ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ಬಿಎಂಡಬ್ಲ್ಯು ಇಂಡಿಯಾ ಸೋಮವಾರ ಹೊಸ ಲೋಗೊವನ್ನು ಬಿಡುಗಡೆಗೊಳಿಸಿದೆ. ಈ ಹೊಸ ಲೋಗೋವನ್ನು ಕಂಪನಿಯ ಎಲೆಕ್ಟ್ರಿಕ್ ಯುನಿಟ್ ಆದ ಬಿಎಂಡಬ್ಲ್ಯು ಐ ಹಾಗೂ ಬಿಎಂಡಬ್ಲ್ಯು ಎಂ ಪರ್ಫಾರ್ಮೆನ್ಸ್ ಕಾರುಗಳಲ್ಲಿ ಅಳವಡಿಸಲಾಗುವುದು.

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ಹೊಸ ಯುಗದ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಈ ಹೊಸ ಲೋಗೊವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಹೊಸ ಲೋಗೊ ಬಿಎಂಡಬ್ಲ್ಯು ಕಂಪನಿಗೆ ಹೊಸ ಗುರುತನ್ನು ನೀಡಲಿದೆ. ಹೊಸ ಲೋಗೋದೊಂದಿಗೆ ಕಂಪನಿಯು ಎಲ್ಲಾ ರೀತಿಯ ಆಲೋಚನೆಗಳನ್ನು ತೆರೆಯಲು ಹಾಗೂ ಭವಿಷ್ಯದಲ್ಲಿ ಕಾರು ಚಾಲನಾ ಅನುಭವವನ್ನು ಸುಧಾರಿಸಲು ಸಾಧ್ಯವಾಗಲಿದೆ ಎಂದು ಬಿಎಂಡಬ್ಲ್ಯು ಹೇಳಿದೆ.

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನವನ್ನು ಡಿಜಿಟಲೀಕರಣಗೊಳಿಸಲು ಹಾಗೂ ಅಳವಡಿಸಿಕೊಳ್ಳಲು ಕಂಪನಿಯು ಉದ್ದೇಶಿಸಿದೆ. ಬಿಎಂಡಬ್ಲ್ಯು ತನ್ನ 2021ರ 5-ಸೀರೀಸ್ ಅಲ್ಟಿಮೇಟ್ ಪರ್ಫಾರ್ಮೆನ್ಸ್ ಕಾರ್ ಆದ ಎಫ್ 90 ಎಂ 5 ಎಲ್‌ಸಿಐಯನ್ನು ಅನಾವರಣಗೊಳಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ಹೊಸ 2021 ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ ಪರ್ಫಾಮೆನ್ಸ್‌ಗೆ ಸಂಬಂಧಿಸಿದ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಸೂಪರ್ ಸಲೂನ್ ಎಂದು ಕರೆಯಲಾಗುವ ಈ ಪರ್ಫಾಮೆನ್ಸ್ ಕಾರ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಕಾಂಪಿಟಿಷನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಕಾರಿನ ಆರಂಭಿಕ ಬೆಲೆ ರೂ.1.04 ಕೋಟಿಗಳಾಗಿದೆ.

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ವಿಕ್ರಮ್ ಪವಾಹ್ ಅವರನ್ನು ಬಿಎಂಡಬ್ಲ್ಯು ಇಂಡಿಯಾ ಗ್ರೂಪ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಕ್ರಮ್ ಪವಾಹ್ ಅವರು ಆಗಸ್ಟ್ 1ರಂದು ಬಿಎಂಡಬ್ಲ್ಯು ಇಂಡಿಯಾ ಗ್ರೂಪ್ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ವಿಕ್ರಮ್ ಪವಾಹ್ ಅವರನ್ನು 2018ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಕಂಪನಿಯು ತನ್ನ 10,000 ಗುತ್ತಿಗೆ ನೌಕರರನ್ನು ವಜಾಗೊಳಿಸಲು ಮುಂದಾಗಿದೆ.

ಹೊಸ ಲೋಗೋ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಇಂಡಿಯಾ

ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 10,000 ಉದ್ಯೋಗಿಗಳ ಗುತ್ತಿಗೆಯನ್ನು ನವೀಕರಿಸುತ್ತಿಲ್ಲ. ಇದು ಈ ನೌಕರರ ಕೆಲಸಕ್ಕೆ ಸಂಚಕಾರವನ್ನು ತಂದಿದೆ. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ.

Most Read Articles

Kannada
English summary
BMW India launches new brand logo. Read in Kannada.
Story first published: Monday, June 22, 2020, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X