ಯುರೋಪ್ ಮಾರುಕಟ್ಟೆಯಲ್ಲಿನ ಇ-ಟ್ರಾನ್ ಕಾರು ಮಾರಾಟದಲ್ಲಿ ಆಡಿ ಹೊಸ ದಾಖಲೆ
ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಕಠಿಣ ನಿರ್ಬಂಧ ವಿಧಿಸಿರುವ ಪರಿಣಾಮ ಯುರೋಪ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ತೀವ್ರಗತಿಯ ಬೆಳವಣಿಗೆ ಕಾಣುತ್ತಿದ್ದು, ಆಡಿ ಕೂಡಾ ತನ್ನ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ.

2019ರ ಆರಂಭದಲ್ಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವ ಆಡಿ ಇ-ಟ್ರಾನ್ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮಾರಾಟಗೊಂಡಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು 2020ರ ಅವಧಿಯಲ್ಲಿ ಬೇಡಿಕೆ ಪಡೆದುಕೊಂಡಿದೆ. ಯುರೋಪ್ ಮಾರುಕಟ್ಟೆಯಲ್ಲಿ ಪ್ರಸ್ತುಕ ವರ್ಷದ ಹಣಕಾಸು ಅವಧಿಯಲ್ಲಿ ಒಟ್ಟು 17,641 ಯುನಿಟ್ ಮಾರಾಟಗೊಳ್ಳುವ ಮೂಲಕ ಬೆಸ್ಟ್ ಸೆಲ್ಲಿಂಗ್ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಸಾಂಪ್ರಾಯಿಕ ವಾಹನಗಳಿಂದ ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ನಿರ್ವಹಣೆಗಿಂತಲೂ ಅತಿ ಸುಲಭವಾಗಿರುವ ಎಲೆಕ್ಟ್ರಿಕ್ ವಾಹನಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಐಸ್‌ಲ್ಯಾಂಡ್‌ನಲ್ಲಿ ಈ ವರ್ಷದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಪ್ರತಿಶತ 93ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ಇ-ಟ್ರಾನ್ ಕಾರು ನಾರ್ವೆಯಲ್ಲಿ ಶೇ. 92ರಷ್ಟು, ಸ್ವಿಡನ್‌ನಲ್ಲಿ ಶೇ. 12ರಷ್ಟು ಮಾರಾಟ ಪಾಲನ್ನು ತನ್ನದಾಗಿಸಿಕೊಂಡಿದೆ.

ಇ-ಟ್ರಾನ್ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಳ್ಳುತ್ತಿದ್ದು, ಅಮೆರಿಕದಲ್ಲೂ ಟೆಸ್ಲಾ ಕಾರುಗಳಿಗೂ ಉತ್ತಮ ಪೈಪೋಟಿ ನೀಡುವ ಕಳೆದ ವರ್ಷಕ್ಕಿಂತ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ.

ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿರುವ ಇ-ಟ್ರಾನ್ ಕಾರು ಈಗಾಗಲೇ ಪ್ರದರ್ಶನಗೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಈ ವರ್ಷದ ಮಾರ್ಚ್ ನಂತರ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕರೋನಾ ವೈರಸ್ ಪರಿಣಾಮ ಮುಂದೂಡಿಕೆ ಮಾಡಲಾಗಿದೆ.

ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 95kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಪ್ರತಿ ಚಾರ್ಜ್‌ಗೆ 430ಕಿ.ಮೀ ಅಧಿಕ ಮೈಲೇಜ್ ಹಿಂದಿರುಗಿಸುತ್ತದೆ.
MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಈ ಮೂಲಕ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

4.9-ಮೀಟರ್ ಉದ್ದವಿರುವ ಇ-ಟ್ರಾನ್ ಕಾರು ಸದ್ಯ ಮಾರಾಟವಾಗುತ್ತಿರುವ ಕ್ಯೂ5 ಮತ್ತು ಕ್ಯೂ7 ಕಾರುಗಳಿಂತಲೂ ಉತ್ತಮ ಒಳವಿನ್ಯಾಸವನ್ನು ಹೊಂದಿದ್ದು, 5-ಸೀಟರ್ ಆಸನ ಸೌಲಭ್ಯದೊಂದಿಗೆ 660-ಲೀಟರ್ ಸಾಮಾರ್ಥ್ಯದ ಬೂಟ್ ಸ್ಪೆಸ್ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲಿ ಬಿಡುಗಡೆಯಾಗಲಿರುವ ಇ-ಟ್ರಾನ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 90 ಲಕ್ಷದಿಂದ ರೂ. 1.10 ಕೋಟಿ ಇರಬಹುದೆಂದು ಅಂದಾಜಿಸಲಾಗಿದ್ದು, ಇದೇ ವರ್ಷದ ಕೊನೆಯಲ್ಲಿ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.


Click it and Unblock the Notifications








