Just In
Don't Miss!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- News
ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್‌ಲೈನ್ ಟೈರ್ ಮಾರಾಟಕ್ಕಾಗಿ ಇ-ಕಾಮರ್ಸ್ ಪೋರ್ಟಲ್ ಆರಂಭಿಸಿದ ಅಪೊಲೊ ಟೈರ್ಸ್
ಭಾರತದ ಪ್ರಮುಖ ಟೈಯರ್ ಉತ್ಪಾದನಾ ತಯಾರಕ ಕಂಪನಿಯಾಗಿರುವ ಅಪೊಲೊ ಟೈರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರಾಟ ಮಳಿಗೆಗೆ ಚಾಲನೆ ನೀಡಿದ್ದು, ಇ-ಕಾಮರ್ಸ್ ಮಾರಾಟ ಮಳಿಗೆಯಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ಕಾರುಗಳ ಟಯರ್ ಮಾರಾಟವನ್ನು ಆರಂಭಿಸಿದೆ.

ಇ-ಕಾಮರ್ಸ್ ಪೋರ್ಟಲ್ ಆರಂಭದೊಂದಿಗೆ‘ಬೈ ಆನ್‌ಲೈನ್, ಫಿಟ್ ಆಫ್‌ಲೈನ್' ಅಭಿಯಾನ ಕೈಗೊಂಡಿರುವ ಅಪೊಲೊ ಟೈರ್ಸ್ ಕಂಪನಿಯು ಟಯರ್ಸ್ ಖರೀದಿ ಮಾಡಿದ ನಂತರ ಹತ್ತಿರದಲ್ಲಿರುವ ಡೀಲರ್ಸ್ ಮೂಲಕ ಉಚಿತವಾಗಿ ಜೋಡಣೆ ಮಾಡಿಕೊಡುವ ಸೌಲಭ್ಯ ಆರಂಭಿಸಿದ್ದು, ಆನ್‌ಲೈನ್ ಟಯರ್ ಮಾರಾಟ ಸೇವೆಗಳನ್ನು ಸದ್ಯಕ್ಕೆ ದೆಹಲಿ ಎನ್‌ಸಿಆರ್, ಬೆಂಗಳೂರು, ಮುಂಬೈ ಮತ್ತು ಕೊಚ್ಚಿ ನಗರಗಳಲ್ಲಿ ಆರಂಭಿಕವಾಗಿ ಚಾಲನೆ ನೀಡಲಾಗಿದೆ.

ಆನ್‌ಲೈನ್ ಮಳಿಗೆಯ ಮೂಲಕ ಗ್ರಾಹಕರಿಗೆ ಹೊಸ ಮಾದರಿಯ ಟೈರ್‌ಗಳನ್ನು ಖರೀದಿಸಲು ಸುಲಭವಾಗುವಂತೆ ಪೋರ್ಟಲ್ ವಿನ್ಯಾಸಗೊಳಿಸಲಾಗಿದ್ದು, ಯಾವ ವಾಹನಕ್ಕೆ ಯಾವ ಮಾದರಿಯ ಟಯರ್ ಸೂಕ್ತ? ಎನ್ನುವ ಮಾಹಿತಿಯೊಂದಿಗೆ ಟಯರ್ ಗುಣಮಟ್ಟದ ಮಾಹಿತಿಗಳನ್ನು ಸರಳವಾಗಿ ತಿಳಿಸಲಿದೆ.

ಜೊತೆಗೆ ಆನ್‌ಲೈನ್ ಮೂಲಕ ಟಯರ್ ಖರೀದಿಸುವ ಗ್ರಾಹಕರಿಗೆ ರಿಟೇಲ್ ಮಾರಾಟಗಾರರಲ್ಲಿ ಖರೀದಿ ಮಾಡುವುದಕ್ಕಿಂತಲೂ ಹಲವಾರು ಆಫರ್‌ಗಳೊಂದಿಗೆ ಖರೀದಿಗೆ ಅವಕಾಶ ನೀಡಿದ್ದು, ಟೈರ್ ಖರೀದಿ ಮಾಡಿದ ನಂತರ ಅದನ್ನು ವಾಹನಗಳಿಗೆ ಜೋಡಣೆ ಮಾಡಲು ಹತ್ತಿರದ ಡೀಲರ್ಸ್‌ಗಳಿಗೆ ಸೂಚಿಸುತ್ತದೆ.

