ಲೈಟ್ ಗಳೊಂದಿಗೆ ಕಪ್ಪು ಬಣ್ಣವನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಪ್ರೇರಿತ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಬೂಟ್‌ ಸ್ಪೆಸ್‌ನಲ್ಲಿ ಸಬ್ ವೂಫರ್ ಹಾಗೂ ಏಳು-ಸ್ಪೀಕರ್ ಬೋಸ್ ಸಿಸ್ಟಂಗಳನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಜೊತೆಗೆ ಆರಾಮದಾಯಕ ಚಾಲನೆಗೆ ಪೂರಕವಾದ ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂ ಕಂಟ್ರೋಲ್ ಮಾಡಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ ಸೌಲಭ್ಯವಿದೆ.

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಐ20 ಕಾರಿನಲ್ಲಿ ಹ್ಯುಂಡೈ ಕಂಪನಿಯು ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.0-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಎನ್‌ಎ ಕಪ್ಪಾ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರಿನ ಡೀಸೆಲ್ ಎಂಜಿನ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ನ್ಯೂ ಜನರೇಷನ್ ಐ20 ಕಾರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಹ್ಯುಂಡೈ

ಸ್ಪೋರ್ಟಿ ವಿನ್ಯಾಸಕ್ಕೆ ತಕ್ಕಂತೆ ಹೊಸ ಕಾರಿನಲ್ಲಿ 6 ಸಿಂಗಲ್ ಟೋನ್ ಮತ್ತು 2 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಈ ಮೂಲಕ ಹಳೆಯ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ಮತ್ತು ಶಾರ್ಪ್ ಎಡ್ಜ್ ಡಿಸೈನ್ ಹೊಂದಿರುವ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬಲೆನೊ ಮತ್ತು ಟಾಟಾ ಆಲ್‌ಟ್ರೊಜ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Most Read Articles

Kannada
English summary
New Hyundai i20 Accessories Packs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X