ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಕರೋನಾ ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕರೋನಾ ವಾರಿಯರ್ಸ್'ಗೆ ಗೌರವ ಸೂಚಿಸುವುದಕ್ಕಾಗಿ ಹೇಳುವುದಕ್ಕಾಗಿ 'ಕೋವಿಡ್ -19 ವಾರಿಯರ್ಸ್‌ಗೆ ಸೆಲ್ಯೂಟ್' ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ. ಈ ಅಭಿಯಾನದ ಭಾಗವಾಗಿ ಕರೋನಾ ವಾರಿಯರ್ಸ್ ಆಡಿ ಕಾರುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಉಚಿತ ಸರ್ವಿಸ್ ನೀಡುತ್ತಾರೆ.

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಕರೋನಾ ವಾರಿಯರ್ಸ್‍ಗೆ ಸಲಾಂ ಹೇಳುವ ಅಭಿಯಾನ ಪ್ರಯುಕ್ತ ಕರೋನಾ ವಾರಿಯರ್ಸ್ ಅವರಿಗೆ ಸೇರಿದ ಆಡಿ ಕಾರುಗಳನ್ನು ಕಂಪನಿಯ ನೌಕರರು ಕಾರುಗಳ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಸಂಪೂರ್ಣವಾಗಿ ಸ್ವಚ್ಚಗೊಳಿಸುತ್ತಾರೆ. ಅಲ್ಲದೇ ಕಾರಿನ ಸಾಮಾನ್ಯ ಪರಿಶೀಲನೆಯನ್ನು ನಡೆಸುತ್ತಾರೆ. ಇದರೊಂದಿಗೆ ಉಚಿತವಾಗಿ ಪಿಕ್-ಅಪ್ ಮತ್ತು ಡ್ರಾಪ್ ಸೇವೆಗಳು ಕೂಡ ನೀಡುತ್ತಾರೆ.

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಈ ಅಭಿಯಾನದ ಕುರಿತು ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಅವರು ಮಾತನಾಡಿ, ನಾವು ಒಂದು ದೊಡ್ಡ ಮಹಮಾರಿಯ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ಅಲ್ಲದೇ ನಮಗಾಗಿ ಕರೋನಾ ವಿರುದ್ದ ಹೋರಾಟ ಮಾಡುತ್ತೀರುವ ದೇಶಾದ್ಯಂತ ಇರುವ ಆಡಿ ಗ್ರಾಹಕರಾಗಿರುವ ಕರೋನಾ ವಾರಿಯರ್ಸ್ ಅವರಿಗೆ ಗೌರವವನ್ನು ಸಲ್ಲಿಸಲು ಈ ವಿಶೇಷ ಸೇವೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

MOST READ: ಬಹಿರಂಗವಾಯ್ತು ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮಾಹಿತಿ

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಕರೋನಾ ವೈರಸ್ ಭೀತಿಯಿಂದಾಗಿ ಎಲ್ಲಾ ಕಾರು ಉತ್ಪಾದನಾ ಕಂಪನಿಯು ತಮ್ಮ ಗ್ರಾಹಕರ ಕಾರಿನ ವಾರಂಟಿ ಅವಧಿಯನ್ನು ವಿಸ್ತರಿಸಿದೆ ಮತ್ತು ಉಚಿತ ಸರ್ವಿಸ್ ಅನ್ನು ನೀಡಿದೆ.

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಎಲ್ಲಾ ಆಡಿ ಗ್ರಾಹಕರು ಈ ಸೇವೆಗಳನ್ನು ಪಡೆಯಬಹುದು. ಆಡಿ ಕಂಪನಿಯು #ಆಡಿ ಟೊಗೆದರ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಾವು ಕೂಡ ಗ್ರಾಹಕರ ಜೊತೆ ಇದ್ದೇವೆ ಎಂದು ವಿಶ್ವಾಸ ಮೂಡಿಸಿದೆ.

MOST READ: ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಜರ್ಮನ್ ಮೂಲದ ಕಾರು ತಯಾರಕ ಕಂಪನಿ ಆಡಿ ಎರಡನೇ ತಲೆಮಾರಿ ಎ3 ಸೆಡಾನ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಆಡಿ ಎ3 ಸೆಡಾನ್ ಕಾರಿನಲ್ಲಿ ಎ3 ಸ್ಪೋರ್ಟ್‌ಬ್ಯಾಕ್‌ ಮಾದರಿಯಲ್ಲಿ ಇರುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಹೊಸ ಆಡಿ ಎ3 ಸೆಡಾನ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಮತ್ತು ಇಂಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಆಡಿ ಎ3 ಸೆಡಾನ್ ಕಂಪನಿಯ ಎಂಕ್ಯೂಬಿ ಇವೊ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಿಂದಿನ ಮಾದರಿಗಿಂತ ಹೊಸ ಆಡಿ ಎ3 ಸೆಡಾನ್ ಹೆಚ್ಚು ಹಗುರವಾಗಿದೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಹೊಸ ಆಡಿ ಎ3 ಸೆಡಾನ್ ಕಾರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ 40 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 10 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. ಆದರೆ ಬೂಟ್ ಸ್ಪೇಸ್ ಹಿಂದಿನ ಮಾದರಿಯಂತೆ 425 ಲೀಟರ್ ಹೊಂದಿದೆ. ಬೂಟ್ ಸ್ಪೇಸ್ ನಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ.

ಕರೋನಾ ವಾರಿಯರ್ಸ್ ಗೌರವಾರ್ಥ ಉಚಿತ ಸರ್ವಿಸ್ ನೀಡಲಿದೆ ಆಡಿ

ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಕರೋನಾ ವಾರಿಯರ್ಸ್ ಸೇವೆಯು ಮರೆಯಲಾಗದಂತಹದು. ಹಗಲಿರುಳು ದುಡಿಯುತ್ತಿರುವ ಕರೋನಾ ವಾರಿಯರ್ಸ್ ಗಾಗಿ ಗೌರವ ಸಲ್ಲಿಸಲು ಆಡಿ ಕಂಪನಿಯು ಈ ಹೊಸ ಅಭಿಯಾನವನ್ನು ಕೈಗೊಂಡಿದೆ.

More from DriveSpark

Article Published On: Monday, May 4, 2020, 18:28 [IST]
English summary
Audi India Salutes COVID-19 Frontline Warriors. Read in Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+