ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ 2021ರ ಆರ್8 ಪ್ಯಾಂಥರ್ ಎಡಿಷನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಆಡಿ ಆರ್8 ಪ್ಯಾಂಥರ್ ಎಡಿಷನ್ ವಿನ್ಯಾಸ ನವೀಕರಣಗಳು, ಹೊಸ ಫೀಚರ್ ಗಳು ಮತ್ತು ವಿಶೇಷವಾದ ಬಣ್ಣದಲ್ಲಿ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಈ ಹೊಸ ಸ್ಪೆಷಲ್ ಎಡಿಷನ್ ಆಡಿ ಆರ್8 ಪ್ಯಾಂಥರ್ ಕೇವಲ 30 ಯುನಿಟ್ ಗಳಿಗೆ ಸೀಮಿತವಾಗಿರುತ್ತದೆ. ಆಡಿ ಆರ್8 ಸ್ಪೆಷಲ್ ಎಡಿಷನ್ ಆದ ಆಡಿ ಆರ್8 ಪ್ಯಾಂಥರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಪೋರ್ಟ್ಸ್ ಕಾರು ವಿಶೇಷವಾದ ಬ್ಲ್ಯಾಕ್ ಬಣ್ಣದೊಂದಿಗೆ ಬರಲಿದ್ದು, ಇದನ್ನು ಕಾರು ತಯಾರಕರು ‘ಪ್ಯಾಂಥರ್ ಬ್ಲ್ಯಾಕ್ ಕ್ರಿಸ್ಟಲ್ ಎಫೆಕ್ಟ್' ಎಂದು ಕರೆಯುತ್ತಾರೆ. ಹೊಸ ಬಣ್ಣದ ಹೊರತಾಗಿ ಆಡಿ ಆರ್8 ಪ್ಯಾಂಥರ್ ಎಡಿಷನ್ ಹೊರಭಾಗದಲ್ಲಿ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಇದು ಆರ್8 ಪ್ಯಾಂಥರ್ ಎಡಿಷನ್ ಅನ್ನು ಹೆಚ್ಚು ಸ್ಪೋರ್ಟಿಯಾಗಿ ಕಾಣುವಂತೆ ಮಾಡಿದೆ.

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಇನ್ನು ಈ ಹೊಸ ಆಡಿ ಆರ್8 ಸ್ಪೆಷಲ್ ಎಡಿಷನ್ ನಲ್ಲಿ 20 ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಈ ಐಷಾರಾಮಿ ಆಡಿ ಆರ್8 ಪ್ಯಾಂಥರ್ ಎಡಿಷನ್ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈ ಸ್ಪೆಷಲ್ ಎಡಿಷನ್ ಇಂಟಿರಿಯರ್ ನಲ್ಲಿ ಕ್ರಿಮ್ಸನ್ ರೆಡ್ ಮತ್ತು ಬ್ಲ್ಯಾಕ್ ಕಲರ್ ಥೀಮ್‌ ಅನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಆಡಿ ತನ್ನ ಆರ್8 ಪ್ಯಾಂಥರ್ ಎಡಿಷನ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್, ಸ್ಟೀರಿಂಗ್ ವೀಲ್ ಮತ್ತು ಸೈಡ್ ಡೋರ್ ಪ್ಯಾನೆಲ್‌ಗಳು ರೆಡ್ ಕಾಂಟ್ರಾಸ್ಟ್ ಸ್ತೀಚಿಂಗ್ ನೊಂದಿಗೆ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಈ ಕಾರಿನ ಸೀಟುಗಳು ಕ್ರಿಮ್ಸನ್ ರೆಡ್ ನಪ್ಪಾ ಲೆದರ್ ನಿಂದ ಕೂಡಿದೆ.

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಆಡಿ ಆರ್8 ಪ್ಯಾಂಥರ್ ಎಡಿಷನ್ ಕ್ಯಾಬಿನ್ ಕಾರ್ಬನ್-ಫೈಬರ್ ಮತ್ತು ಗ್ಲೋಷ್ ಬ್ಲ್ಯಾಕ್ ಎಲೆಮೆಂಟ್ ಅನ್ನು ಹೊಂದಿದೆ. ಆಡಿ ಆರ್8 ಪ್ಯಾಂಥರ್ ಎಡಿಷನ್ ನಲ್ಲಿ ವಿಶೇಷ ನವೀಕರಣಗಳ ಹೊರತಾಗಿ, ಆರ್8 ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತಹ ಎಲ್ಲಾ ಇತರ ಫೀಚರ್ ಗಳನ್ನು ಸಹ ಇದರಲ್ಲಿ ಅದೇ ರೀತಿ ಮುಂದಕ್ಕೆ ಸಾಗಿಸಿದ್ದಾರೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಇದರಲ್ಲಿ ಡೋರ್ ಸಿಲ್ಗಳು, ಕಾರ್ಬನ್-ಫೈಬರ್ ಪ್ಯಾಕೇಜ್, ಹೊರಭಾಗದಲ್ಲಿ ಎಲ್ಇಡಿ ಲೈಟಿಂಗ್, 13-ಸ್ಪೀಕರ್ ಬ್ಯಾಂಗ್, ಒಲುಫ್ಸೆನ್ ಸೌಂಡ್ ಸಿಸ್ಟಂ ಮತ್ತು ಇತರ ಕೆಲವು ಐಷಾರಮಿ ಫೀಚರ್ ಗಳು ಒಳಗೊಂಡಿದೆ.

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಆಡಿ ಆರ್8 ಸ್ಪೆಷಲ್ ಎಡಿಷನ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಸ್ಟ್ಯಾಂಡರ್ಡ್ ಆಡಿ ಆರ್8 ಮಾದರಿಯಲ್ಲಿರುವಂತಹ 5.2-ಲೀಟರ್ ವಿ10 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಈ ಎಂಜಿನ್ 525 ಬಿಹೆಚ್‍ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇದು ಹಿಂದಿನ ಚಕ್ರಗಳಿಗೆ ಮಾತ್ರ ಪವರ್ ಅನ್ನು ಕಳುಹಿಸುತ್ತದೆ.

ಅನಾವರಣವಾಯ್ತು 2021ರ ಆಡಿ ಆರ್8 ಪ್ಯಾಂಥರ್ ಎಡಿಷನ್

ಇನ್ನು ಈ ಹೊಸ ಆಡಿ ಆರ್8 ಸ್ಪೆಷಲ್ ಎಡಿಷನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಈ ಸ್ಪೆಷಲ್ ಎಡಿಷನ್ ಕೇವಲ 3.6 ಸೆಕೆಂಡುಗಳಲ್ಲಿ 0 - 100 ಕಿಮೀ ಸ್ಪೀಡ್ ಅನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇನ್ನು ಆರ್8 ಪ್ಯಾಂಥರ್ ಎಡಿಷನ್ ಗಂಟೆಗೆ 323 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

More from DriveSpark

Article Published On: Saturday, December 5, 2020, 14:37 [IST]
English summary
2021 Audi R8 Panther Edition Unveiled Internationally. Read In Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+