ನಿಮಗೆ ಅನುಕೂಲಕ್ಕೆ ತಕ್ಕಂತೆ ಟಯರ್ ಜೋಡಣೆಗಾಗಿ ಡೀಲರ್ಸ್ ಅನ್ನು ಕೂಡಾ ಫೋರ್ಟಲ್ ಮೂಲಕ ದಿನಾಂಕ ಮತ್ತು ಸಮಯವನ್ನು ಕಾಯ್ದಿಸಬಹುದಾಗಿದ್ದು, ಹಣಪಾವತಿ ವಿಧಾನಗಳು ಕೂಡಾ ಸಾಕಷ್ಟು ಸರಳವಾಗಿವೆ. ಟಯರ್ ಖರೀದಿಗಾಗಿ ಆನ್‌ಲೈನ್ ಪೋರ್ಟಲ್ ದಿನದ 24 ಗಂಟೆ ವಾರದ 7 ದಿನವು ಕಾರ್ಯನಿರ್ವಹಿಸಲಿದ್ದು, ಟಯರ್ ಖರೀದಿಗೆ ಇಎಂಐ ಸೌಲಭ್ಯ ನೀಡಿರುವುದು ಕೂಡಾ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಭಾರತದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಟಯರ್ ವ್ಯವಹಾರವೂ ಸಹ ಅಭಿವೃದ್ಧಿ ಹೊಂದುತ್ತಿದೆ. ಪ್ರಮುಖ ಟಯರ್ ತಯಾರಕ ಕಂಪನಿಗಳಲ್ಲಿ ಒಂದಾದ ಅಪೊಲೊ ಟೈರ್ಸ್ ಭಾರತದ ಪ್ರೀಮಿಯಂ ದ್ವಿಚಕ್ರ ವಾಹನಗಳ ಸೆಗ್ಮೆಂಟ್‌ನಲ್ಲಿ ಮುನ್ನಡೆ ಸಾಧಿಸುವ ಗುರಿಯನ್ನು ಹೊಂದಿದೆ.

ಉತ್ತಮ ಗುಣಮಟ್ಟದ ಸ್ಟೀಲ್ ರೇಡಿಯಲ್ ಟಯರ್ ಉತ್ಪಾದಿಸುವ ಗುರಿಯೊಂದಿಗೆ ಕಂಪನಿಯು ಗುಜರಾತ್‌ನ ವಡೋದರಾದಲ್ಲಿ ಹೊಸ ಟೆಕ್ನಾಲಜಿಯ ಉತ್ಪಾದನಾ ಘಟಕವನ್ನು ಹೊಂದಿದ್ದು, ಈ ಘಟಕವು 10,000 ಚದರ ಮೀಟರ್ ವಿಸ್ತೀರ್ಣದಲ್ಲಿ ತಿಂಗಳಿಗೆ 30,000 ಮೋಟಾರ್‌ಸೈಕಲ್ ರೇಡಿಯಲ್ ಹಾಗೂ 60,000 ಕ್ರಾಸ್ ಪ್ಲೈ ಟಯರ್‌ಗಳನ್ನು ಉತ್ಪಾದಿಸಲಾಗುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬೇಡಿಕೆ ಹೆಚ್ಚುತ್ತಿರುವುದರಿಂದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಕಂಪನಿಯು ಹೊಸ ಘಟಕದಲ್ಲಿ ಪ್ರೀಮಿಯಂ ಪ್ರಯಾಣಿಕರ ಮೋಟಾರ್‌ಸೈಕಲ್ ಸೆಗ್ ಮೆಂಟಿನ ಹೈ ಎಂಡ್ ಟಯರ್‌ಗಳನ್ನು ಉತ್ಪಾದಿಸಲಿದೆ.

ಆಪೊಲೊ ಕಂಪನಿಯು 2016ರಲ್ಲಿ ಭಾರತದ ಟಯರ್ ಉದ್ಯಮಕ್ಕೆ ಕಾಲಿಟ್ಟಿತು. ಅಪೊಲೊ ಟಯರ್ ಭಾರತದಲ್ಲಿ ಸೊನ್ನೆ ಡಿಗ್ರಿಯಲ್ಲಿ ಸ್ಟೀಲ್ ರೇಡಿಯಲ್ ಟಯರ್‌ಗಳನ್ನು ಉತ್ಪಾದಿಸಿದ ಮೊದಲ ಕಂಪನಿಯಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅಪೊಲೊ ಟಯರ್ ಭಾರತದ ಟಯರ್ ಮಾರುಕಟ್ಟೆಯಲ್ಲಿ ಶೇ.20ಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿದ್ದು, ಅತ್ಯುತ್ತಮ ಗುಣಮಟ್ಟ ಮತ್ತು ಬಾಳ್ವಿಕೆ ಹೊಂದಿರುವ ಅಪೊಲೊ ಟಯರ್‌ಗಳು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ವ್ಯಾಪ್ತಿ ಹೊಂದಿದೆ.