ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ತನ್ನ ಪ್ರಮುಖ ಎಸ್‍‍ಯು‍ವಿ ಕ್ಯೂ8 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕ್ಯೂ8 ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.33 ಕೋಟಿಗಳಾಗಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಹೊಸ ಆಡಿ ಕ್ಯೂ8, ಕಂಪನಿಯ ಪೋರ್ಟ್ಪೋಲಿಯೊದಲ್ಲಿ ಕ್ಯೂ7 ಎಸ್‍‍ಯುವಿಗಿಂತ ಮೇಲೆನ ಸ್ಥಾನದಲ್ಲಿರುತ್ತದೆ. ಕ್ಯೂ7 ಎಸ್‍ಯುವಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ಸ್‍‍ಗಳನ್ನು ಹೊಂದಿದೆ. ಹೊಸ ಕ್ಯೂ8 ಮುಂಭಾಗದಲ್ಲಿ ಆಕರ್ಷಕ ದೊಡ್ಡ ಗ್ರಿಲ್ ಅನ್ನು ಹೊಂದಿದ್ದು, ಇದರ ಸುತ್ತಲೂ ಸಿಲ್ವರ್ ಅಸೆಂಟ್‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಇನ್ನೂ ಪೂರ್ಣ ಪ್ರಮಾಣದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಬ್ರ್ಯಾಂಡ್‍‍ನ ಮ್ಯಾಟ್ರಿಕ್ಸ್ ಎಲ್‍ಇಡಿ ಯುನಿ‍‍ಟ್‍ಗಳಿವೆ. ಜೊತೆಗೆ 21 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಕ್ಯೂ8 ಎಸ್‍ಯು‍ವಿಯು 3.0 ಬಿಎಸ್-6 ಟಿಎಫ್‍‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಕ್ಯೂ 8 ಎಸ್‍ಯುವಿಯು ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಕ್ಯೂ8 ಎಸ್‍‍ಯುವಿಯು ಗಂಟೆಗೆ 250 ಕಿ.ಮೀ ಸ್ಪೀಡ್‍‍ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಕ್ಯೂ8 ಎಸ್‍‍ಯು‍ವಿಯು ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ರೇರ್ ವೀವ್ ಮಿರರ್, ಡಿಜಿಟಲ್ ಕಂಪಾಸ್, ಪನಾರೋಮಿಕ್ ಸನ್‍‍ರೂಫ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಇನ್ನೂ ಇನ್ಫೋಟೇನ್‍‍ಮೆಂಟ್ ಮೋಡ್‍‍ಗಳಲ್ಲಿ ಕಾರ್ಯನಿರ್ವಹಿಸುವ 12.3 ಇಂಚಿನ ಡಿಜಿ‍‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನಿತರ ಅತ್ಯಾಧುನಿಕ ಫೀಚರ್ಸ್‍‍ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಕ್ಯೂ8ನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಆರು - ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಆಡಿ ಕಾರುಗಳಿಗೆ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಲು ಕ್ಯೂ8 ಸಹಾಯ ಮಾಡಬಹುದು.

ಬಿಡುಗಡೆಯಾಯ್ತು ಹೊಸ ಆಡಿ ಕ್ಯೂ8 ಎಸ್‍‍ಯುವಿ

ಕ್ಯೂ8 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್, ಪೋರ್ಷೆ ಕೇನ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Wednesday, January 15, 2020, 16:31 [IST]
English summary
Audi Q8 SUV Launched In India At Rs 1.33 Crore: The Latest Flagship SUV From The German Brand. Raed in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+