ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭಿಸಿದ ಟೊಯೊಟಾ

ಟೊಯೊಟಾ ಕೀರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಇದೀಗ ಹೊಸ ಕಾರು ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಹೇಳಿಕೊಂಡಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಜೊತೆಗೆ ಹೊಸ ಕಾರು ಬಿಡುಗಡೆಗಾಗಿ ಹೊಸ ಅಭಿಯಾನವನ್ನು ಆರಂಭಿಸಿರುವ ಟೊಯೊಟಾ ಕಂಪನಿಯು ಹೊಸ ಕಾರನ್ನು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಇಲ್ಲವೆ ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲ ಕಾರು ಮಾದರಿಯಾದ ಮಾರುತಿ ಸುಜುಕಿ ಬ್ರೆಝಾ ಪ್ಲ್ಯಾಟ್‍ಫಾರ್ಮ್ ಆಧರಿಸಿರುವ ಅರ್ಬನ್ ಕ್ರೂಸರ್ ಮಾದರಿಯು ಟೊಯೊಟಾ ಕಂಪನಿಯ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಹೊಸ ಬ್ರಾಂಡ್ ಕಾರು ಮಾದರಿಯಲ್ಲೇ ರೀಬ್ಯಾಡ್ಜ್ ಕಾರು ರಸ್ತೆಗಿಳಿಯಲಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್ ಕಾರಿನ ರೀಬ್ಯಾಡ್ಜ್ ಆವೃತ್ತಿಯಾದ ಗ್ಲಾಂಝಾ ನಂತರ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲು ಬೃಹತ್ ಯೋಜನೆ ರೂಪಿಸಿರುವ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಅರ್ಬನ್ ಕ್ರೂಸರ್ ಮೂಲಕ ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿ ನೀಡುವ ತವಕದಲ್ಲಿವೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಅರ್ಬನ್ ಕ್ರೂಸರ್ ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಅರ್ಬನ್ ಕ್ರೂಸರ್ ಮಾದರಿಯು ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಂಡಿದ್ದು, ಮೂಲ ಮಾದರಿಯಾದ ವಿಟಾರಾ ಬ್ರೆಝಾಗಿಂತಲೂ ತುಸು ವಿಭಿನ್ನವಾದ ಹೋಲಿಕೆಯನ್ನು ಪಡೆದುಕೊಳ್ಳಲಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ರೀಬ್ಯಾಡ್ಜ್ ಕಾರಿನಲ್ಲಿ ಟೊಯೊಟಾ ಬ್ಯಾಡ್ಜ್‌ನೊಂದಿಗೆ ಟ್ವಿನ್ ಸ್ಲಾಟ್ ಗ್ರೀಲ್, ಆಕರ್ಷಕ ಫ್ರಂಟ್ ಬಂಪರ್, ಇನ್ ಬಿಲ್ಟ್ ಫ್ಲಕ್ಸ್ ಬುಲ್ ಬಾರ್, ಫ್ಲಕ್ಸ್ ಸ್ಕೀಡ್ ಪ್ಲೇಟ್ ಜೋಡಣೆ ಮಾಡಲಾಗಿದ್ದು, ಕಾರಿನ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸೆಲ್ಟೊಸ್, ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ನಿರ್ಮಾಣದ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಇನ್ನು ಜಾರಿಗೆ ಬಂದಿರುವ ಹೊಸ ಬಿಎಸ್-6 ನಿಯಮದಿಂದಾಗಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆ ತಂದಿರುವ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್‌ಗಿಂತಲೂ ಕೆಳಗಿನ ಬಹುತೇಕ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕಾರುಗಳನ್ನೇ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಅರ್ಬನ್ ಕ್ರೂಸರ್ ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಆರಂಭ

ಸದ್ಯ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯ ರೀಬ್ಯಾಡ್ಜ್ ಕಾರುಗಳ ಉತ್ಪಾದನೆಗಾಗಿ ಬೆಂಗಳೂರಿನ ಬಿಡದಿ ಘಟಕದಲ್ಲೇ ಅವಕಾಶ ನೀಡಿದ್ದು, ದಕ್ಷಿಣ ಭಾರತದಲ್ಲಿ ಹೊಸ ಕಾರು ಘಟಕ ಸ್ಥಾಪನೆ ಮುಂದಾಗಿದ್ದ ಮಾರುತಿ ಸುಜುಕಿ ಕಂಪನಿಗೆ ತನ್ನದೆ ಘಟಕದಲ್ಲೇ ಅವಕಾಶ ನೀಡುವ ಮೂಲಕ ಜಪಾನ್ ಬ್ರಾಂಡ್‌ಗಳು ಭಾರತದಲ್ಲಿ ಮತ್ತಷ್ಟು ಜನಪ್ರಿಯಗೊಳ್ಳುತ್ತಿವೆ.

Article Published On: Thursday, August 13, 2020, 20:33 [IST]
English summary
Bookings For The All-New Toyota Urban Cruiser Will Commence By The End Of August 2020. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+