Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೋಲಾರ್ ಚಾರ್ಜಿಂಗ್ ಮೂಲಕ ಚಲಿಸುತ್ತದೆ ಈ ಹೊಸ ವಾಹನ
ಅಮೆರಿಕಾದ ಎಲೆಕ್ಟ್ರಿಕ್ ವಾಹನ ತಯಾರಕ ಸ್ಟಾರ್ಟ್ ಅಪ್ ಕಂಪನಿಯೊಂದು ಮೂರು ಚಕ್ರದ ವಾಹನವನ್ನು ಬಿಡುಗಡೆಗೊಳಿಸಿದೆ. ಈ ವಾಹನವನ್ನು ಚಾರ್ಜ್ ಮಾಡಲು ಯಾವುದೇ ಎಲೆಕ್ಟ್ರಿಕ್ ಚಾರ್ಜಿಂಗ್'ನ ಅಗತ್ಯವಿಲ್ಲವೆಂದು ಈ ಸ್ಟಾರ್ಟ್ ಅಪ್ ಕಂಪನಿಯು ಹೇಳಿಕೊಂಡಿದೆ.

ಈ ವಾಹನವನ್ನು ಆಪ್ಟೆರಾ ಮೋಟಾರ್ಸ್ ಎಂಬ ಸ್ಟಾರ್ಟ್ ಅಪ್ ಕಂಪನಿಯು ತಯಾರಿಸಿದೆ. ಈ ಮೂಲಕ ತನ್ನ ಮೊದಲ ಸೋಲಾರ್ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿರುವುದಾಗಿ ಆಪ್ಟೆರಾ ಮೋಟಾರ್ಸ್ ಘೋಷಿಸಿದೆ. ಈ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ವಾಹನವು ಗರಿಷ್ಠ 1,600 ಕಿ.ಮೀ ಚಲಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ಇದರಿಂದಾಗಿ ದೈನಂದಿನ ಬಳಕೆಗೆ ಯಾವುದೇ ಎಲೆಕ್ಟ್ರಿಕ್ ಚಾರ್ಜಿಂಗ್'ನ ಅಗತ್ಯವಿಲ್ಲವೆಂದು ಕಂಪನಿ ಹೇಳಿದೆ. ಈ ವಾಹನದ ವ್ಯಾಪ್ತಿಯು ಇತರ ಎಲೆಕ್ಟ್ರಿಕ್ ವಾಹನಗಳಿಗಿಂತ ಹೆಚ್ಚಿನದಾಗಿದೆ ಎಂದು ಕಂಪನಿ ಹೇಳಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಂಪನಿಯ ಪ್ರಕಾರ, ಟೆಸ್ಲಾದ ಎಲೆಕ್ಟ್ರಿಕ್ ಕಾರು ಕೂಡ ಇಷ್ಟೊಂದು ವ್ಯಾಪ್ತಿಯನ್ನು ನೀಡುವುದಿಲ್ಲ. ಆಪ್ಟೆರಾ ಕಂಪನಿಯ ಸಹ ಸಂಸ್ಥಾಪಕ ಕ್ರಿಸ್ ಆಂಥೋನಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು ಆಪ್ಟೆರಾ'ದ ನೆವರ್ ಚಾರ್ಜ್ ತಂತ್ರಜ್ಞಾನದಿಂದ ಈ ಕಾರು ಸೂರ್ಯನ ಬೆಳಕಿನಿಂದ ಚಲಿಸುತ್ತದೆ. ಕಂಪನಿಯ ಇನ್ ಬಿಲ್ಟ್ ಸೋಲಾರ್ ಕಾನ್ ಫಿಗರೇಷನ್ ಬ್ಯಾಟರಿ ಪ್ಯಾಕ್ ಅನ್ನು ಮೇಲ್ಭಾಗದಲ್ಲಿರಿಸುತ್ತದೆ ಹಾಗೂ ಎಲ್ಲಾ ಕಡೆಯೂ ತಲುಪುತ್ತದೆ ಎಂದು ಹೇಳಿದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನೇರವಾದ ವೇಗದ ಚಾರ್ಜಿಂಗ್‌ನೊಂದಿಗೆ ಚಾರ್ಜಿಂಗ್ ವೇಗವು 500 ಎಂಪಿಹೆಚ್ ಮಿತಿಯನ್ನು ತಲುಪಬಹುದು ಎಂದು ಆಪ್ಟೆರಾ ಹೇಳಿಕೊಂಡಿದೆ. ಎಲ್ಲಾ ಆಪ್ಟೆರಾ ಕಾರುಗಳಲ್ಲಿರುವ ನೆವರ್ ಚಾರ್ಜ್ ಸೌಲಭ್ಯವು ವರ್ಷಕ್ಕೆ 11,000 ಮೈಲುಗಳಷ್ಟು ಪ್ರಯಾಣಿಸುವಷ್ಟು ಸೂರ್ಯನ ಬೆಳಕನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿದೆ.

ಈ ವಾಹನವನ್ನು ವಾಸಿಸುವವರ ಸ್ಥಳ ಹಾಗೂ ಚಾಲನಾ ಅಭ್ಯಾಸವನ್ನು ಅವಲಂಬಿಸಿ, ಚಾರ್ಜ್ ಮಾಡದೆ ಚಾಲನೆ ಮಾಡಲು ಸಾಧ್ಯವಿದೆ ಎಂದು ಕಂಪನಿ ಹೇಳಿದೆ. ಮೂಲಗಳ ಪ್ರಕಾರ 25 ಕಿ.ವ್ಯಾನಿಂದ 100 ಕಿ.ವ್ಯಾವರೆಗಿನ ಬ್ಯಾಟರಿಗಳನ್ನು ಆಪ್ಟೆರಾದಲ್ಲಿ ಅಳವಡಿಸಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಪ್ಟೆರಾ ಕಂಪನಿಯ ಭಾರವಾದ ಮಾದರಿಯು ಸುಮಾರು 997 ಕೆ.ಜಿ ತೂಕವನ್ನು ಹೊಂದಿದೆ. ಆಪ್ಟೆರಾದ ಇಂಧನ ದಕ್ಷತೆಯು ಪ್ರತಿ ಕಿ.ವ್ಯಾಗೆ 10 ಮೈಲಿಗಳಾಗಿದೆ. ಇದು ಇದುವರೆಗಿನ ಯಾವುದೇ ಎಲೆಕ್ಟ್ರಿಕ್ ವಾಹನಗಳಿಗಿಂತ ಹೆಚ್ಚಾಗಿದ್ದು, ಲೂಸಿಡ್ ಏರ್ ಪ್ರಸ್ತಾಪಕ್ಕಿಂತ ದ್ವಿಗುಣವಾಗಿದೆ.