ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಮೊದಲ ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದೀಗ ಇಸುಝು ತನ್ನ ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟ್ರಕ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಕಮರ್ಷಿಯಲ್ ವಾಹನ ವಿಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇಸುಝು ಕಂಪನಿಯ ಕಮರ್ಷಿಯಲ್ ಸರಣಿಯಲ್ಲಿರುವ ವಿವಿಧ ಮಾದರಿಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಇಸುಝು ತನ್ನ ವೆಬ್‌ಸೈಟ್‌ನಲ್ಲಿನ ಟೀಸರ್ ಚಿತ್ರದ ಜೊತೆಗೆ ಕಂಪನಿಯು ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್-ಅಪ್ ಅನ್ನು ಪ್ರದರ್ಶಿಸುವ ಹೊಸ ಟೀಸರ್ ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

1,710 ಕೆಜಿ ಹೊಂದಿರುವ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಲೋಡ್ ಸಾಮರ್ಥ್ಯವನ್ನು ಬದಲಾಯಿಸಲಾಗಿದೆ. ಟೀಸರ್ ವೀಡಿಯೋದಲ್ಲಿರುವುದು ಪರ್ಯಾಯವಾಗಿ ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ‘ಸೂಪರ್ ಸ್ಟ್ರಾಂಗ್' ಎಂಬ ಡಿ-ಮ್ಯಾಕ್ಸ್ ಪಿಕ್‌ಅಪ್‌ನ ಹೊಸ ರೂಪಾಂತರವಾಗಿರಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳು ಮತ್ತು ಟ್ವೀಕ್ಡ್ ಇಂಟೀರಿಯರ್‌ಗಳನ್ನು ಹೊರತುಪಡಿಸಿ ಬಿಎಸ್ 6 ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಹೊಸ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಮಾದರಿಯಲ್ಲಿ ಹಿಂದಿನ ಮಾದರಿಯಂತೆ 2.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಹೊಂದಿರಲಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಈ ಎಂಜಿನ್ 3600 ಆರ್‌ಪಿಎಂನಲ್ಲಿ 134 ಬಿಹೆಚ್‌ಪಿ ಪವರ್ ಮತ್ತು 1800 ಆರ್‌ಪಿಎಂ ಮತ್ತು 2800 ಆರ್‌ಪಿಎಂ ನಡುವೆ 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ನಲ್ಲಿ ಸಿಂಗಲ್ ಮತ್ತು ಡಬಲ್ ಕ್ಯಾಬ್ ರೂಪಾಂತರಗಳನ್ನು ಒಂದೆರಡು ಕಸ್ಟಮೈಸ್ ಆಯ್ಕೆಗಳೊಂದಿಗೆ ಹೊಂದಿತ್ತು. ಹೊಸ ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ನಲ್ಲಿಯು ಇದೇ ರೀತಿಯ ಸಂರಚನೆಗಳಲ್ಲಿಯೂ ನೀಡಲಾಗುತ್ತದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ಸೆಪ್ಟೆಂಬರ್‌ನಲ್ಲಿ ಬಿಎಸ್ 6 ಮಾದರಿಗಳನ್ನು ಡೀಲರುಗಳಿಗೆ ರವಾನಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರ, ಕಂಪನಿಯಿಂದ ಇದುವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಇಸುಝು ಕಂಪನಿಯು ಭಾರತದಲ್ಲಿ ಡಿ-ಮ್ಯಾಕ್ಸ್, ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಎಂಬ ಮೂರು ಮಾದರಿಗಳನ್ನು ನೀಡಿತು. ಡಿ-ಮ್ಯಾಕ್ಸ್ ವಾಣಿಜ್ಯ ಉದ್ದೇಶದ ಪಿಕ್-ಅಪ್ ಟ್ರಕ್ ಆಗಿದ್ದು, ಇದು ಒಂದೆರಡು ರೂಪಾಂತರಗಳಲ್ಲಿ ಲಭ್ಯವಿದೆ. ವಿ-ಕ್ರಾಸ್ ಖಾಸಗಿ ಬಳಕೆಗಾಗಿ ಮಾರಾಟವಾಗುವ ಪಿಕ್-ಅಪ್ ಟ್ರಕ್ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ.

ಇತ್ತೀಚೆಗೆ ಇಸುಝು ಮ್ಯಾಕ್ಸ್ ವಿ-ಕ್ರಾಸ್ ಬಿಎಸ್-6 ಮಾದರಿಯು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇಸುಝು ಕಂಪನಿಯ ಬಿಎಸ್-6 ಎಸ್‌ಯುವಿಗಳು ಮತ್ತು ಪಿಕಪ್ ಟ್ರಕ್‌ಗಳ ಸರಣಿಯ ಎಲ್ಲಾ ಮಾದರಿಗಳು ಭಾರತದಲ್ಲಿ ಈಗಗಾಲೇ ಬೇಡುಗಡೆಯಾಗಬೇಕಾಗಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಬಿಡುಗಡೆಯು ವಿಳಂಬವಾಗಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಟೀಸರ್ ವೀಡಿಯೋ ಬಿಡುಗಡೆ

ಇಸುಝು ತನ್ನ ಬಿಎಸ್-6 ಸರಣಿಯ ವಾಹನಗಳನ್ನು ಇನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಕಂಪನಿಯು ತನ್ನ ಸಾಲಿನಲ್ಲಿ ಪಿಕ್-ಅಪ್ ಮತ್ತು ಎಸ್‌ಯುವಿ ಮಾದರಿಯನ್ನು ಮಾತ್ರ ಹೊಂದಿದೆ, ಇದು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

Most Read Articles

Kannada
Read more on ಇಸುಝು isuzu
English summary
Isuzu D-Max BS6 Teased Ahead Of India Launch. Read In Kannada.
Story first published: Friday, October 9, 2020, 20:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X