ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಆಡಿ ಕಂಪನಿಯು ಕೆಲವು ವಾರಗಳ ಹಿಂದೆ ಎ3 ಸ್ಪೋರ್ಟ್‌ಬ್ಯಾಕ್ ಕಾರನ್ನು ಅನಾವರಣಗೊಳಿಸಿದರು. ಇದೀಗ ಜರ್ಮನ್ ಮೂಲದ ಕಾರು ತಯಾರಕ ಕಂಪನಿ ಆಡಿ ಎರಡನೇ ತಲೆಮಾರಿ ಎ3 ಸೆಡಾನ್ ಕಾರನ್ನು ಅನಾವರಣಗೊಳಿಸಿದೆ.

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಈ ಹೊಸ ಆಡಿ ಎ3 ಸೆಡಾನ್ ಕಾರಿನಲ್ಲಿ ಎ3 ಸ್ಪೋರ್ಟ್‌ಬ್ಯಾಕ್‌ ಮಾದರಿಯಲ್ಲಿ ಇರುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಹೊಸ ಆಡಿ ಎ3 ಸೆಡಾನ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಮತ್ತು ಇಂಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಆಡಿ ಎ3 ಸೆಡಾನ್ ಕಂಪನಿಯ ಎಂಕ್ಯೂಬಿ ಇವೊ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಿಂದಿನ ಮಾದರಿಗಿಂತ ಹೊಸ ಆಡಿ ಎ3 ಸೆಡಾನ್ ಹೆಚ್ಚು ಹಗುರವಾಗಿದೆ.

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಹೊಸ ಆಡಿ ಎ3 ಸೆಡಾನ್ ಕಾರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ 40 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 10 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. ಆದರೆ ಬೂಟ್ ಸ್ಪೇಸ್ ಹಿಂದಿನ ಮಾದರಿಯಂತೆ 425 ಲೀಟರ್ ಹೊಂದಿದೆ. ಬೂಟ್ ಸ್ಪೇಸ್ ನಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಹೊಸ ಆಡಿ ಎ3 ಕಾರಿನ ಮುಂಭಾಗದಲ್ಲಿ ಸಿಂಗಲ್ ಮೆಶ್ ಹನಿಕ್ಯೂಬ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಕ್ಯೂ8 ಮಾದರಿಯಲ್ಲಿರುವಂತ ಹೊಸ ಹೆಡ್‌ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಹೆಡ್‌ಲ್ಯಾಂಪ್ ಕ್ಲಸ್ಟರ್ 15 ಎಲ್‌ಇಡಿ ವಿಭಾಗಗಳಿಂದ ಕೂಡಿದ್ದು, ಇದರೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಈ ಹೊಸ ಕಾರಿನ ಬದಿಯಲ್ಲಿ ಶಾರ್ಪ್ ಆಗಿರುವ ಲೈನ್ ಅನ್ನು ಹೊಂದಿದೆ. ಈ ಸೆಡಾನ್‍ನಲ್ಲಿ ಕೂಪ್ ನಲ್ಲಿ ಕಂಡು ಬರುವಂತಹ ಸಿಲೂಯೆಟ್ ಜೊತೆಗೆ ರೂಫ್‌ಲೈನ್ ಅನ್ನು ಹೊಂದಿದ್ದು, ಸೈಡ್ ಪ್ರೊಫೈಲ್ ನಿಂದ ನೋಡಿದಾಗ ಆಕರ್ಷಕ ವಾಗಿ ಕಾಣುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಹೊಸ ಆಡಿ ಎ3 ಕಾರಿನ ಇಂಟಿರಿಯರ್‍‍ನಲ್ಲಿ ಫ್ಯೂಚರಿಸ್ಟಿಕ್-ಮಾದರಿಯ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಇಂಟಿರಿಯರ್ ನಲ್ಲಿ 10.1-ಇಂಚಿನ ಎಂಎಂಐ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು ಅಲೆಕ್ಸಾತಂದಹ ಫೀಚರ್‌ಗಳನ್ನು ಜೋಡಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಇದರೊಂದಿಗೆ ಈ ಕಾರಿನ ಇಂಟಿರಿಯರ್ ನಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಆಡಿ ಪ್ರಿ-ಸೆನ್ಸ್ ಫ್ರಂಟ್, ಅಡಾಪ್ಟಿವ್ ಕ್ರೂಸ್ ಅಸಿಸ್ಟ್, ಎಫಿಷಿಯೆನ್ಸಿ ಅಸಿಸ್ಟ್, ಎಕ್ಸಿಟ್ ವಾರ್ನಿಂಗ್, ಕ್ರಾಸ್-ಟ್ರಾಫಿಕ್ ವಾರ್ನಿಂಗ್, ವೈ -ಫೈ ಹಾಟ್‌ಸ್ಪಾಟ್ ಮತ್ತು ಇನ್ನಿತರ ಫೀಚರ್‌ಗಳನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಆಡಿ ಎ3 ಮಾದರಿಯಲ್ಲಿ ಎರಡು ರೀತಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 1.5-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಆಗಿದೆ. 1.5-ಲೀಟರ್ ಟಿಎಸ್ಐ ಪೆಟ್ರೋಲ್ 148 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್ 148 ಬಿಹೆಚ್‌ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ವಿನ್ಯಾಸದೊಂದಿಗೆ ಅನಾವರಣವಾಯ್ತು 2021 ಆಡಿ ಎ3 ಕಾರು

ಈ ಎರಡು ಎಂಜಿನ್‍ ಗಳೊಂದಿಗೆ 7-ಸ್ಪೀಡ್ ಎಸ್ ಟ್ರಾನಿಕ್ ಡಿಎಸ್‍ಜಿ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಆಡಿ ಎ3 ಸೆಡಾನ್ ಕಂಪನಿಯ ಪೋರ್ಟ್ಫೋಲಿಯೊದಿಂದ ಉತ್ತಮ ಕಾರು ಆಗಿದೆ. ಹೊಸ ಆಡಿ ಎ3 ಸೆಡಾನ್ ಹಲವಾರು ಬದಲಾವಣೆಯೊಂದಿಗೆ ಹೊಸ ಪೀಚರ್‍ಗಳೊಂದಿಗೆ ಬಿಡುಗಡೆಯಾಗಲಿದೆ.

Most Read Articles

Kannada
Read more on ಆಡಿ audi
English summary
All-New Audi A3 Sedan Unveiled Globally. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X