ದುಬಾರಿ ಬೆಲೆಯ ಆಡಿ ಆರ್‌ಎಸ್ ಕ್ಯೂ8 ಎಸ್‌ಯುವಿ ಭಾರತದಲ್ಲಿ ಬಿಡುಗಡೆ
ಜರ್ಮನ್ ಕಾರು ಉತ್ಪಾದನಾ ಕಂಪನಿಯಾದ ಆಡಿ ತನ್ನ ಜನಪ್ರಿಯ ಆರ್‌ಎಸ್ ಕ್ಯೂ8 ಎಸ್‌ಯುವಿ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಕ್ಯೂ8 ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹಲವು ಕಾರು ಮಾದರಿಗಳಲ್ಲಿ ಪರ್ಫಾಮೆನ್ಸ್ ಮಾದರಿಯಾದ ಆರ್‌ಎಸ್ ಮಾದರಿಗಳನ್ನು ಪರಿಚಯಿಸುತ್ತಿರುವ ಆಡಿ ಕಂಪನಿಯು ಕ್ಯೂ8 ಎಸ್ ಮಾದರಿಯಲ್ಲೂ ಹೊಸದಾಗಿ ಆರ್‌ಎಸ್ ಮಾದರಿಯನ್ನು ಸೇರ್ಪಡೆಗೊಳಿಸಿದೆ. ಭಾರತವನ್ನು ಹೊರತುಪಡಿಸಿ ಕಳೆದ ವರ್ಷವೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದ ಆರ್‌ಎಸ್ ಕ್ಯೂ8 ಮಾದರಿಯು ಇದೀಗ ಭಾರತದಲ್ಲೂ ಬಿಡುಗಡೆಗೊಂಡಿದೆ.

ಹೊಸ ಆರ್‌ಎಸ್ ಕ್ಯೂ8 ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 2.07 ಕೋಟಿ ಬೆಲೆ ಹೊಂದಿದ್ದು, ಸ್ಟ್ಯಾಂಡರ್ಡ್ ಕ್ಯೂ8 ಎಸ್‌ಯುವಿ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.33 ಕೋಟಿ ಬೆಲೆ ಹೊಂದಿದೆ.

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಆರ್‌ಎಸ್ ಆವೃತ್ತಿಯು ಹೆಚ್ಚುವರಿಯಾಗಿ ರೂ. 74 ಲಕ್ಷ ಬೆಲೆ ಹೊಂದಿದ್ದು, ಪರ್ಫಾಮೆನ್ಸ್ ಮಾದರಿಗೆ ಅನುಗುಣವಾಗಿ ಹಲವಾರು ವಿಶೇಷತೆಗಳನ್ನು ಹೊಂದಿದೆ. ಭಾರತದಲ್ಲಿ ಲ್ಯಾಂಬೋರ್ಗಿನಿ ಉರಸ್ ಎಸ್‌ಯುವಿ, ಬೆಂಟ್ಲಿ ಬೆನ್‌ಟೈಗಾ ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಆರ್‌ಎಸ್ ಕ್ಯೂ8 ಕಾರು ಮಾದರಿಯು 4.0-ಲೀಟರ್ ಟ್ವಿನ್-ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 8-ಸ್ಪೀಡ್ ಟ್ರಿಪ್‌ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್ ಆಯ್ಕೆಯೊಂದಿಗೆ 600-ಬಿಎಚ್‌ಪಿ ಮತ್ತು 800-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹೊಸ ಕಾರಿನಲ್ಲಿ ಕ್ವಾಟ್ರೊ ಟೆಕ್ನಾಲಜಿ ಸೌಲಭ್ಯವಿದ್ದು, ಇದು ನಾಲ್ಕು ಚಕ್ರಗಳಿಗೆ ಶಕ್ತಿ ಪೂರೈಕೆ ವೈಶಿಷ್ಟ್ಯತೆ ಹೊಂದಿದೆ.

ಈ ಮೂಲಕ ಕೇವಲ 3.8-ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುವ ಆರ್‌ಎಸ್ ಕ್ಯೂ8 ಮಾದರಿಯು 13.7 ಸೆಕೆಂಡುಗಳಲ್ಲಿ 200 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ 250ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಇಂಧನ ದಕ್ಷತೆಯನ್ನು ಸುಧಾರಿಸಲು ಹೊಸ ಕಾರಿನಲ್ಲಿ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ತಾಂತ್ರಿಕವಾಗಿ ಹೊಸ ಕಾರಿನಲ್ಲಿ 250 ಕಿ.ಮೀ ಟಾಪ್ ಸ್ಪೀಡ್ ಮಾದರಿಯಾಗಿದ್ದರೂ ಡೈನಾಮಿಕ್ ಪ್ಯಾಕೇಜ್ ಅಳವಡಿಕೆಯ ಮೂಲಕ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿಗಂಟೆಗೆ 250ಕಿ.ಮೀ ನಿಂದ 305ಕಿ.ಮೀ ವೇಗ ಹೆಚ್ಚಿಸಿಕೊಳ್ಳಬಹುದಾದ ಆಯ್ಕೆಯನ್ನು ಕೂಡಾ ಹೊಂದಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಹಾಗೆಯೇ ಹೊಸ ಕಾರಿನಲ್ಲಿ ಸ್ಟೋರ್ಟಿ ಮಾದರಿಯ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವು ಫೀಚರ್ಸ್‌ಗಳನ್ನು ನೀಡಲಾಗಿದ್ದು, ವರ್ಚುವಲ್ ಕಾಕ್‌ಪಿಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪರ್ಸಲೈಜ್ಡ್ ಡ್ರೈವ್ ಸೆಟಿಂಗ್, 23-ಇಂಚಿನ ಫೈವ್ ಸ್ಪೋಕ್ ಡೈಮಂಡ್ ಕಟ್-ಅಲಾಯ್ ವೀಲ್ಹ್‌ಗಳು ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳಿವೆ.

ಇನ್ನು ಕೇಂದ್ರ ಸರ್ಕಾರವು 2018ರಲ್ಲಿ ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿ ಆರ್‌ಎಸ್ ಕ್ಯೂ8 ಬಿಡುಗಡೆ ಮಾಡಿರುವ ಆಡಿ ಕಂಪನಿಯು ವಿವಿಧ ಮಾದರಿಯ ಹೈ ಎಂಡ್ ಕಾರುಗಳನ್ನು ಮಾತ್ರವಲ್ಲದೆ ಎಂಟ್ರಿ ಲೆವಲ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಆಮದು ನೀತಿಯು ವಿದೇಶಿ ಆಟೋ ಉತ್ಪಾದನಾ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ವಾಹನ ಕಂಪನಿಗಳು ಭಾರತಕ್ಕೆ ವಾರ್ಷಿಕವಾಗಿ 2,500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಂಡು ಮಾರಾಟ ಮಾಡುವ ಅವಕಾಶವನ್ನು ನೀಡಲಾಗಿದೆ.


Click it and Unblock the Notifications








