ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿ
ಹೋಂಡಾ ಇಂಡಿಯಾ ಕಂಪನಿಯು ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೋಂಡಾ ಕಂಪನಿಯು ಈ ಹೋಂಡಾ ಸಿವಿಕ್ ಕಾರನ್ನು ಮುಂದಿನ ವಾರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಹೋಂಡಾ ಸಿವಿಕ್ ಕಾರನ್ನು 2018ರ ಆಟೋ ಎಕ್ಸ್ ಫೋದಲ್ಲಿ ಪ್ರದರ್ಶಿಸಲಾಗಿತ್ತು. ಹೊಸ ಹೊಂಡಾ ಡೀಸೆಲ್ ಆವೃತ್ತಿಯಲ್ಲಿ 1.6-ಲೀಟರ್ ಐ-ಡಿಟಿಇಸಿ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೋಂಡಾ ಸಿವಿಕ್ ಕಾರಿನಲ್ಲಿ ಯಾವುದೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿಲ್ಲ. ಹೊಸ ಹೋಂಡಾ ಸಿವಿಕ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಈಗಾಗಲೇ ಹೋಂಡಾ ಸಿವಿಕ್ ಕಾರಿಗೆ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಹೊಸ ಸಿವಿಕ್ ಕಾರಿನ ಮುಂಭಾಗದಲ್ಲಿ ಕೋನೀಯ ಬಂಪರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಗಳನ್ನು ಹೊಂದಿದೆ. ಫ್ರಂಟ್ ಎಂಡ್‌ನೊಂದಿಗೆ ಗಮನಾರ್ಹವಾದ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಕಾರಿನ ಹಿಂಭಾಗದಲ್ಲಿ ಸ್ಟೈಲಿಂಗ್ ಹೊಸ ಸಿ-ಆಕಾರದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಫಾಸ್ಟ್‌ಬ್ಯಾಕ್ ರೂಫ್‌ಲೈನ್ ಅನ್ನು ಹೊಂದಿದೆ.ಹೊಸ ಸಿವಿಕ್ ಸ್ಟೈಲಿಶ್ ಡ್ಯುಯಲ್ ಟೋನ್ 5-ಸ್ಪೋಕ್ 17-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಪ್ರಸ್ತುತ ಮಾರುಕಟ್ತೆಯಲ್ಲಿರುವ ಸಿವಿಕ್ ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಪ್ರಸ್ತುತ ಮಾದರಿಯ ಹೋಂಡಾ ಸಿವಿಕ್ ಕಾರಿನ ಡೀಸೆಲ್ ಆವೃತ್ತಿಯ ಬೆಲೆಯು ರೂ.20.5 ಲಕ್ಷ ಗಳಾಗಿದೆ. ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯ ಬೆಲೆಯು ತುಸು ದುಬಾರಿಯಾಗಿರಲಿದೆ.

ಯುರೋಪ್ ಮತ್ತು ಅಮೆರಿಕಾ ಮಾರುಕಟ್ಟೆಗಳಿಲ್ಲಿ ಸಿವಿಕ್ ಕಾರು ಉತ್ತಮ ಮಾರಾಟಾವಾಗುತ್ತಿದ್ದರೆ ತನ್ನ ತವರುಮನೆ ಜಪಾನ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ವರಧಿಗಳ ಪ್ರಕಾರ ಜಪಾನ್‌ನಲ್ಲಿ ಹೋಂಡಾ ಸಿವಿಕ್ ಕಾರಿನ ಜನಪ್ರಿಯತೆಯು ಕಡಿಮೆಯಾಗಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಜಪಾನ್ ನಲ್ಲಿ ಸಿವಿಕ್ ಕಾರಿನ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾದೆ. ಹೋಂಡಾ ಕಂಪನಿಯು 2010ರಲ್ಲಿ ತಾತ್ಕಾಲಿಕವಾಗಿ ಸಿವಿಕ್ ಕಾರನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೊಮೆ ಜಪಾನ್‌ನಲ್ಲಿ ಸ್ಥಗಿತಗೊಳಿಸಲಾಗಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಹೋಂಡಾ ಸಿವಿಕ್ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ವಿಯಾಗಿರುವುದರಿಂದ ಡೀಸೆಲ್ ಆವೃತ್ತಿಯಲ್ಲಿಯು ಹೋಂಡಾ ಸಿವಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಮುಂದಿನ ವಾರ ಈ ಹೋಂಡಾ ಸಿವಿಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications