ಆಡಿ ಆರ್‌ಎಸ್ ಕ್ಯೂ8 ಕಾರು ಖರೀದಿಗಾಗಿ ರೂ.15 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಶುರು
ಆಡಿ ಕಂಪನಿಯು ಭಾರತದಲ್ಲಿ ಈಗಾಗಲೇ ಕ್ಯೂ8 ಫ್ಲ್ಯಾಗ್‌ಶಿಫ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ಫರ್ಪಾಮೆನ್ಸ್ ಪ್ರಿಯರಿಗಾಗಿ ಹೈ ಎಂಡ್ ಮಾದರಿಯಾದ ಆರ್‌ಎಸ್ ಕ್ಯೂ8 ಮಾದರಿಯನ್ನು ಸಹ ಇದೇ ತಿಂಗಳು 27ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಆಡಿ ಹೊಸ ಆರ್‌ಎಸ್ ಕ್ಯೂ8 ಮಾದರಿಯು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೆ ಸ್ಟ್ಯಾಂಡರ್ಡ್ ಮಾದರಿಯಾದ ಕ್ಯೂ8 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಹೈ ಪರ್ಫಾಮೆನ್ಸ್ ಜೊತೆಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಆರ್‌ಎಸ್ ಕ್ಯೂ8 ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಟೀಸರ್ ಚಿತ್ರ ಬಿಡುಗಡೆ ಮಾಡುವ ಮೂಲಕ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆರ್‌ಎಸ್ ಕ್ಯೂ8 ಕಾರು ಖರೀದಿಗಾಗಿ ರೂ.15 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಶುರು ಮಾಡಲಾಗಿದ್ದು, ವರ್ಷಾಂತ್ಯದೊಳಗೆ ಹೊಸ ಕಾರು ವಿತರಣೆಗೆ ಮಾಡುವುದಾಗಿ ಆಡಿ ಕಂಪನಿಯು ಸುಳಿವು ನೀಡಿದೆ.

ಇನ್ನು ಕೇಂದ್ರ ಸರ್ಕಾರವು 2018ರಲ್ಲಿ ಜಾರಿಗೆ ಬಂದಿದರುವ ಹೊಸ ಆಮದು ನೀತಿ ಅಡಿ ಆರ್‌ಎಸ್ ಕ್ಯೂ8 ಬಿಡುಗಡೆಗೆ ಸಿದ್ದವಾಗಿರುವ ಆಡಿ ಕಂಪನಿಯು ವಿವಿಧ ಮಾದರಿಯ ಹೈ ಎಂಡ್ ಕಾರುಗಳನ್ನು ಮಾತ್ರವಲ್ಲದೆ ಎಂಟ್ರಿ ಲೆವಲ್ ಕಾರುಗಳನ್ನು ಸಹ ಬಿಡುಗಡೆ ಮಾಡಲಿದೆ.

ಹೊಸ ಆಮದು ನೀತಿಯು ವಿದೇಶಿ ಆಟೋ ಉತ್ಪಾದನಾ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ವಾಹನ ಕಂಪನಿಗಳು ಭಾರತಕ್ಕೆ ವಾರ್ಷಿಕವಾಗಿ 2,500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಹೊಸ ಆಮದು ನೀತಿಯು ವಿದೇಶಿ ಆಟೋ ಉತ್ಪಾದನಾ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ವಾಹನ ಕಂಪನಿಗಳು ಭಾರತಕ್ಕೆ ವಾರ್ಷಿಕವಾಗಿ 2,500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಲ್ಯಾಂಬೋರ್ಗಿನಿ ಉರಸ್ ಎಸ್‌ಯುವಿ ಕಾರು ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿರುವ ಹೊಸ ಆರ್‌ಎಸ್ ಕ್ಯೂ8 ಕಾರು 4.0-ಲೀಟರ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಈ ಮೂಲಕ 600-ಬಿಎಚ್‌ಪಿ ಮತ್ತು 800-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಆರ್‌ಎಸ್ ಕ್ಯೂ8 ಕಾರು ಕೇವಲ 3.8-ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಇದರೊಂದಿಗೆ 13.7 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಹೊಸ ಕಾರು ಪ್ರತಿ ಗಂಟೆಗೆ 250ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಡೈನಾಮಿಕ್ ಪ್ಯಾಕೇಜ್ ಅಳವಡಿಕೆಯ ಮೂಲಕ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿಗಂಟೆಗೆ 250ಕಿ.ಮೀ ನಿಂದ 305ಕಿ.ಮೀ ವೇಗ ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸದ್ಯ ಮಾರುಕಟ್ಟೆಯಲ್ಲಿರುವ ಸ್ಟ್ಯಾಂಡರ್ಡ್ ಕ್ಯೂ8 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.33 ಕೋಟಿ ಬೆಲೆ ಹೊಂದಿದ್ದು, ಪರ್ಫಾಮೆನ್ಸ್ ಜೊತೆಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿರುವ ಆರ್‌ಎಸ್ ಕ್ಯೂ8 ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.75 ಕೋಟಿಯಿಂದ ರೂ. 1.90 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








